
ಬೆಂಗಳೂರು: ಕ್ಲೌಡ್ ಮತ್ತು ಎಐ ಮೂಲಸೌಕರ್ಯಕ್ಕಾಗಿ ಮುಂದಿನ ಎರಡು ವರ್ಷಗಳಲ್ಲಿ ಭಾರತದಲ್ಲಿ 3 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಮೈಕ್ರೋಸಾಫ್ಟ್ ಅಧ್ಯಕ್ಷ ಮತ್ತು ಸಿಇಒ ಸತ್ಯ ನಾಡೆಲ್ಲಾ ಅವರು ಮಂಗಳವಾರ ಘೋಷಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ನಡೆದ ಕಂಪನಿಯ AI(ಕೃತಕ ಬುದ್ಧಿಮತ್ತೆ) ಸಮಾರಂಭದಲ್ಲಿ ಮಾತನಾಡಿದ ನಾಡೆಲ್ಲಾ, AI ಹೂಡಿಕೆ ಮೊದಲು ಭಾರತದಲ್ಲಿ ಮಾಡುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತವೆ ಮತ್ತು ದೇಶಾದ್ಯಂತ ಜನರು ಮತ್ತು ವ್ಯಾಪಕವಾಗಿ ಪ್ರಯೋಜನ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಭಾರತದಲ್ಲಿ ಎಐ ಆವಿಷ್ಕಾರಕ್ಕೆ ಇನ್ನಷ್ಟು ವೇಗ ತುಂಬುವು ಉದ್ದೇಶ ಈ ಹೂಡಿಕೆಯದ್ದಾಗಿದೆ. ಈ ಮೂಲಕ 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ದುರದೃಷ್ಟಿಯ ಸಾಕಾರದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ತನ್ನ ಅಡ್ವಾಂಟೇಜ್ ಇಂಡಿಯಾ ಕಾರ್ಯಕ್ರಮದ ಎರಡನೇ ಆವೃತ್ತಿಯ ಭಾಗವಾಗಿ ಮೈಕ್ರೋಸಾಫ್ಟ್ ಮುಂದಿನ ಐದು ವರ್ಷಗಳಲ್ಲಿ ಎಐ(AI) ಕೌಶಲ್ಯಗಳೊಂದಿಗೆ 10 ಮಿಲಿಯನ್ ಜನರಿಗೆ ತರಬೇತಿಯನ್ನು ನೀಡುವ ಮೂಲಕ ದೇಶದ ದೀರ್ಘಾವಧಿಯ ಸ್ಪರ್ಧಾತ್ಮಕತೆಗೆ ಬೆಂಬಲ ನೀಡಲಿದೆ.
``ದೇಶಾದ್ಯಂತ ಹೊಸ ಹೊಸ ಅವಕಾಶಗಳನ್ನು ಅನ್ಲಾಕ್ ಮಾಡುವ ಮೂಲಕ ಭಾರತ ಎಐ(AI) ಆವಿಷ್ಕಾರದಲ್ಲಿ ನಾಯಕನಾಗಿ ಕ್ಷಿಪ್ರಗತಿಯಲ್ಲಿ ಮುನ್ನುಗ್ಗುತ್ತಿದೆ ಎಂದು ನಾಡೆಲ್ಲಾ ಹೇಳಿದರು.
ಮೈಕ್ರೋಸಾಫ್ಟ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಪುನೀತ್ ಚಂಡೋಕ್ ಅವರು ಮಾತನಾಡಿ, ``ಕಳೆದ 12 ತಿಂಗಳಲ್ಲಿ ಭಾರತದಲ್ಲಿ ಮೈಕ್ರೋಸಾಫ್ಟ್ ಎಐ(AI) ಅನ್ನು ನೈಜಸ್ಥಿತಿಗೆ ತರುವಲ್ಲಿ ಸಹಕಾರಿಯಾಗಿದೆ. ಅದನ್ನು ಬೋರ್ಡ್ ರೂಂಗಳಿಂದ ತರಗತಿಗಳವರೆಗೆ, ವಾಣಿಜ್ಯದಿಂದ ಸಮುದಾಯಗಳವರೆಗೆ ಮತ್ತು ರೈತರಿಗೆ ಹಣಕಾಸು ಒದಗಿಸುವವರೆಗೆ ಕೊಂಡೊಯ್ಯುತ್ತಿದೆ. ಇಂದಿನ ಘೋಷಣೆಯು ಭಾರತದ ಸಾಮರ್ಥ್ಯದ ಮೇಲೆ ನಾವಿಟ್ಟಿರುವ ನಂಬಿಕೆಯನ್ನು ಇನ್ನಷ್ಟು ಬಲಪಡಿಸುತ್ತದೆ. ಅಲ್ಲದೇ, ಜಾಗತಿಕ ಮಾರುಕಟ್ಟೆಯಲ್ಲಿ ಉತ್ಕೃಷ್ಟಗೊಳಿಸಲು ಅಗತ್ಯವಾದ ಸಂಪನ್ಮೂಲಗಳು ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಕೌಶಲ್ಯಗಳೊಂದಿಗೆ ದೇಶವನ್ನು ಅಣಿಗೊಳಿಸುವ ನಿಟ್ಟಿನಲ್ಲಿ ನಾವು ಹೊಂದಿರುವ ಸಂಕಲ್ಪವನ್ನು ಬಲಪಡಿಸುತ್ತದೆ ಎಂದರು.
ಮುಂದಿನ ಕೆಲವು ದಶಕಗಳವರೆಗೆ ಎದುರಾಗುವ ಸಾಧ್ಯತೆಗಳನ್ನು ಅನ್ಲಾಕ್ ಮಾಡಲು ನಾವು ಎಐ(AI) ಅನ್ನು ಬಳಸುವುದನ್ನು ಮುಂದುವರಿಸುತ್ತೇವೆ ಹಾಗೂ ಎಐ(AI) ಯುಗದಲ್ಲಿ ಏಳಿಗೆ ಹೊಂದಲು ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ದೇಶಾದ್ಯಂತದ ಸಮುದಾಯಗಳು ನೀಡುವುದನ್ನು ಖಚಿತಪಡಿಸುತ್ತೇವೆ ಎಂದು ಭರವಸೆ ನೀಡಿದರು.
ಒಂದು ಜವಾಬ್ದಾರಿಯುತವಾದ ಎಐ(AI) ಅನ್ನು ಮುನ್ನಡೆಸಲು ಮೈಕ್ರೋಸಾಫ್ಟ್ ನ ವಿಧಾನವು ಆರು ಪ್ರಮುಖ ತತ್ತ್ವಗಳನ್ನು ಆಧರಿಸಿದೆ: ಅವುಗಳೆಂದರೆ- ನ್ಯಾಯಸಮ್ಮತತೆ, ವಿಶ್ವಾಸಾರ್ಹತೆ ಮತ್ತು ಸುರಕ್ಷತೆ, ಗೌಪ್ಯತೆ ಮತ್ತು ಭದ್ರತೆ, ಒಳಗೊಳ್ಳುವಿಕೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆ. ಭಾರತದಲ್ಲಿ ಹೂಡಲು ಉದ್ದೇಶಿಸಿರುವ ಈ ಹೂಡಿಕೆಯು ಎಐ(AI)ನಲ್ಲಿ ನಾಯಕನಾಗಿ ಮೈಕ್ರೋಸಾಫ್ಟ್ ನ ವಿಸ್ತರಣೆ ಮಾಡುತ್ತಿರುವ ಪಾತ್ರ ಮತ್ತು ಜವಾಬ್ದಾರಿಯನ್ನು ತೋರಿಸುತ್ತದೆ ಎಂದರು.
ಮೈಕ್ರೋಸಾಫ್ಟ್ ದೇಶದಲ್ಲಿರುವ ತನ್ನ ಡೇಟಾ ಸೆಂಟರ್ ಕ್ಯಾಂಪಸ್ ಗಳಲ್ಲಿ ಕ್ಲೌಡ್ ಮತ್ತು ಎಐ ಮೂಲಸೌಕರ್ಯಗಳನ್ನು ವಿಸ್ತರಿಸಲಿದೆ. ಈಗಾಗಲೇ ಮೂರು ಡೇಟಾ ಸೆಂಟರ್ ಗಳು ಕಾರ್ಯನಿರ್ವಹಣೆ ಮಾಡುತ್ತಿವೆ ಮತ್ತು ನಾಲ್ಕನೇ ಡೇಟಾ ಸೆಂಟರ್ 2026 ರ ವೇಳೆಗೆ ಕಾರ್ಯಾರಂಭಕ್ಕೆ ಸಿದ್ಧವಾಗಲಿದೆ. ಈ ಹೂಡಿಕೆಯು ಭಾರತದಲ್ಲಿ ವೇಗವಾಗಿ ವಿಸ್ತರಣೆಯಾಗುತ್ತಿರುವ AI ಸ್ಟಾರ್ಟಪ್ ಗಳು ಮತ್ತು ಸಂಶೋಧನಾ ಸಮುದಾಯದ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸಲು ಸ್ಕೇಲೇಬಲ್ AI ಕಂಪ್ಯೂಟಿಂಗ್ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.
ಭಾರತೀಯ ವೃತ್ತಿಪರರು ಲಿಂಕ್ಡ್ ಇನ್ ನಲ್ಲಿ ಕಲಿಕೆ ಮತ್ತು ಕೌಶಲ್ಯ-ನಿರ್ಮಾಣದಲ್ಲಿ ಮುಂಚೂಣಿಯಲ್ಲಿದ್ದಾರೆ. ಸರಾಸರಿ ವೃತ್ತಿಪರರಿಗಿಂತ ವಾರಕ್ಕೆ ಸುಮಾರು ಶೇ.50 ಕ್ಕಿಂತಲೂ ಹೆಚ್ಚಿನ ಸಮಯವನ್ನು ಕಲಿಕೆಯಲ್ಲಿ ಕಳೆಯುತ್ತಿರುವುದು ಒಂದು ಉತ್ತಮ ಬೆಳವಣಿಗೆಯಾಗಿದೆ. ಅವರು AI ನ ಆರಂಭಿಕ ಅಳವಡಿಕೆದಾರರೂ ಆಗಿದ್ದಾರೆ. ಜಾಗತಿಕವಾಗಿ ಶೇ.71 ರಷ್ಟು ಜನರಿಗೆ ಹೋಲಿಸಿದರೆ ಭಾರತೀಯ ಸದಸ್ಯರು ತಮ್ಮ ಪ್ರೊಫೈಲ್ ಗಳಲ್ಲಿ AI ಕೌಶಲ್ಯಗಳನ್ನು ಸೇರಿಸಿಕೊಳ್ಳುತ್ತಿದ್ದಾರೆ. ಇದರ ಪ್ರಮಾಣ ವರ್ಷದಿಂದ ವರ್ಷಕ್ಕೆ ಶೇ.122 ರಷ್ಟು ವೃದ್ಧಿಯಾಗಿದೆ.
2025 ರ ವೇಳೆಗೆ ಎರಡು ಮಿಲಿಯನ್ ಜನರಿಗೆ AI ಕೌಶಲ್ಯಗಳಲ್ಲಿ ತರಬೇತಿ ನೀಡುವ ಮಹತ್ವಾಕಾಂಕ್ಷೆಯ ಗುರಿಯೊಂದಿಗೆ 2024 ರಲ್ಲಿ ಮೈಕ್ರೋಸಾಫ್ಟ್ ಅಡ್ವಾಂಟೇಜ್ ಇಂಡಿಯಾ ಉಪಕ್ರಮವನ್ನು ಆರಂಭಿಸಲಾಗಿತ್ತು. ಪ್ರತಿಯೊಬ್ಬ ಭಾರತೀಯನಿಗೂ ಸಮಾನವಾದ AI ಅವಕಾಶವನ್ನು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ತನ್ನ ಬದ್ಧತೆಯನ್ನು ಪ್ರದರ್ಶಿಸುತ್ತಾ ಬಂದಿರುವ ಮೈಕ್ರೋಸಾಫ್ಟ್ ಈ ಗುರಿಯನ್ನು ತಲುಪಿದ್ದು, AI ಬಳಕೆದಾರರ ಸಂಖ್ಯೆ 2.4 ಮಿಲಿಯನ್ ಗೂ ಅಧಿಕವಾಗಿದೆ.
ಮಿಲಿಯನ್ ಗೂ ಅಧಿಕ ಜನರು ಒಂದು ವರ್ಷದೊಳಗೇ ತರಬೇತಿ ಪಡೆದಿರುವುದು ಗಮನಾರ್ಹವಾಗಿದೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ತರಬೇತಿ ಪಡೆದವರಲ್ಲಿ ಶೇ.65 ರಷ್ಟು ಮಹಿಳೆಯರಿದ್ದಾರೆ. ಅದರಲ್ಲೂ ವಿಶೇಷವಾಗಿ 2ನೇ ಶ್ರೇಣಿ ಮತ್ತು 3ನೇ ಶ್ರೇಣಿಯ ನಗರಗಳ ಶೇ.71 ರಷ್ಟು ಜನರು ತರಬೇತಿ ಪಡೆದಿದ್ದಾರೆ. ಈ ಬೆಳವಣಿಗೆಯನ್ನು ಗಮನಿಸಿದರೆ ಇದು ಇಡೀ ದೇಶಾದ್ಯಂತ ಒಳಗೊಳ್ಳುವ ವ್ಯಾಪ್ತಿಯನ್ನು ಖಚಿತಪಡಿಸುತ್ತದೆ.
ಮೈಕ್ರೋಸಾಫ್ಟ್ ರೀಸರ್ಚ್ (ಎಂಎಸ್ಆರ್) ಲ್ಯಾಬ್ಸ್ ಭಾರತದಲ್ಲಿ ಎಐ ಇನ್ನೋವೇಶನ್ ನೆಟ್ ವರ್ಕ್ ಮೂಲಕ ಎಐ ಪರಿಸರ ವ್ಯವಸ್ಥೆಯನ್ನು ಬೆಳೆಸುವ ತನ್ನ ಬದ್ಧತೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಯೋಜನೆಯನ್ನು ಘೋಷಣೆ ಮಾಡಿದೆ. ಎಐ ಇನ್ನೋವೇಶನ್ ನೆಟ್ ವರ್ಕ್ ನಡಿಯಲ್ಲಿ ಎಂಎಸ್ಆರ್ ಹೊಸ ಸಹಯೋಗಗಳನ್ನು ನಿರ್ಮಾಣ ಮಾಡುತ್ತಿದ್ದು, ವಿಶೇಷವಾಗಿ ಡಿಜಿಟಲ್ ನೇಟಿವ್ಸ್ ನೊಂದಿಗೆ ಸಂಶೋಧನೆಯಿಂದ ನೈಜ, ಬಳಕೆ ಮಾಡಬಹುದಾದ ವ್ಯಾಪಾರ ಪರಿಹಾರಗಳಿಗೆ ಪರಿವರ್ತನೆಯನ್ನು ವೇಗಗೊಳಿಸಲಾಗುತ್ತದೆ.
Advertisement