
ನವದೆಹಲಿ: ವಾರಕ್ಕೆ 70-90 ಗಂಟೆಗಳ ಕೆಲಸದ ಬಗ್ಗೆ ಚರ್ಚೆ ನಡೆಯುತ್ತಿರುವ ನಡುವೆ, ಶುಕ್ರವಾರ ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆಯು ವಾರಕ್ಕೆ 60 ಗಂಟೆಗಳಿಗಿಂತ ಹೆಚ್ಚು ಸಮಯ ಕೆಲಸದಲ್ಲಿ ಕಳೆದರೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಅಧ್ಯಯನ ಉಲ್ಲೇಖಿಸಿದೆ.
ಒಬ್ಬರು ಕಚೇರಿಯಲ್ಲಿ ದೀರ್ಘಕಾಲ ಕಳೆಯುವುದು ಮಾನಸಿಕ ಯೋಗಕ್ಷೇಮಕ್ಕೆ ಹಾನಿಕಾರಕ ಮತ್ತು ದಿನಕ್ಕೆ 12 ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕೆಲಸ ಮಾನಸಿಕ ಯೋಗಕ್ಷೇಮದ ತೊಂದರೆಗೊಳಗಾಗುತ್ತಾರೆ ಎಂಬುದನ್ನು ಸಮೀಕ್ಷೆ ಗಮನಿಸಿದೆ.
"ಕೆಲಸ ಮಾಡುವ ಸಮಯವನ್ನು ಅನೌಪಚಾರಿಕವಾಗಿ ಉತ್ಪಾದಕತೆಯ ಅಳತೆ ಎಂದು ಪರಿಗಣಿಸಲಾಗುತ್ತದೆ. ಆದರೆ ಹಿಂದಿನ ಅಧ್ಯಯನವು ವಾರಕ್ಕೆ 55-60 ಗಂಟೆಗಳನ್ನು ಮೀರಿದಾಗ ಅದು ಪ್ರತಿಕೂಲ ಆರೋಗ್ಯ ಪರಿಣಾಮಗಳನ್ನು ದಾಖಲಿಸಿದೆ" ಎಂದು ಪೆಗಾ ಎಫ್, ನಫ್ರಾಡಿ ಬಿ(2021) ಮತ್ತು WHO/ILO ಜಂಟಿ ವಿಶ್ಲೇಷಣೆ'ಯ ಸಂಶೋಧನೆಗಳನ್ನು ಉಲ್ಲೇಖಿಸಿ ಸಮೀಕ್ಷೆ ಹೇಳಿದೆ.
ಸೇಪಿಯನ್ ಲ್ಯಾಬ್ಸ್ ಸೆಂಟರ್ ಫಾರ್ ಹ್ಯೂಮನ್ ಬ್ರೈನ್ ಅಂಡ್ ಮೈಂಡ್ ನಡೆಸಿದ ಅಧ್ಯಯನದ ದತ್ತಾಂಶವನ್ನು ಉಲ್ಲೇಖಿಸಿ, ಆರ್ಥಿಕ ಸಮೀಕ್ಷೆಯು ಹೀಗೆ ಹೇಳಿದೆ, "ಒಬ್ಬರು ಕಚೇರಿಯಲ್ಲಿ ದೀರ್ಘಕಾಲ ಕಳೆಯುವುದು ಮಾನಸಿಕ ಯೋಗಕ್ಷೇಮಕ್ಕೆ ಹಾನಿಕಾರಕವಾಗಿದೆ. 12 ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ಕಚೇರಿಯಲ್ಲಿ ಕಳೆಯುವ ವ್ಯಕ್ತಿಗಳು ಮಾನಸಿಕ ಯೋಗಕ್ಷೇಮದ ತೊಂದರೆಗೊಳಗಾಗಿದ್ದಾರೆ ಎಂದು ಹೇಳಿದೆ.
ಅಧ್ಯಯನವನ್ನು ಉಲ್ಲೇಖಿಸಿ, ಉತ್ತಮ ಜೀವನಶೈಲಿ ಆಯ್ಕೆಗಳು, ಕೆಲಸ ಮಾಡುವ ಸ್ಥಳ ಮತ್ತು ಕುಟುಂಬ ಸಂಬಂಧಗಳು ಕೆಲಸದಲ್ಲಿ ತಿಂಗಳಿಗೆ 2-3 ದಿನ ಕಡಿಮೆ ಕೆಲಸ ಮಾಡುವುದರೊಂದಿಗೆ ನೇರ ಸಂಬಂಧ ಹೊಂದಿವೆ ಎಂದು ಸಮೀಕ್ಷೆ ಹೇಳಿದೆ.
Advertisement