5 ವರ್ಷಗಳ ಬಳಿಕ Repo rate ಕಡಿತಗೊಳಿಸಿದ RBI: ಗೃಹ, ವಾಹನ ಸಾಲ ಪಡೆಯುವವರಿಗೆ ಗುಡ್ ನ್ಯೂಸ್

ಹಣಕಾಸು ನೀತಿ ಚೌಕಟ್ಟನ್ನು ಪರಿಚಯಿಸಿದಾಗಿನಿಂದ ಸರಾಸರಿ ಹಣದುಬ್ಬರ ಕಡಿಮೆಯಾಗಿದೆ ಎಂದು RBI ಗವರ್ನರ್ ಸಂಜಯ್ ಮಲ್ಹೋತ್ರಾ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
5 ವರ್ಷಗಳ ಬಳಿಕ Repo rate ಕಡಿತಗೊಳಿಸಿದ RBI: ಗೃಹ, ವಾಹನ ಸಾಲ ಪಡೆಯುವವರಿಗೆ ಗುಡ್ ನ್ಯೂಸ್
Updated on

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (RBI) ನ ಆರು ಸದಸ್ಯರ ಹಣಕಾಸು ನೀತಿ ಸಮಿತಿ (MPC), ವಾಣಿಜ್ಯ ಬ್ಯಾಂಕುಗಳಿಗೆ ಆರ್ ಬಿಐ ನೀಡುವ ಸಾಲದ ದರವಾದ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ ಗಳಷ್ಟು ಕಡಿತ ಮಾಡಿದೆ. ಇದರಿಂದ ರೆಪೊ ದರ ಈಗ ಶೇಕಡಾ 6.25ಕ್ಕೆ ಇಳಿದಿದೆ.

ಕಳೆದ 5 ವರ್ಷಗಳಲ್ಲಿ ಇದು ಮೊದಲ ಬಾರಿಗೆ ಆರ್ ಬಿಐ ರೆಪೊ ದರ ಕಡಿತ ಮಾಡಿದೆ. ಕಳೆದ ಎರಡು ವರ್ಷಗಳ ಕಾಲ ರೆಪೊ ದರವನ್ನು ಸ್ಥಿರವಾಗಿ ಕಾಯ್ದಿರಿಸಲಾಗಿತ್ತು. ಆರ್ ಬಿಐ ರೆಪೊ ದರವನ್ನು ಕಡಿತಗೊಳಿಸಿದ್ದು 2020ರ ಮೇ ತಿಂಗಳಲ್ಲಿ.

ರೆಪೊ ದರವು ಇಲ್ಲಿಯವರೆಗೆ ಶೇಕಡಾ 6.5 ರಷ್ಟಿತ್ತು. ಕೋವಿಡ್ ಸಾಂಕ್ರಾಮಿಕ ರೋಗದಿಂದ ದೇಶದ ಆರ್ಥಿಕತೆಯು ಕನಿಷ್ಠ ಮಟ್ಟಕ್ಕೆ ಇಳಿದ ನಂತರ ಬಳಕೆಯನ್ನು ಹೆಚ್ಚಿಸಲು ಮಧ್ಯಮ ವರ್ಗಕ್ಕೆ ಇದುವರೆಗಿನ ಅತಿದೊಡ್ಡ ತೆರಿಗೆ ವಿನಾಯಿತಿಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿಯ ಅಂದರೆ 2025-26 ರ ಬಜೆಟ್‌ನಲ್ಲಿ ಘೋಷಿಸಿದ ವಾರದಲ್ಲಿ ಆರ್ ಬಿಐ ಈ ಕ್ರಮ ಕೈಗೊಂಡಿದೆ.

ಹಣಕಾಸು ನೀತಿ ಚೌಕಟ್ಟನ್ನು ಪರಿಚಯಿಸಿದಾಗಿನಿಂದ ಸರಾಸರಿ ಹಣದುಬ್ಬರ ಕಡಿಮೆಯಾಗಿದೆ ಎಂದು RBI ಗವರ್ನರ್ ಸಂಜಯ್ ಮಲ್ಹೋತ್ರಾ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಭಾರತೀಯ ಆರ್ಥಿಕತೆಯು ಜಾಗತಿಕ ಸವಾಲುಗಳಿಗೆ ನಿರೋಧಕವಾಗಿಲ್ಲದಿದ್ದರೂ ಪ್ರಬಲವಾಗಿದೆ ಎಂದು ಅವರು ಹೇಳಿದರು.

5 ವರ್ಷಗಳ ಬಳಿಕ Repo rate ಕಡಿತಗೊಳಿಸಿದ RBI: ಗೃಹ, ವಾಹನ ಸಾಲ ಪಡೆಯುವವರಿಗೆ ಗುಡ್ ನ್ಯೂಸ್
Union Budget ಜನರಿಂದ, ಜನರಿಗಾಗಿ, ಜನರಿಗೋಸ್ಕರ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ತಟಸ್ಥ ಹಣಕಾಸು ನೀತಿ

ಕೇಂದ್ರ ಬ್ಯಾಂಕ್ ಆರ್ ಬಿಐಯ ದರ ನಿಗದಿ ಸಮಿತಿಯು ತನ್ನ "ತಟಸ್ಥ" ಹಣಕಾಸು ನೀತಿ ನಿಲುವನ್ನು ಮುಂದುವರಿಸಲಿದೆ ಎಂದು ಮಲ್ಹೋತ್ರಾ ಘೋಷಿಸಿದರು. ಈ ವಿಧಾನವು ಹಣದುಬ್ಬರ ನಿಯಂತ್ರಣ ಮತ್ತು ಆರ್ಥಿಕ ಬೆಳವಣಿಗೆಯನ್ನು ಸಮತೋಲನಗೊಳಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು.

ಆರ್‌ಬಿಐ ಮುಂದಿನ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯನ್ನು ಸರಿಸುಮಾರು ಶೇಕಡಾ 6.7ರಷ್ಟು ಎಂದು ಅಂದಾಜಿಸಿದೆ. ಹಣದುಬ್ಬರವನ್ನು ನಿಯಂತ್ರಣದಲ್ಲಿಡುವ ಗುರಿಗೆ ಅನುಗುಣವಾಗಿ, ಕೇಂದ್ರ ಬ್ಯಾಂಕ್ 2025 ರ ಹಣಕಾಸು ವರ್ಷದಲ್ಲಿ ಶೇಕಡಾ 4.8 ಮತ್ತು 2026 ರ ಹಣಕಾಸು ವರ್ಷದಲ್ಲಿ ಶೇಕಡಾ 4.2 ಎಂದು ಅಂದಾಜು ಮಾಡಿದೆ.

ವಿನಿಮಯ ದರದ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದ ಆರ್‌ಬಿಐ ಗವರ್ನರ್, ಕೇಂದ್ರ ಬ್ಯಾಂಕಿನ ವಿದೇಶೀ ವಿನಿಮಯ ನೀತಿಯು ಸ್ಥಿರವಾಗಿ ಉಳಿದಿದೆ, ಕ್ರಮಬದ್ಧ ಮತ್ತು ಸ್ಥಿರ ಮಾರುಕಟ್ಟೆಯನ್ನು ಕಾಯ್ದುಕೊಳ್ಳುವತ್ತ ಗಮನಹರಿಸುತ್ತದೆ ಎಂದು ಒತ್ತಿ ಹೇಳಿದರು. ಆರ್‌ಬಿಐ ಯಾವುದೇ ನಿರ್ದಿಷ್ಟ ವಿನಿಮಯ ದರವನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಬ್ಯಾಂಕುಗಳು ಆರ್‌ಬಿಐನೊಂದಿಗೆ ನಿಷ್ಕ್ರಿಯವಾಗಿ ಹಣವನ್ನು ಇಡುವುದನ್ನು ಬಿಟ್ಟು ತಮ್ಮೊಳಗೆ ಹೆಚ್ಚು ಸಕ್ರಿಯ ವ್ಯಾಪಾರದಲ್ಲಿ ತೊಡಗಿಸಿಕೊಳ್ಳಬೇಕೆಂದು ಅವರು ಒತ್ತಾಯಿಸಿದರು. ಡಿಜಿಟಲ್ ವಂಚನೆಯ ಹೆಚ್ಚುತ್ತಿರುವ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು, ಇದಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಡೊಮೇನ್ ಹೆಸರು

ಸೈಬರ್ ವಂಚನೆಯನ್ನು ಎದುರಿಸಲು, ಏಪ್ರಿಲ್‌ನಿಂದ ಎಲ್ಲಾ ಹಣಕಾಸು ವಹಿವಾಟುಗಳಿಗೆ ಬ್ಯಾಂಕುಗಳು "fin.in" ಎಂಬ ವಿಶೇಷ ಡೊಮೇನ್ ಹೆಸರನ್ನು ಬಳಸಬೇಕಾಗುತ್ತದೆ ಎಂದು ಆರ್ ಬಿಐ ಘೋಷಿಸಿದೆ. ಮಾರುಕಟ್ಟೆಯನ್ನು ನಿಯಂತ್ರಿಸಲು ವ್ಯಾಪಾರ ಮತ್ತು ಇತ್ಯರ್ಥ ಸಮಯವನ್ನು ಪರಿಶೀಲಿಸಲು ಕಾರ್ಯನಿರತ ಗುಂಪನ್ನು ಸ್ಥಾಪಿಸುವ ಯೋಜನೆಯನ್ನು ಅವರು ಪ್ರಕಟಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com