ಅಮೆರಿಕ-ಭಾರತ ವ್ಯಾಪಾರ ಒಪ್ಪಂದ ಮಾತುಕತೆ: ಭಾರತೀಯ ಸರಕುಗಳ ಮೇಲೆ ಶೇ. 10–15 ರಷ್ಟು ಪ್ರತಿ ಸುಂಕ ಸಾಧ್ಯತೆ

ಆಗಸ್ಟ್ 1, 2025 ರಿಂದ ಈ ಹೊಸ ಸುಂಕ ನೀತಿ ಜಾರಿಗೆ ಬರಲಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಘೋಷಿಸಿದ್ದ ಶೇಕಡಾ 27 ರಷ್ಟು ಪ್ರತಿ ಸುಂಕವನ್ನು ಶೇ. 10 ರಿಂದ 15ಕ್ಕೆ ಇಳಿಸುವ ಸಾಧ್ಯತೆ ಇದೆ.
Representative Image.
ಸಾಂದರ್ಭಿಕ ಚಿತ್ರ
Updated on

ಚೆನ್ನೈ: ಅಮೆರಿಕ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆ ಅಂತಿಮ ಹಂತದಲ್ಲಿದ್ದು, ಜುಲೈ 31ರ ಗಡುವು ಸಮೀಪಿಸುತ್ತಿದ್ದಂತೆ, ಎರಡೂ ಕಡೆಯವರು ಭಾರತೀಯ ಆಮದುಗಳ ಮೇಲೆ ಶೇಕಡಾ 10 ರಿಂದ 15 ರಷ್ಟು ಸಾಧಾರಣ ಸುಂಕ ವಿಧಿಸಲು ನಿರ್ಧರಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಆಗಸ್ಟ್ 1, 2025 ರಿಂದ ಈ ಹೊಸ ಸುಂಕ ನೀತಿ ಜಾರಿಗೆ ಬರಲಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಘೋಷಿಸಿದ್ದ ಶೇಕಡಾ 27 ರಷ್ಟು ಪ್ರತಿ ಸುಂಕವನ್ನು ಶೇ. 10 ರಿಂದ 15ಕ್ಕೆ ಇಳಿಸುವ ಸಾಧ್ಯತೆ ಇದೆ.

ಪ್ರಸ್ತಾವಿತ ಸುಂಕ ಹೆಚ್ಚಳವನ್ನು ಕಡಿಮೆ ಮಾಡಲು ಅಥವಾ ತಪ್ಪಿಸಲು ಭಾರತ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಭಾರತೀಯ ಅಧಿಕಾರಿಗಳು ಇಂಡೋನೇಷ್ಯಾ ಮತ್ತು ವಿಯೆಟ್ನಾಂನಂತಹ ದೇಶಗಳು ಪಡೆದಿರುವ ಷರತ್ತುಗಳಿಗೆ ಸಮನಾದ ಅಥವಾ ಉತ್ತಮವಾದ ಷರತ್ತುಗಳನ್ನು ಕೋರುತ್ತಿದ್ದಾರೆ. ಅವುಗಳು ಅಂತಿಮ ದರಗಳನ್ನು ಶೇಕಡಾ 19–20 ಕ್ಕೆ ಹತ್ತಿರವಾಗಿವೆ ಎಂದು ವರದಿಗಳು ತಿಳಿಸಿವೆ.

ಅಮೆರಿಕ ತನ್ನ ಯೋಜಿತ ಸುಂಕಗಳನ್ನು ಕಡಿಮೆ ಮಾಡುವ ಅಥವಾ ಕೈಬಿಡುವ ಬದಲು, ಭಾರತವು ಅಮೆರಿಕದ ಕೈಗಾರಿಕಾ ಸರಕುಗಳ ಮೇಲೆ ಸುಂಕ ಕಡಿತವನ್ನು ನೀಡುತ್ತಿದೆ ಮತ್ತು ಆಟೋ ಬಿಡಿಭಾಗಗಳ ಮೇಲೆ ಶೂನ್ಯ ಒಪ್ಪಂದವನ್ನು ಸಹ ಪ್ರಸ್ತಾಪಿಸುತ್ತಿದೆ.

Representative Image.
ಅಮೆರಿಕ ಜೊತೆಗಿನ ವ್ಯಾಪಾರ ಒಪ್ಪಂದದ ಭಿನ್ನಾಭಿಪ್ರಾಯ ಬಗೆಹರಿಸಲು ಪ್ರಯತ್ನ ನಡೆಯುತ್ತಿದೆ: ಭಾರತ

ಅಮೆರಿಕದ ಸರಕುಗಳ ಮೇಲೆ ಭಾರತ ವಿಧಿಸುತ್ತಿರುವ ಅಧಿಕ ಪ್ರಮಾಣದ ಆಮದು ಸುಂಕಕ್ಕೆ ಪ್ರತಿಯಾಗಿ ಟ್ರಂಪ್‌ ಆಡಳಿತ ವ್ಯಾಪಾರದ ಅಂತರವನ್ನು ಕಡಿಮೆ ಮಾಡಲು ಏಪ್ರಿಲ್ 2 ರಂದು ಸುಂಕ ನೀತಿಯನ್ನು ಘೋಷಿಸಿತ್ತು. ಆದರೆ, ಅದನ್ನು ತಕ್ಷಣದಿಂದಲೇ ಜಾರಿಗೊಳಿಸುವ ಬದಲು 90 ದಿನಗಳ ಹೆಚ್ಚುವರಿ ಸಮಯಾವಕಾಶದೊಂದಿಗೆ ಜುಲೈ 9 ರವರೆಗೆ ಭಾರತೀಯ ಆಮದುಗಳ ಮೇಲಿನ ಶೇಕಡಾ 27 ರಷ್ಟು ಸುಂಕವನ್ನು ಅಮೆರಿಕ ಅಮಾನತುಗೊಳಿಸಿದೆ. ಆದರೆ ಬೇಸ್‌ಲೈನ್‌ ಸುಂಕದ ಶೇಕಡಾ 10 ಇನ್ನೂ ಉಳಿದಿದೆ. ಹೆಚ್ಚುವರಿ ಶೇಕಡಾ 27ರಷ್ಟು ಸುಂಕದಿಂದ ಸಂಪೂರ್ಣ ವಿನಾಯಿತಿ ನೀಡುವಂತೆ ಭಾರತವು ಕೋರಿಕೊಂಡಿತ್ತು.

ಆದಾಗ್ಯೂ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಂದದ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದು, "ಬಹಳ ನಿಕಟ" ಒಪ್ಪಂದ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ. ಆರಂಭದಲ್ಲಿ ಪ್ರಸ್ತಾಪಿಸಲಾದ ಶೇ. 27 ಕ್ಕಿಂತ ಹೆಚ್ಚಾಗಿ ಇತರ "ಸಣ್ಣ ದೇಶಗಳಿಗೆ" ಅನುಗುಣವಾಗಿ ಭಾರತೀಯ ಸರಕುಗಳ ಮೇಲಿನ ಸುಂಕ ಸುಮಾರು ಶೇ. 10 ರಿಂದ 15 ಆಗಿರಬಹುದು ಎಂದು ಅವರು ಸುಳಿವು ನೀಡಿದ್ದಾರೆ.

ಆದಾಗ್ಯೂ, ಇದು ಆಗಸ್ಟ್ 1 ರ ಗಡುವಿನ ಮೊದಲು ಮುಕ್ತಾಯಗೊಳ್ಳುವ ನಿರೀಕ್ಷೆಯಿರುವ ವ್ಯಾಪಾರ ಒಪ್ಪಂದ ಮಾತುಕತೆಯ ಫಲಿತಾಂಶವನ್ನು ಅವಲಂಬಿಸಿದೆ.

ಸದ್ಯಕ್ಕೆ ಪರಿಸ್ಥಿತಿ ಅಸ್ಥಿರವಾಗಿದೆ. ಆಗಸ್ಟ್ 1 ರೊಳಗೆ ಯಾವುದೇ ಒಪ್ಪಂದಕ್ಕೆ ಬರದಿದ್ದರೆ, ಭಾರತೀಯ ಸರಕುಗಳು ಶೇ. 27 ರಷ್ಟು ಸುಂಕಕ್ಕೆ ಒಳಪಟ್ಟಿರುತ್ತವೆ. ಇದು ಹಲವಾರು ಕೈಗಾರಿಕೆಗಳಲ್ಲಿ ವ್ಯಾಪಾರ ಹರಿವು ಮತ್ತು ಬೆಲೆಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಬಹುದು.

ಎಲ್ಲವೂ ಅಂದುಕೊಂಡಂತೆ ಆದರೆ ಆಗಸ್ಟ್ 1 ರಿಂದ ಹೊಸ ವ್ಯಾಪಾರ ಒಪ್ಪಂದ ಜಾರಿಗೆ ಬರುವ ಸಾಧ್ಯತೆಗಳಿವೆ. ಈಗಾಗಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿವಿಧ ದೇಶಗಳ ಮೇಲೆ ಶೇಕಾಡ 30 ಮತ್ತು ಅದಕ್ಕಿಂತ ಹೆಚ್ಚಿನ ತೆರಿಗೆ ವಿಧಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com