
ನವದೆಹಲಿ: ಹಳದಿ ಲೋಹ ಮತ್ತಷ್ಟು ತುಟ್ಟಿಯಾಗಲಿದೆ. ಜಾಗತಿಕ ಟ್ರೆಂಡ್ ನಡುವೆ ಚಿನ್ನದ ದರ ಪ್ರತಿ ಗ್ರಾಮ್ ಗೆ 630 ರೂಪಾಯಿಗಳು ಏರಿಕೆಯಾಗಿದ್ದು, ಪ್ರತಿ 10 ಗ್ರಾಮ್ ಗಳಿಗೆ 82,700 ರೂಪಾಯಿಯಷ್ಟಾಗಲಿದೆ.
ಆಭರಣ ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳು ನಿರಂತರವಾಗಿ ಖರೀದಿ ಮಾಡಿದ ಕಾರಣ ಈ ಬೆಲೆ ಏರಿಕೆ ಉಂಟಾಗಿದೆ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಷನ್ ತಿಳಿಸಿದೆ.
ಸತತ ಆರನೇ ವಹಿವಾಟಿನಲ್ಲಿ ಚಿನ್ನದ ದರ ಏರಿಕೆ ಕಂಡಿರುವ 99.5 ಪ್ರತಿಶತ ಶುದ್ಧತೆಯ ಚಿನ್ನದ ಬೆಲೆ 630 ರೂಪಾಯಿಗಳಷ್ಟು ಹೆಚ್ಚಾಗಿ 10 ಗ್ರಾಂಗೆ 82,330 ರೂಪಾಯಿಗಳಷ್ಟು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ನೀತಿಯನ್ನು ಸುತ್ತುವರೆದಿರುವ ಅನಿಶ್ಚಿತತೆಯು ಸಹ ಅಮೂಲ್ಯ ಲೋಹಗಳೆಡೆಗಿನ ಹೂಡಿಕೆಯನ್ನು ಪ್ರೇರೇಪಿಸುವ ಪ್ರಮುಖ ಅಂಶವಾಗಿದೆ" ಎಂದು HDFC ಸೆಕ್ಯುರಿಟೀಸ್‌ನ ಸರಕುಗಳ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ಹೇಳಿದ್ದಾರೆ.
99.9 ಪ್ರತಿಶತ ಶುದ್ಧತೆಯ ಚಿನ್ನ ಈ ಹಿಂದೆ ಅಕ್ಟೋಬರ್ 31, 2024 ರಂದು ತನ್ನ ದಾಖಲೆಯ 82,400 ರೂಪಾಯಿಗಳನ್ನು ತಲುಪಿತ್ತು.
Advertisement