ಕದನ ವಿರಾಮ ಘೋಷಣೆ ಬೆನ್ನಲ್ಲೆ ಜಾಗತಿಕ ಆರ್ಥಿಕತೆಗೆ ದೊಡ್ಡ ಬಲ: ಪುಟಿದೆದ್ದ ಷೇರು ಮಾರುಕಟ್ಟೆ- ಗಗನಕ್ಕೇರಿದ ಚಿನ್ನ, ಬೆಳ್ಳಿ ಬೆಲೆ!

ಅಮೆರಿಕ ಮತ್ತು ಇರಾನ್‌ ನಡುವಿನ ಸಂಘರ್ಷಕ್ಕೆ 2 ವಾರಗಳ ಕದನ ವಿರಾಮ ಘೋಷಣೆಯಾಗಿದೆ. ಈ ಮೂಲಕ ಹೊರ್ಮುಜ್‌ ಜಲಸಂಧಿ ತೆರೆಯಲು ಇರಾನ್‌ ಒಪ್ಪಿಗೆ ಸೂಚಿಸಿದ್ದು ಜಾಗತಿಕ ಆರ್ಥಿಕತೆಗೆ ದೊಡ್ಡ ಬಲ ಬಂದಂತಾಗಿದೆ.
Gold Rate
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಅಮೆರಿಕ-ಇರಾನ್ ನಡುವೆ ಕದನ ವಿರಾಮ ಘೋಷಣೆಯಾದ ಹಿನ್ನೆಲೆ, ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಮೂಡಿದೆ. ತೈಲ ಬೆಲೆಗಳು ಇಳಿಕೆಯಾಗಿದ್ದು, ಲೋಹಗಳ ಮೇಲಿನ ಹೂಡಿಕೆ ಹೆಚ್ಚಳವಾದ ಹಿನ್ನೆಲೆ ಭಾರೀ ಬೇಡಿಕೆ ಸೃಷ್ಟಿಯಾಗಿ, ಚಿನ್ನ ಬೆಳ್ಳಿ ದರಗಳು ಭಾರಿ ಏರಿಕೆ ಕಂಡಿವೆ.

ಏಪ್ರಿಲ್ 8, 2026, ಬುಧವಾರದಂದು 24 ಕ್ಯಾರೆಟ್ 10 ಗ್ರಾಂ ನಲ್ಲಿ 3,980 ರೂ ಏರಿಕೆ ಆಗಿ,1,53,820 ರೂಪಾಯಿ ಬೆಲೆ ದಾಖಲಾಗಿದೆ. 1 ಗ್ರಾಂ ಬೆಲೆ ಇಂದು 398 ರೂ ಏರಿಕೆ ಆಗಿದ್ದು, 15,382 ರೂ ದಾಖಲಾಗಿದೆ.

ಇನ್ನೂ 22 ಕ್ಯಾರೆಟ್ 1 ಗ್ರಾಂ ಬೆಲೆ 365 ರೂ ಏರಿಕೆ ಆಗಿ 14,100 ರೂ ಆಗಿದ್ದು 10 ಗ್ರಾಂ ಬೆಲೆಯಲ್ಲಿ 3650 ರೂ ಏರಿಕೆಯಾಗಿ, 1,41,000 ರೂಪಾಯಿಗೆ ತಲುಪಿದೆ.

ಬೆಳ್ಳಿ ಬೆಲೆ ಇಂದು 10 ರೂಪಾಯಿ ಹೆಚ್ಚಳವಾಗಿದ್ದು, ಗ್ರಾಂ ಬೆಲೆ 260 ರೂಪಾಯಿ ಹಾಗೂ ಕೆಜಿ ಬೆಲೆ 2,60,000 ರೂ ಬೆಲೆ ಇದೆ. ಫೆಬ್ರವರಿ ಅಂತ್ಯದಿಂದಲೂ ಇಳಿಕೆಯಾಗಿದ್ದ ಚಿನ್ನದ ಬೆಲೆಯಲ್ಲಿ ಇಂದು ಭಾರಿ ಏರಿಕೆ ಆಗಿದೆ. ಚಿನ್ನದ ಬೆಲೆಯಲ್ಲಿ ಶೇ 10 ರಷ್ಟು ಹಾಗೂ ಬೆಳ್ಳಿ ಬೆಲೆಯಲ್ಲಿ ಶೇ 17 ರಷ್ಟು ಕುಸಿದಿತ್ತು. ಈಗ ಮತ್ತೆ ಬೆಲೆಗಳು ಏರಿಕೆಯಾಗುತ್ತಿವೆ.

Gold Rate
ಕದನ ವಿರಾಮ ಘೋಷಣೆಯಲ್ಲೂ ಪಾಕ್ ಎಡವಟ್ಟು: ‘Draft’ ಪದದ ಜೊತೆಗೆ ಟ್ವೀಟ್, ಷರೀಫ್ ಫುಲ್ ಟ್ರೋಲ್..!

ಇನ್ನೊಂದೆಡೆ ಕದನ ವಿರಾಮದ ಷರತ್ತಿನ ಹಿನ್ನೆಲೆ ಇರಾನ್ ಹರ್ಮುಜ್ ಜಲಸಂಧಿ ತೆರಯಲು ಒಪ್ಪಿದೆ. ಇದರಿಂದಾಗಿ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 100 ಡಾಲರ್‌ಗಿಂತ ಕೆಳಕ್ಕಿಳಿದಿದೆ. ಅಮೆರಿಕನ್ ಡಾಲರ್ ಮೌಲ್ಯವೂ ಕುಸಿದ ಹಿನ್ನೆಲೆಯಲ್ಲಿ ಚಿನ್ನ ಬೆಳ್ಳಿ ದರ ಏರಿಕೆಗೆ ಪೂರಕವಾಗಿ ಪರಿಣಮಿಸಿದೆ.

ಅಮೆರಿಕ ಮತ್ತು ಇರಾನ್‌ ನಡುವಿನ ಸಂಘರ್ಷಕ್ಕೆ 2 ವಾರಗಳ ಕದನ ವಿರಾಮ ಘೋಷಣೆಯಾಗಿದೆ. ಈ ಮೂಲಕ ಹೊರ್ಮುಜ್‌ ಜಲಸಂಧಿ ತೆರೆಯಲು ಇರಾನ್‌ ಒಪ್ಪಿಗೆ ಸೂಚಿಸಿದ್ದು ಜಾಗತಿಕ ಆರ್ಥಿಕತೆಗೆ ದೊಡ್ಡ ಬಲ ಬಂದಂತಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com