
ನವದೆಹಲಿ: ದೇಶದಲ್ಲಿ ಎರಡನೇ ಹಂತದ ಜಿಎಸ್ ಟಿ ಸುಧಾರಣೆ (GST 2.0) ಜಾರಿಯಾದಾಗಿನಿಂದ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH) ಸರಕು ಮತ್ತು ಸೇವಾ ತೆರಿಗೆಗೆ ಸಂಬಂಧಿಸಿದಂತೆ ಸುಮಾರು 3,000 ದೂರುಗಳನ್ನು ಸ್ವೀಕರಿಸಿದೆ ಎಂದು ಗ್ರಾಹಕವ್ಯವಹಾರಗಳ ಕಾರ್ಯದರ್ಶಿ ನಿಧಿ ಖರೆ ಸೋಮವಾರ ತಿಳಿಸಿದ್ದಾರೆ.
ಹೆಚ್ಚಿನ ದೂರುಗಳು ಚಿಲ್ಲರೆ ವ್ಯಾಪಾರಿಗಳು ಮತ್ತು ಸೇವಾ ಪೂರೈಕೆದಾರರಿಗೆ ಸಂಬಂಧಿಸಿವೆ. ಇವರು ಜಿಎಸ್ ಟಿ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ವಿಫಲರಾಗಿದ್ದು, ಈ ಹಿಂದೆ ಇದ್ದ ದರದಲ್ಲಿಯೇ ಮಾರಾಟವನ್ನು ಮುಂದುವರೆಸಿದ್ದಾರೆ. ಇಲ್ಲವೇ ದರವನ್ನು ಕಡಿಮೆ ಮಾಡಿಲ್ಲ. ತೆರಿಗೆ ಕಡಿತದ ಉದ್ದೇಶವು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಅಂತಹ ದೂರುಗಳ ಬಗ್ಗೆ ಸರ್ಕಾರ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಗ್ರಾಹಕರ ಸಹಾಯವಾಣಿ ಕೇಂದ್ರ ಸರ್ಕಾರದ ಕುಂದುಕೊರತೆಯನ್ನು ಬಗೆಹರಿಸುವ ಪ್ರಮುಖ ವೇದಿಕೆಯಾಗಿದ್ದು, ಗ್ರಾಹಕರಿಂದ ದೂರುಗಳನ್ನು ದಾಖಲಿಸಿಕೊಳ್ಳುತ್ತದೆ. ದೂರುಗಳನ್ನು ಪರಿಶೀಲಿಸಲಾಗುತ್ತಿದೆ. ಉಲ್ಲಂಘನೆಗಳ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
GST ಕೌನ್ಸಿಲ್ ಅಗತ್ಯ ಸರಕುಗಳು ಮತ್ತು ಸೇವೆಗಳ ಮೇಲಿನ ದರಗಳನ್ನು ಕಡಿಮೆ ಮಾಡಿದೆ. ಅಂತಹ ಪರಿಣಾಮಕಾರಿ ಕ್ರಮಗಳು ತ್ವರಿತ ಬೆಲೆಗಳನ್ನು ಸರಿಹೊಂದಿಸುವುದರ ಮೇಲೆ ಅವಲಂಬಿತವಾಗಿರುತ್ತದೆ. ಸರ್ಕಾರಕ್ಕೆ, ಗ್ರಾಹಕರ ನಂಬಿಕೆ ಕಾಪಾಡಲು ಮತ್ತು ಜಿಎಸ್‌ಟಿ ವ್ಯವಸ್ಥೆಯ ವಿಶ್ವಾಸಾರ್ಹತೆ ಖಾತ್ರಿಗೆ ನಿರ್ಣಾಯಕವಾಗಿ ಕಾರ್ಯನಿರ್ವಹಿಸುವುದು ಮುಖ್ಯವಾಗಿದೆ.
ಇದೇ ವೇಳೆ ಹೆಚ್ಚುತ್ತಿರುವ ಸಹಾಯವಾಣಿ ಬಳಕೆಯು ಗ್ರಾಹಕರಲ್ಲಿ ಹೆಚ್ಚುತ್ತಿರುವ ಅರಿವು ಮತ್ತು ಜಾಗರೂಕತೆಯನ್ನು ತೋರಿಸುತ್ತದೆ. ಆದಾಗ್ಯೂ, ಉಲ್ಲಂಘನೆಗಳಿಗೆ ಹೆಚ್ಚಿನ ದಂಡ ಜಾರಿಗೊಳಿಸದ ಹೊರತು ತೆರಿಗೆ ನೀತಿ ಮತ್ತ ಗ್ರಾಹಕರ ಮೇಲೆ ಅದರ ಪ್ರಭಾವದ ನಡುವಿನ ಅಂತರ ಮುಂದುವರೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ.
Advertisement