
ಮುಂಬೈ: ಅಮೆರಿಕನ್ ಡಾಲರ್ ಎದುರು ದಾಖಲೆಯ ಕುಸಿತದ ನಂತರ ಭಾರತದ ರೂಪಾಯಿ ಮೌಲ್ಯ ಸೋಮವಾರದ ವಹಿವಾಟಿನಲ್ಲಿ ತುಸು ಚೇತರಿಕೆ ಕಂಡಿದೆ.
ಹಿಂದೆಂದಿಗಿಂತಲೂ ಅತಿ ಕನಿಷ್ಟ ಮೌಲ್ಯಕ್ಕೆ ಇಳಿದಿದ್ದ ರೂಪಾಯಿ ಮೌಲ್ಯ ಇಂದು ಡಾಲರ್ ಎದುರು 31 ಪೈಸೆ ಏರಿಕೆಯಾಗಿ 85.67ಕ್ಕೆ ಸ್ಥಿರವಾಗಿದೆ.
ದೇಶೀಯ ಷೇರು ಮಾರುಕಟ್ಟೆಗಳಲ್ಲಿನ ಸಕಾರಾತ್ಮಕ ಪ್ರವೃತ್ತಿ ಮತ್ತು ಹೊಸ ವಿದೇಶಿ ಬಂಡವಾಳದ ಒಳಹರಿವಿನಿಂದ ರೂಪಾಯಿ 2025ರಲ್ಲಿ ಕಳೆದುಕೊಂಡಿದ್ದ ತನ್ನ ಎಲ್ಲಾ ಮೌಲ್ಯವನ್ನು ಮತ್ತೆ ಹೆಚ್ಚಿಸಿಕೊಂಡಿದೆ.
ಇದಲ್ಲದೆ, ಜಾಗತಿಕ ಕಚ್ಚಾ ತೈಲ ಬೆಲೆಗಳಲ್ಲಿನ ಇಳಿಕೆ ಮತ್ತು ಡಾಲರ್‌ನಲ್ಲಿನ ನಿರಂತರ ದೌರ್ಬಲ್ಯವು ರೂಪಾಯಿಯನ್ನು ಬಲಪಡಿಸಿತು ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಆದಾಗ್ಯೂ, ದ್ರವ್ಯತೆ ನಿರ್ಬಂಧಗಳಿಂದ ಹಿಡಿದು ಪರಸ್ಪರ ಸುಂಕದ ಅನುಷ್ಠಾನಗಳವರೆಗೆ ಸುಪ್ತ ಅಪಾಯಗಳು ಸ್ಥಳೀಯ ಕರೆನ್ಸಿಗೆ ಸವಾಲುಗಳನ್ನು ಒಡ್ಡುತ್ತಲೇ ಇವೆ ಎಂದು ಅವರು ಹೇಳಿದ್ದಾರೆ.
ಅಂತರಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ರೂಪಾಯಿ 85.93 ಕ್ಕೆ ಪ್ರಾರಂಭವಾಯಿತು, ನಂತರ ತುಸು ಏರಿಕೆಯಾಗಿ ಡಾಲರ್ ವಿರುದ್ಧ ದಿನದ ಗರಿಷ್ಠ 85.49 ಮತ್ತು ಕನಿಷ್ಠ 86.01 ಕ್ಕೆ ತಲುಪಿತ್ತು. ಅಂತಿಮವಾಗಿ ರೂಪಾಯಿ ಮೌಲ್ಯ 31 ಪೈಸೆ ಏರಿಕೆಯಾಗಿ 85.67 ಕ್ಕೆ ಕೊನೆಗೊಂಡಿತು.
Advertisement