ಮುಂದಿನ ವರ್ಷ ಟಿಸಿಎಸ್ ನಿಂದ ಶೇ.2 ರಷ್ಟು ಉದ್ಯೋಗ ಕಡಿತ; ಕೆಲಸ ಕಳೆದುಕೊಳ್ಳಲಿದ್ದಾರೆ 12,200 ಜನ!

ಟಿಸಿಎಸ್ ಕೃತಕ ಬುದ್ಧಿಮತ್ತೆ ಮತ್ತು ಇತರ ಸುಧಾರಿತ ತಂತ್ರಜ್ಞಾನಗಳ ನಿಯೋಜನೆಯನ್ನು ವೇಗಗೊಳಿಸುತ್ತಿದೆ.
Tata Consultancy Services
ಟಿಸಿಎಸ್ (ಸಂಗ್ರಹ ಚಿತ್ರ)
Updated on

ಮುಂಬೈ: ಭಾರತದ ಅತಿದೊಡ್ಡ ಐಟಿ ಸೇವಾ ಪೂರೈಕೆದಾರ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, 2026ರ ಹಣಕಾಸು ವರ್ಷದಲ್ಲಿ ಶೇಕಡಾ 2 ರಷ್ಟು ಉದ್ಯೋಗ ಕಡಿತ ಮಾಡಲು ಯೋಜಿಸುತ್ತಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಪ್ರಾಥಮಿಕವಾಗಿ, ಮಧ್ಯಮ ಮತ್ತು ಹಿರಿಯ ನಿರ್ವಹಣೆಯ ಮೇಲೆ ಪರಿಣಾಮ ಬೀರುವ ಈ ಕಡಿತವು ಕಂಪನಿಯ ಪ್ರಸ್ತುತ 613,000ಕ್ಕೂ ಹೆಚ್ಚು ಉದ್ಯೋಗಿಗಳ ಪೈಕಿ ಸುಮಾರು 12,200 ಜನ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ.

ಟಿಸಿಎಸ್ ಕೃತಕ ಬುದ್ಧಿಮತ್ತೆ ಮತ್ತು ಇತರ ಸುಧಾರಿತ ತಂತ್ರಜ್ಞಾನಗಳ ನಿಯೋಜನೆಯನ್ನು ವೇಗಗೊಳಿಸುತ್ತಿದೆ. ಅಲ್ಲದೆ ಹೊಸ ಮಾರುಕಟ್ಟೆಗಳಿಗೆ ಪ್ರವೇಶಿಸುವುದರಿಂದ ಮತ್ತು ಅನಿಶ್ಚಿತ ಜಾಗತಿಕ ಬೇಡಿಕೆಯ ದೃಷ್ಟಿಕೋನವನ್ನು ನ್ಯಾವಿಗೇಟ್ ಮಾಡುತ್ತಿರುವುದರಿಂದ ಉದ್ಯೋಗ ಕಡಿತಕ್ಕೆ ಮುಂದಾಗಿದೆ ಎಂದು ವರದಿ ತಿಳಿಸಿದೆ.

Tata Consultancy Services
ಟಿಸಿಎಸ್ 2 ಸಾವಿರಕ್ಕೂ ಹೆಚ್ಚು ನೌಕರರನ್ನು ಒತ್ತಾಯಪೂರ್ವಕವಾಗಿ ಬೇರೆ ನಗರಗಳಿಗೆ ವರ್ಗಾಯಿಸುತ್ತಿದೆ: ಕಾರ್ಮಿಕ ಸಚಿವಾಲಯಕ್ಕೆ ದೂರು

"ನಮ್ಮ ಗ್ರಾಹಕರಿಗೆ ಸೇವಾ ವಿತರಣೆಯ ಮೇಲೆ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳಲು ಈ ಪರಿವರ್ತನೆಯನ್ನು ಸರಿಯಾದ ಕಾಳಜಿಯೊಂದಿಗೆ ಯೋಜಿಸಲಾಗುತ್ತಿದೆ" ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com