ಬ್ಲಿಂಕಿಟ್, ಸ್ವಿಗ್ಗಿ, ಜೆಪ್ಟೊಗೆ 10 ನಿಮಿಷಗಳ ಡೆಲಿವರಿ ಸೇವೆ ನಿಲ್ಲಿಸುವಂತೆ ಸರ್ಕಾರ ಸೂಚನೆ; ಯಾಕೆ ಗೊತ್ತಾ?

ವಿತರಣಾ ಸಮಯಕ್ಕೆ ಸಂಬಂಧಿಸಿದ ಕಳವಳಗಳನ್ನು ಪರಿಹರಿಸಲು ಬ್ಲಿಂಕಿಟ್, ಜೆಪ್ಟೊ, ಜೊಮಾಟೊ ಮತ್ತು ಸ್ವಿಗ್ಗಿ ಸೇರಿದಂತೆ ಪ್ರಮುಖ ಕಂಪನಿಗಳೊಂದಿಗೆ ಕೇಂದ್ರ ಸಚಿವರು ಸಭೆ ನಡೆಸಿದ್ದರು.
Swiggy
ಸ್ವಿಗ್ಗಿ ಸಿಬ್ಬಂದಿ (ಸಾಂದರ್ಭಿಕ ಚಿತ್ರ)
Updated on

ನವದೆಹಲಿ: ಗಿಗ್ ಕಾರ್ಮಿಕರ ಸುರಕ್ಷತೆಯ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ನಂತರ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯ ಅವರು, ಕಡ್ಡಾಯವಾದ 10 ನಿಮಿಷಗಳ ಡೆಲಿವರಿ ಗಡುವು ತೆಗೆದುಹಾಕುವಂತೆ ಪ್ರಮುಖ ವಿತರಣಾ ಕಂಪನಿಗಳಾದ ಬ್ಲಿಂಕಿಟ್, ಸ್ವಿಗ್ಗಿ, ಜೆಪ್ಟೊಗೆ ಮಂಗಳವಾರ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿತರಣಾ ಸಮಯಕ್ಕೆ ಸಂಬಂಧಿಸಿದ ಕಳವಳಗಳನ್ನು ಪರಿಹರಿಸಲು ಬ್ಲಿಂಕಿಟ್, ಜೆಪ್ಟೊ, ಜೊಮಾಟೊ ಮತ್ತು ಸ್ವಿಗ್ಗಿ ಸೇರಿದಂತೆ ಪ್ರಮುಖ ಕಂಪನಿಗಳೊಂದಿಗೆ ಕೇಂದ್ರ ಸಚಿವರು ಸಭೆ ನಡೆಸಿದ್ದರು.

ಮೂಲಗಳ ಪ್ರಕಾರ, ಬ್ಲಿಂಕಿಟ್ ಈಗಾಗಲೇ ಸರ್ಕಾರದ ನಿರ್ದೇಶನದ ಮೇರೆಗೆ 10 ನಿಮಿಷಗಳ ಡೆಲಿವರಿಯನ್ನು ಕೈಬಿಟ್ಟಿದೆ. ಅಲ್ಲದೆ 10 ನಿಮಿಷಗಳ ವಿತರಣಾ ಭರವಸೆಯನ್ನು ತನ್ನ ಬ್ರ್ಯಾಂಡಿಂಗ್‌ನಿಂದ ತೆಗೆದುಹಾಕಿದೆ.

Swiggy
ಗಿಗ್ ಕಾರ್ಮಿಕರ ಬೇಡಿಕೆ: ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಸಂಸದ ರಾಘವ್ ಚಡ್ಡಾ; Video

ಮುಂಬರುವ ದಿನಗಳಲ್ಲಿ ಇತರ ಕಂಪನಿಗಳು ಸಹ ಇದನ್ನು ಅನುಸರಿಸುವ ನಿರೀಕ್ಷೆಯಿದೆ.

ಗಿಗ್ ಕೆಲಸಗಾರರಿಗೆ ಹೆಚ್ಚಿನ ಸುರಕ್ಷತೆ, ಭದ್ರತೆ ಮತ್ತು ಸುಧಾರಿತ ಕೆಲಸದ ಪರಿಸ್ಥಿತಿಗಳನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಈ ಕ್ರಮ ಹೊಂದಿದೆ.

ಕಳೆದ ಡಿಸೆಂಬರ್ ಅಂತ್ಯದಲ್ಲಿ ವಿವಿಧ ವೇದಿಕೆಗಳ ವಿತರಣಾ ಕಾರ್ಮಿಕರು, ಕೆಲಸದ ಪರಿಸ್ಥಿತಿಗಳು ಮತ್ತು ವಿತರಣಾ ಒತ್ತಡ ಹಾಗೂ ಸಾಮಾಜಿಕ ಭದ್ರತೆಯ ಕೊರತೆಗೆ ಪರಿಹಾರಕ್ಕಾಗಿ ಆಗ್ರಹಿಸಿ, ರಾಷ್ಟ್ರವ್ಯಾಪಿ ಮುಷ್ಕರ ನಡೆಸಿದ್ದರು. ಈ ಮುಷ್ಕರ ನಡೆದು ವಾರಗಳ ಬಳಿಕ, ಬ್ಲಿಂಕಿಟ್‌ ತನ್ನ 10 ನಿಮಿಷಗಳ ಡೆಲಿವರಿ ಸೇವೆಯನ್ನು ರದ್ದುಗೊಳಿಸುವ ತೀರ್ಮಾನ ಮಾಡಿದೆ.

ಬ್ಲಿಂಕಿಟ್‌ ಗ್ರಾಹಕರಿಗೆ ಈಗಲೂ ತ್ವರಿತ ವಿತರಣೆಯ ವಾಗ್ದಾನ ಮಾಡುತ್ತದೆ. ಆದರೆ ನಿಗದಿತ ಸಮಯದ ಬದ್ಧತೆ ಅದರಲ್ಲೂ 10 ನಿಮಿಷಗಳಲ್ಲಿ ಡೆಲಿವರಿಯ ಬದ್ಧತೆಯಿಂದ ಕಂಪನಿ ಒಂದು ಹೆಜ್ಜೆ ಹಿಂದೆ ಸರಿಯಲಿದೆ. ಇದು ಅಸುರಕ್ಷಿತ ವಿತರಣಾ ವ್ಯವಸ್ಥೆಯ ಅಪಾಯಗಳಿಂದ ಕಾರ್ಮಿಕರನ್ನು ರಕ್ಷಿಸಲಿದೆ.

ಎಎಪಿ ಸಂಸದ ರಾಘವ್ ಚಡ್ಡಾ ಅವರು ಬ್ಲಿಂಕಿಟ್‌ ಗಿಗ್ ಕಾರ್ಮಿಕರ ಸಮಸ್ಯೆಗಳನ್ನು ಅರಿಯುವ ಉದ್ದೇಶದಿಂದ, ಒಂದು ದಿನದ ಮಟ್ಟಿಗೆ ಬ್ಲಿಂಕಿಟ್‌ ಡೆಲಿವರಿ ಬಾಯ್‌ ಆಗಿ ಕಾರ್ಯನಿರ್ವಹಿಸಿದ್ದರು. ನಿಗದಿತ ವೇಳೆಯಲ್ಲಿ ಮನೆ ಮನೆಗೆ ವಸ್ತುಗಳನ್ನು ತಲುಪಿಸಲು ಗಿಗ್‌ ಕಾರ್ಮಿಕರು ಪಡಬೇಕಾದ ಶ್ರಮದ ಬಗ್ಗೆ ರಾಘವ್‌ ಚಡ್ಡಾ ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com