
ದೇಶದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಅಂಬಾನಿ, ಅದಾನಿಯ ನಂತರದ ಸ್ಥಾನದಲ್ಲಿ ರೋಷನಿ ನಾಡರ್ ಮಲ್ಹೋತ್ರ ಸ್ಥಾನ ಪಡೆದಿದ್ದು, ದೇಶದಲ್ಲೇ ಮೂರನೇ ಅತಿ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಹೆಚ್ ಸಿಎಲ್ ಕಾರ್ಪ್ ಹಾಗೂ ವಾಮ ದೆಹಲಿಯಲ್ಲಿ ಶೇ.47 ರಷ್ಟು ಷೇರುಗಳನ್ನು ಹೊಂದುವ ಮೂಲಕ ರೋಷನಿ ನಾಡರ್ ದೇಶದ ಮೂರನೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ರೋಷನಿ ನಾಡರ್ ಹೆಚ್ ಸಿಎಲ್ ಟೆಕ್ನಾಲಜೀಸ್ ಸಂಸ್ಥೆಯನ್ನು ಸ್ಥಾಪಿಸಿದ ಶಿವ್ ನಾಡರ್ ಪುತ್ರಿ. ಈ ಬೆಳವಣಿಗೆಯ ಮೂಲಕ ರೋಷನಿ ನಾಡರ್ ಮಲ್ಹೋತ್ರ ಹೆಚ್ ಸಿಎಲ್ ಇನ್ಫೋ ಸಿಸ್ಟಮ್ಸ್ ಲಿಮಿಟೆಡ್ ಹಾಗೂ ಹೆಚ್ ಸಿಎಲ್ ಟೆಕ್ ನಲ್ಲಿ ಅತಿ ದೊಡ್ಡ ಷೇರುದಾರರಾಗಿ ಹೊರಹೊಮ್ಮಿದ್ದಾರೆ.
bloomberg billionaires India ಅಂಕಿ-ಅಂಶಗಳ ಪ್ರಕಾರ 88.1 ಬಿಲಿಯನ್ ಡಾಲರ್ ಗಳ ಮೂಲಕ ಮುಖೇಶ್ ಅಂಬಾನಿ ಭಾರತದ ನಂ.1 ಶ್ರೀಮಂತ ವ್ಯಕ್ತಿಯಾಗಿದ್ದರೆ, 68.9 ಬಿಲಿಯನ್ ಡಾಲರ್ ಗಳ ಸಂಪತ್ತು ಹೊಂದಿರುವ ಗೌತಮ್ ಅದಾನಿ ಭಾರತದ ಶ್ರೀಮಂತರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. 3 ನೇ ಸ್ಥಾನದಲ್ಲಿ 35.9 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತು ಹೊಂದಿದ್ದ ಶಿವ್ ನಾಡರ್ ಇದ್ದರು. ಈಗ ಶಿವ್ ನಾಡರ್ ತಮ್ಮ ಪಾಲಿನ ಷೇರುಗಳನ್ನು ಪುತ್ರಿಗೆ ವರ್ಗಾಯಿಸಿರುವುದರಿಂದ ಈಗ ಭಾರತದ ಶ್ರೀಮಂತ ವ್ಯಕ್ತಿಗಳ ಪಟ್ಟಿಯ 3ನೇ ಸ್ಥಾನದಲ್ಲಿ ರೋಷನಿ ನಾಡರ್ ಮಲ್ಹೋತ್ರ ಹೆಸರು ಬಂದಿದೆ. ವಾಮ ದೆಹಲಿಗೆ ಸಂಬಂಧಿಸಿದಂತೆ ಶೇ.12.94 ರಷ್ಟು ಷೇರುಗಳ ಮೇಲಿನ ವೋಟಿಂಗ್ ಹಕ್ಕುಗಳೂ ಸಹ ಮಲ್ಹೋತ್ರಗೆ ದೊರೆಯಲಿದೆ.
ಪ್ರವರ್ತಕ ಕುಟುಂಬದ ನಿರಂತರ ಮಾಲೀಕತ್ವ ಮತ್ತು HCL ನಾಯಕತ್ವದಲ್ಲಿ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಖಾಸಗಿ ಕುಟುಂಬ ವ್ಯವಸ್ಥೆಯ ಮೂಲಕ ಪಾಲನ್ನು ವರ್ಗಾವಣೆ ಮಾಡಲಾಗಿದೆ.
Advertisement