
ನವದೆಹಲಿ: 2024-25ರ ಹಣಕಾಸು ವರ್ಷದಲ್ಲಿ ದೇಶಕ್ಕೆ ಬಂದ ವಿದೇಶಿ ನೇರ ಹೂಡಿಕೆಯ( FDI)ಒಳ ಹರಿವಿನ ಪೈಕಿ ಶೇ. 51 ರಷ್ಟು ಮಹಾರಾಷ್ಟ್ರ ಮತ್ತು ಕರ್ನಾಟಕಕ್ಕೆ ಬಂದಿದೆ. ಕೇಂದ್ರ ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ ಈ ಮಾಹಿತಿಯನ್ನು ಹಂಚಿಕೊಂಡಿದೆ.
2024-25ರ ಏಫ್ರಿಲ್- ಮಾರ್ಚ್ ಅವಧಿಯಲ್ಲಿ ಮಹಾರಾಷ್ಟ್ರ ಗರಿಷ್ಠ 19. 6 ಬಿಲಿಯನ್ ಡಾಲರ್ ಅಂದರೆ ದೇಶದ ಒಟ್ಟು ಎಫ್ ಡಿಐನ ಶೇ.31 ರಷ್ಟು ವಿದೇಶಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಿದೆ.
ಕರ್ನಾಟಕ 6.62 ಬಿಲಿಯನ್ ಡಾಲರ್ ವಿದೇಶಿ ಬಂಡವಾಳ ಹೂಡಿಕೆಯನ್ನು ಪಡೆದಿದೆ. ಉಳಿದಂತೆ ರಾಷ್ಟ್ರ ರಾಜಧಾನಿ ದೆಹಲಿ 6 ಬಿಲಿಯನ್ ಡಾಲರ್, ಗುಜರಾತ್ 5.71 ಬಿಲಿಯನ್ ಡಾಲರ್, ತಮಿಳುನಾಡು 3.68 ಬಿಲಿಯನ್ ಡಾಲರ್ , ಹರಿಯಾಣ 3.14 ಬಿಲಿಯನ್ ಡಾಲರ್ ಮತ್ತು ತೆಲಂಗಾಣ 3 ಬಿಲಿಯನ್ ಡಾಲರ್ ಹೂಡಿಕೆ ಆಕರ್ಷಿಸಿವೆ.
ಮಹಾರಾಷ್ಟ್ರ ಮತ್ತು ಕರ್ನಾಟಕಕ್ಕೆ ಹೆಚ್ಚಿನ ಪ್ರಮಾಣದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಆಕರ್ಷಿಸುವಲ್ಲಿ ಮೂಲಸೌಕರ್ಯದಲ್ಲಿ ಗಣನೀಯ ಸುಧಾರಣೆ ಪ್ರಮುಖ ಕಾರಣವಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಕಳೆದ ಹಣಕಾಸು ವರ್ಷದಲ್ಲಿ ಈಕ್ವಿಟಿ ಒಳ ಹರಿವು, ಗಳಿಕೆಯ ಮರು ಹೂಡಿಕೆ ಮತ್ತು ಇತರ ಬಂಡವಾಳವನ್ನೊಳಗೊಂಡಿರುವ ಒಟ್ಟು ಎಫ್ ಡಿಐ ಶೇ.14 ರಷ್ಟು ಹೆಚ್ಚಾಗಿ 81. 04 ಬಿಲಿಯನ್ ಡಾಲರ್ ಗೆ ತಲುಪಿದೆ.
Advertisement