
ನವದೆಹಲಿ: ಭಾರತದಲ್ಲಿ ಜನಪ್ರಿಯ ಏಕೀಕೃತ ಪಾವತಿ ಇಂಟರ್ಫೇಸ್(UPI) ಪಾವತಿ ದಿನೇ ದಿನೇ ಹೆಚ್ಚುತ್ತಿದ್ದು, ಆಗಸ್ಟ್‌ನಲ್ಲಿ ಯುಪಿಐ ವಹಿವಾಟು 20 ಬಿಲಿಯನ್ ದಾಟಿದೆ ಎಂದು ರಾಷ್ಟ್ರೀಯ ಪಾವತಿ ನಿಗಮ(NPCI) ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ.
ಮೌಲ್ಯದ ದೃಷ್ಟಿಯಿಂದ, ಜುಲೈನಲ್ಲಿ ದಾಖಲಾದ 25.08 ಲಕ್ಷ ಕೋಟಿ ರೂ.ಗಳಿಗಿಂತ ಇದು ಕಡಿಮೆ ಇದ್ದು, ಈ ಆಗಸ್ಟ್ ತಿಂಗಳಲ್ಲಿ 24.85 ಲಕ್ಷ ಕೋಟಿ ರೂ.ವಹಿವಾಟು ನಡೆದಿದೆ. ಮೌಲ್ಯದ ದೃಷ್ಟಿಯಿಂದ ಇದುವರೆಗಿನ ಅತ್ಯಧಿಕ UPI ವಹಿವಾಟು ಮೇ ತಿಂಗಳಲ್ಲಿ(25.14 ಲಕ್ಷ ಕೋಟಿ ರೂ. ವಹಿವಾಟು) ದಾಖಲಾಗಿದೆ.
NPCI ಪ್ರಕಾರ, ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ದಾಖಲಾದ 20.60 ಲಕ್ಷ ಕೋಟಿ ರೂ.ಗಳಿಗೆ ಹೋಲಿಸಿದರೆ ಈ ವರ್ಷದ ಆಗಸ್ಟ್ ನಲ್ಲಿ UPI ವಹಿವಾಟಿನ ಮೊತ್ತವು ಶೇ. 21 ರಷ್ಟು ಹೆಚ್ಚಳವಾಗಿದೆ.
ಆಗಸ್ಟ್‌ನಲ್ಲಿ ಸರಾಸರಿ ದೈನಂದಿನ ವಹಿವಾಟು ಮೊತ್ತ 80,177 ಕೋಟಿಗಳಷ್ಟಿದ್ದರೆ, ಈ ತಿಂಗಳಲ್ಲಿ ಸರಾಸರಿ ದೈನಂದಿನ ವಹಿವಾಟು ಸಂಖ್ಯೆ 645 ಮಿಲಿಯನ್ ಆಗಿತ್ತು ಎಂದು ಎನ್‌ಪಿಸಿಐ ತಿಳಿಸಿದೆ.
ಇದರೊಂದಿಗೆ ಯುಪಿಐ ವಹಿವಾಟು ಮೌಲ್ಯ ಮತ್ತು ಸಂಖ್ಯೆ ಎರಡೂ ಹೆಚ್ಚಿರುವುದು ಯುಪಿಐ ಬಳಕೆ ಮತ್ತು ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಿರುವುದರ ಸಂಕೇತವಾಗಿದೆ.
Advertisement