
ನವದೆಹಲಿ: ಕಳೆದ ಎರಡು ದಿನ ಇಳಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಮತ್ತೆ ದಿಢೀರ್ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ರೂ. 1,400 ರಷ್ಟು ಹೆಚ್ಚಾಗಿದ್ದು, ರೂ. 96,450 ಆಗಿದೆ. ಚಿನ್ನಾಭರಣ ವ್ಯಾಪಾರಿಗಳು ಮತ್ತು ದಾಸ್ತಾನುಗಾರರಿಂದ ಹೊಸ ಖರೀದಿಯೇ ಇದಕ್ಕೆ ಕಾರಣವಾಗಿದೆ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಷನ್ ಹೇಳಿದೆ.
10 ಗ್ರಾಂ ಶುದ್ಧ ಚಿನ್ನದ ಬೆಲೆ (ಎಲ್ಲಾ ತೆರಿಗೆ ಒಳಗೊಂಡಂತೆ) ರೂ. 1,400 ಬೆಲೆ ಹೆಚ್ಚಳದೊಂದಿಗೆ ರೂ. 96,000 ಆಗಿದೆ. ಬೆಳ್ಳಿಯ ಬೆಲೆಯು ಶುಕ್ರವಾರ ಪ್ರತಿ ಕೆಜಿಗೆ ರೂ. 1,000 ಏರಿಕೆಯೊಂದಿಗೆ ರೂ. 98,000 ರೂ.ಆಗಿತ್ತು. ಹಿಂದಿನ ಮಾರುಕಟ್ಟೆಯ ಅವಧಿಯಲ್ಲಿ ಇದು ಕೆಜಿಗೆ ರೂ. 97,000 ಇತ್ತು.
ಬೆಂಗಳೂರಿನಲ್ಲಿ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ ರೂ. 87,200 ಆಗಿದೆ. ಇದು ನಿನ್ನೆ ರೂ. 86,100 ಇತ್ತು. 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ ರೂ. 95. 13 ಆಗಿದೆ. ಗುರುವಾರ ಇದು ರೂ. 93,930 ಆಗಿತ್ತು.
ಈ ಮಧ್ಯೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನವು ಪ್ರತಿ ಔನ್ಸ್ ಗೆ 50.85 ಅಥವಾ ಶೇ.1.57 ರಿಂದ 3,189.25 ಡಾಲರ್ ಗೆ ಕುಸಿದಿದೆ.
ಅಮೆರಿಕ, ಯುಕೆ ಮತ್ತು ಚೀನಾದಂತಹ ರಾಷ್ಟ್ರಗಳ ನಡುವಿನ ಒಪ್ಪಂದದಿಂದ ಚಿನ್ನದ ಬೆಲೆಗಳು 3,200 ಡಾಲರ್ ಅಜುಬಾಜಿನಲ್ಲಿದೆ ಎಂದು ಸರಕು ಮತ್ತು ಕರೆನ್ಸಿ ವಿಶ್ಲೇಷಕ ಜತೀನ್ ತ್ರಿವೇದಿ ಹೇಳಿದ್ದಾರೆ.
Advertisement