
ಮುಂಬೈ: ವಾಲ್‌ಮಾರ್ಟ್ ಮಾಲೀಕತ್ವದ ಇ–ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್ ಇಂಡಿಯಾ, ರಾಯಲ್ ಎನ್‌ಫೀಲ್ಡ್ ಪ್ರಿಯರಿಗೆ ಶುಕ್ರವಾರ ಸಿಹಿ ಸುದ್ದಿ ನೀಡಿದ್ದು, ಇನ್ನುಮುಂದೆ ರಾಯಲ್ ಎನ್‌ಫೀಲ್ಡ್ 350 ಸಿಸಿ ಬೈಕ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲೂ ಖರೀದಿಸಬಹುದು ಎಂದು ಹೇಳಿದೆ.
ರಾಯಲ್ ಎನ್‌ಫೀಲ್ಡ್, ತನ್ನ 350 ಸಿಸಿಯ ಎಲ್ಲಾ ಮಾದರಿಯ ಬೈಕ್ ಗಳನ್ನು ಮಾರಾಟ ಮಾಡಲು ಇ-ಕಾಮರ್ಸ್ ಮಾರುಕಟ್ಟೆಯಾದ ಫ್ಲಿಪ್‌ಕಾರ್ಟ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದೆ.
ರಾಯಲ್ ಎನ್‌ಫೀಲ್ಡ್ ಕಂಪನಿಯ 350 ಸಿಸಿ ಶ್ರೇಣಿ - ಬುಲೆಟ್ 350, ಕ್ಲಾಸಿಕ್ 350, ಹಂಟರ್ 350, ಗೋವಾನ್ ಕ್ಲಾಸಿಕ್ 350 ಮತ್ತು ಹೊಸ ಮೀಟಿಯರ್ 350 ಅನ್ನು ಸೆಪ್ಟೆಂಬರ್ 22 ರಿಂದ ಬೆಂಗಳೂರು, ಗುರುಗ್ರಾಮ್, ಕೋಲ್ಕತ್ತಾ, ಲಖನೌ ಮತ್ತು ಮುಂಬೈ ಈ ಐದು ನಗರಗಳಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಈ ನಗರಗಳಲ್ಲಿ ತಮ್ಮ ಆದ್ಯತೆಯ ರಾಯಲ್ ಎನ್‌ಫೀಲ್ಡ್ ಅಧಿಕೃತ ಡೀಲರ್ ಗಳು, ಗ್ರಾಹಕರಿಗೆ ಬೈಕ್ ಗಳನ್ನು ಪೂರೈಸುತ್ತಾರೆ ಎಂದು ಕಂಪನಿ ಹೇಳಿದೆ.
ಫ್ಲಿಪ್‌ಕಾರ್ಟ್‌ನಲ್ಲಿ ತಮ್ಮ ನೆಚ್ಚಿನ ರಾಯಲ್ ಎನ್‌ಫೀಲ್ಡ್ 350 ಸಿಸಿ ಮೋಟಾರ್‌ಸೈಕಲ್ ಅನ್ನು ಖರೀದಿಸಲು ಆಯ್ಕೆ ಮಾಡುವ ಗ್ರಾಹಕರು ಸೆಪ್ಟೆಂಬರ್ 22, 2025 ರಿಂದ ಅನ್ವಯವಾಗುವಂತೆ ಸಂಪೂರ್ಣ ಜಿಎಸ್‌ಟಿ ಪ್ರಯೋಜನ ಪಡೆಯುತ್ತಾರೆ ಎಂದು ಕಂಪನಿ ತಿಳಿಸಿದೆ.
Advertisement