
ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು ಇಂದು ಫೆಬ್ರವರಿ 1 ವಾಣಿಜ್ಯ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸಿವೆ. 19 ಕೆಜಿ ವಾಣಿಜ್ಯ ಬಳಕೆ ಎಲ್ ಪಿಜಿ ಗ್ಯಾಸ್ ಸಿಲಿಂಡರ್‌ಗಳ ದರ ಇಂದಿನಿಂದಲೇ ಜಾರಿಗೆ ಬರುವಂತೆ 7 ರೂಪಾಯಿಗಳಷ್ಟು ಕಡಿಮೆಯಾಗಿದೆ.
ರಾಜಧಾನಿ ದೆಹಲಿಯಲ್ಲಿ, 19 ಕೆಜಿ ವಾಣಿಜ್ಯ ಬಳಕೆ ಎಲ್ ಪಿಜಿ ಸಿಲಿಂಡರ್ ಚಿಲ್ಲರೆ ಮಾರಾಟ ಬೆಲೆ ಇಂದಿನಿಂದ 1,797 ರೂಪಾಯಿಗಳಾಗಿದೆ.
ಬೆಲೆಗಳು ಎಷ್ಟು ಕಡಿಮೆಯಾಗಿದೆ?
ಇಂಡಿಯನ್ ಆಯಿಲ್ ವೆಬ್‌ಸೈಟ್ ಪ್ರಕಾರ, ಫೆಬ್ರವರಿ 1 ರಿಂದ, ರಾಷ್ಟ್ರ ರಾಜಧಾನಿಯಲ್ಲಿ 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್‌ನ ಬೆಲೆ 1,804 ರೂಪಾಯಿಗಳಿಂದ 1,797 ರೂಪಾಯಿಗೆ ಇಳಿದಿದೆ. ಕೋಲ್ಕತ್ತಾದಲ್ಲಿ, ಎಲ್‌ಪಿಜಿ ಸಿಲಿಂಡರ್‌ನ ಬೆಲೆ 1,911 ರೂಪಾಯಿಗಳಿಂದ 1,907 ರೂಪಾಯಿಗೆ ಇಳಿದಿದೆ. ಮುಂಬೈನಲ್ಲಿ, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಈಗ 1,749.50 ರೂಪಾಯಿಗಳಿಗೆ ಲಭ್ಯವಿದೆ, ಚೆನ್ನೈನಲ್ಲಿ, ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಇಂದಿನಿಂದ 1,959.50 ರೂಪಾಯಿಗಳಾಗಿವೆ. ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಇಂದು 1,873.50 ರೂಪಾಯಿಗಳಾಗಿವೆ.
ಅಡುಗೆ ಅನಿಲ ಸಿಲಿಂಡರ್ ಬೆಲೆ
ಗೃಹೋಪಯೋಗಿ ಅಡುಗೆ ಅನಿಲ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದೆಹಲಿಯಲ್ಲಿ, 14 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಇನ್ನೂ ಹಳೆಯ ಬೆಲೆ 803 ರೂಪಾಯಿಗಳಲ್ಲಿ ಲಭ್ಯವಿದೆ. ಲಕ್ನೋದಲ್ಲಿ, ಈ ಅಡುಗೆ ಅನಿಲ ಸಿಲಿಂಡರ್‌ನ ಬೆಲೆ 840.50 ರೂಪಾಯಿಗಳು. ಮುಂಬೈನಲ್ಲಿ, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 802.50 ರೂ.ಗಳಾಗಿವೆ. ಚೆನ್ನೈನಲ್ಲಿ ಈ ಸಿಲಿಂಡರ್ ಬೆಲೆ 818.50 ರೂ.ಗಳಾಗಿದ್ದು, ಕೋಲ್ಕತ್ತಾದಲ್ಲಿ ಅಡುಗೆ ಅನಿಲ ಸಿಲಿಂಡರ್ ಬೆಲೆ 829 ರೂ.ಗಳಾಗಿದೆ.
Advertisement