
ನವದೆಹಲಿ: ಕಳೆದ ಜೂನ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಸಂಗ್ರಹದಲ್ಲಿ ಶೇಕಡಾ 6.5 ರಷ್ಟು ಏರಿಕೆಯಾಗಿದ್ದು, ಒಟ್ಟು 1.84 ಲಕ್ಷ ಕೋಟಿ ರೂಪಾಯಿ ಜಿಎಸ್ ಟಿ ಸಂಗ್ರಹವಾಗಿದೆ ಎಂದು ಮಂಗಳವಾರ ಬಿಡುಗಡೆಯಾದ ಸರ್ಕಾರಿ ಅಂಕಿಅಂಶಗಳ ತಿಳಿಸಿವೆ.
ಕಳೆದ ವರ್ಷ ಇದೇ ತಿಂಗಳಲ್ಲಿ ಒಟ್ಟು 1,73,813 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಈ ವರ್ಷ ಜೂನ್ ನಲ್ಲಿ ಜಿಎಸ್‌ಟಿ ಸಂಗ್ರಹವು 1.84 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 6.2ರಷ್ಟು ಹೆಚ್ಚು ಜಿಎಸ್‌ಟಿ ಆದಾಯ ಸರ್ಕಾರಕ್ಕೆ ಸಿಕ್ಕಿದೆ.
ಹಿಂದಿನ ಎರಡು ತಿಂಗಳಿಗೆ ಹೋಲಿಸಿದರೆ ಜಿಎಸ್‌ಟಿ ಸಂಗ್ರಹ ಇಳಿಕೆಯಾಗಿದೆ. ಏಪ್ರಿಲ್ ತಿಂಗಳಲ್ಲಿ ದಾಖಲೆಯ 2.37 ಲಕ್ಷ ಕೋಟಿ ರೂ, ಮೇ ತಿಂಗಳಲ್ಲಿ 2.01 ಲಕ್ಷ ಕೋಟಿ ರೂ ಜಿಎಸ್‌ಟಿ ಸಿಕ್ಕಿತ್ತು. ಈ ಹಣಕಾಸು ವರ್ಷದಲ್ಲಿ ಮೊದಲ ಬಾರಿಗೆ ಮಾಸಿಕ ಜಿಎಸ್‌ಟಿ ಸಂಗ್ರಹ 2 ಲಕ್ಷ ಕೋಟಿ ರೂಗಿಂತ ಕೆಳಗೆ ಹೋಗಿದೆ.
ಜೂನ್‌ನಲ್ಲಿ, ದೇಶೀಯ ವಹಿವಾಟುಗಳಿಂದ ಒಟ್ಟು ಆದಾಯವು ಶೇ 4.6 ರಷ್ಟು ಹೆಚ್ಚಾಗಿ ಸುಮಾರು ರೂ 1.38 ಲಕ್ಷ ಕೋಟಿಗೆ ತಲುಪಿದ್ದರೆ, ಆಮದುಗಳಿಂದ ಜಿಎಸ್‌ಟಿ ಆದಾಯವು ಶೇ 11.4 ರಷ್ಟು ಹೆಚ್ಚಾಗಿ 45,690 ಕೋಟಿ ರೂ.ಗಳಿಗೆ ತಲುಪಿದೆ.
ಜೂನ್‌ನಲ್ಲಿ ಒಟ್ಟು ಕೇಂದ್ರ ಜಿಎಸ್‌ಟಿ ಆದಾಯವು 34,558 ಕೋಟಿ ರೂ. ಆಗಿದ್ದರೆ, ರಾಜ್ಯ ಜಿಎಸ್‌ಟಿ ಆದಾಯ 43,268 ಕೋಟಿ ರೂ. ಮತ್ತು ಸಮಗ್ರ ಜಿಎಸ್‌ಟಿ ಸುಮಾರು 93,280 ಲಕ್ಷ ಕೋಟಿ ರೂ. ಗೆ ತಲುಪಿದೆ. ಸೆಸ್‌ನಿಂದ 13,491 ಕೋಟಿ ರೂ. ಆದಾಯ ಬಂದಿದೆ.
ಈ ಮಧ್ಯೆ, ಈ ತಿಂಗಳಲ್ಲಿ ಒಟ್ಟು ಮರುಪಾವತಿ ಶೇ. 28.4 ರಷ್ಟು ಹೆಚ್ಚಾಗಿ 25,491 ಕೋಟಿ ರೂ.ಗಳಿಗೆ ತಲುಪಿದೆ.
Advertisement