Casual Images
ಸಾಂದರ್ಭಿಕ ಚಿತ್ರ

ITR filing: ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಗೆ ಗಡುವು ಜುಲೈ 31 ರಿಂದ ಸೆಪ್ಟೆಂಬರ್ 15ಕ್ಕೆ ವಿಸ್ತರಣೆ!

ಈ ವಿಸ್ತರಣೆಯಿಂದ ತೆರಿಗೆ ಪಾವತಿದಾರರು ಯಾವುದೇ ತಪ್ಪುಗಳಿಲ್ಲದೆ ರಿಟರ್ನ್ಸ್ ಸಲ್ಲಿಸಲು ಸಾಕಷ್ಟು ಸಮಯ ಸಿಗಲಿದೆ.
Published on

ನವದೆಹಲಿ: 2025-26ನೇ ಮೌಲ್ಯಮಾಪನ ವರ್ಷದ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವ ಗಡುವನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. ಈ ಹಿಂದೆ ಜುಲೈ 31 ಅಂತಿಮ ದಿನವಾಗಿತ್ತು. ಆದರೆ, ಇದೀಗ ಸೆಪ್ಟೆಂಬರ್ 15, 2025ರವರೆಗೆ ವಿಸ್ತರಿಸಲಾಗಿದೆ.

ಐಟಿಆರ್ ಫಾರ್ಮ್‌ಗಳಲ್ಲಿ ಗಣನೀಯ ಬದಲಾವಣೆಗಳಾಗಿದ್ದು, ಸಿಸ್ಟಮ್ ಅಪ್‌ಡೇಟ್ ನಡೆಯುತ್ತಿದೆ. ಹೀಗಾಗಿ, ರಿಟರ್ನ್ಸ್ ಸಲ್ಲಿಸಲು ಹೆಚ್ಚು ಸಮಯ ಬೇಕಾಗಬಹುದು ಎಂದು ಪರಿಗಣಿಸಿ ಅಂತಿಮ ದಿನಾಂಕವನ್ನು ಸೆಪ್ಟೆಂಬರ್ 25ರವರೆಗೂ ವಿಸ್ತರಿಸಲಾಗಿದೆ.

ಈ ವಿಸ್ತರಣೆಯಿಂದ ತೆರಿಗೆ ಪಾವತಿದಾರರು ಯಾವುದೇ ತಪ್ಪುಗಳಿಲ್ಲದೆ ರಿಟರ್ನ್ಸ್ ಸಲ್ಲಿಸಲು ಸಾಕಷ್ಟು ಸಮಯ ಸಿಗಲಿದೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಡಿಸಲಾಗುವುದು ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT)ಮಂಗಳವಾರ ಮಾಹಿತಿ ನೀಡಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ CBDT,ಈ ವಿಸ್ತರಣೆಯು ತೆರಿಗೆದಾರರಿಗೆ ಸುಗಮ ಹಾಗೂ ನಿಖರವಾಗಿ ರಿಟರ್ನ್ಸ್ ಸಲ್ಲಿಕೆಗೆ ಖಾತ್ರಿ ಒದಗಿಸುತ್ತದೆ. ಗಮನಾರ್ಹ ಐಟಿ ಫಾರಂ ಬದಲಾವಣೆ, ಸಿಸ್ಟಂ ಅಭಿವೃದ್ಧಿ ಮತ್ತು TDS ಕ್ರೆಡಿಟ್ ಪ್ರತಿಫಲನದಿಂದಾಗಿ ಈ ವಿಸ್ತರಣೆಯು ಹೆಚ್ಚಿನ ಸಮಯವನ್ನು ಒದಗಿಸುತ್ತದೆ. ಇದು ಎಲ್ಲರಿಗೂ ಸುಗಮ ಮತ್ತು ಹೆಚ್ಚು ನಿಖರವಾದ ಫೈಲಿಂಗ್ ಅನುಭವವನ್ನು ಖಾತ್ರಿಗೊಳಿಸುತ್ತದೆ. ಈ ಕುರಿತು ಅಧಿಸೂಚನೆಯನ್ನು ಶೀಘ್ರದಲ್ಲಿಯೇ ಹೊರಡಿಸಲಾಗುವುದು ಎಂದು ಹೇಳಿದೆ.

ಅಲ್ಲದೇ ಮೇ 31, 2025 ರವೆರಿಗಿನ ಬಾಕಿಯಿರುವ TDS ಸ್ಟೇಟ್ ಮೆಂಟ್ ಗಳು ಜೂನ್ ಆರಂಭದವರೆಗೆ ಪ್ರತಿಫಲಿಸುವ ನಿರೀಕ್ಷೆಯಿಲ್ಲ. ಸಿಸ್ಟಂ ಅಪ್ ಡೇಟ್ ನಿಂದ ವಿಳಂಬವಾಗುತ್ತಿದ್ದು, ತೆರಿಗೆದಾರರ ಸಮಸ್ಯೆಗಳನ್ನು ಪರಿಹರಿಸಲಾಗುವುದು ಮತ್ತು ತೆರಿಗೆ ಸಲ್ಲಿಸುವ ಪ್ರಕ್ರಿಯೆಯ ಸಮಗ್ರತೆಯನ್ನು ಕಾಪಾಡಿಕೊಳ್ಳಲಾಗುತ್ತಿದೆ ಎಂದು CBDT ತಿಳಿಸಿದೆ.

X
Open in App

Advertisement

X
Kannada Prabha
www.kannadaprabha.com