ನಂದನಾ ಪ್ಯಾಲೇಸ್ ನಿಂದ ಕಾರ್ಮಿಕರಿಗೆ ಕಾರ್, ಬೈಕ್ ಗಿಫ್ಟ್

"ಇನ್ಫಿನಿಥಿಸಂ" ತತ್ವದ ಸ್ಮರಣಾರ್ಥ ಹಾಗೂ "ಅಚೀವರ್ಸ್ ಡೇ" ಕಾರ್ಯಕ್ರಮದಲ್ಲಿ ನಟ ರಮೇಶ್ ಅರವಿಂದ್ ಮತ್ತು ನಂದನ ಪ್ಯಾಲೇಸ್ನ ಸಿಎಂಡಿ ಡಾ.ಆರ್.ರವಿಚಂದರ್ ಕಾರ್ಮಿಕರಿಗೆ ವಾಹನಗಳನ್ನು ಊಡುಗೊರೆಯಾಗಿ ನೀಡಿದರು.
ಕಾರ್ಮಿಕರಿಗೆ ಕಾರ್, ಬೈಕ್ ಗಿಫ್ಟ್
ಕಾರ್ಮಿಕರಿಗೆ ಕಾರ್, ಬೈಕ್ ಗಿಫ್ಟ್
Updated on: 

ಬೆಂಗಳೂರು: ಹೊಟೇಲ್ ಉದ್ಯಮದಲ್ಲೇ ಮೊಟ್ಟ ಮೊದಲಬಾರಿಗೆ "ನಂದನ ಪ್ಯಾಲೇಸ್" ತನ್ನ ಕಾರ್ಮಿಕರಿಗೆ ಕಾರು ಮತ್ತು ಬೈಕ್ಗಳನ್ನು ಊಡುಗೊರೆಯಾಗಿ ನೀಡಿದೆ.

ಕೋರಮಂಗಲದ ಸೇಂಟ್ ಜಾನ್ ಸಭಾಂಗಣದಲ್ಲಿ ನಡೆದ "ಮಹಾತ್ರಿಯಾ" ಅವರು ಪ್ರತಿಪಾದಿಸಿದ "ಇನ್ಫಿನಿಥಿಸಂ" ತತ್ವದ ಸ್ಮರಣಾರ್ಥ ಹಾಗೂ "ಅಚೀವರ್ಸ್ ಡೇ" ಕಾರ್ಯಕ್ರಮದಲ್ಲಿ ನಟ ರಮೇಶ್ ಅರವಿಂದ್ ಮತ್ತು ನಂದನ ಪ್ಯಾಲೇಸ್ನ ಸಿಎಂಡಿ ಡಾ.ಆರ್.ರವಿಚಂದರ್ ಕಾರ್ಮಿಕರಿಗೆ ವಾಹನಗಳನ್ನು ಊಡುಗೊರೆಯಾಗಿ ನೀಡಿದರು.

ಹೊಟೇಲ್ ಉದ್ಯಮ ಆರಂಭಿಸಿದ ದಿನಗಳಿಂದ ಜೊತೆಯಲ್ಲಿರುವ ಹಾಗೂ ಉತ್ತಮವಾಗಿ ಕರ್ತವ್ಯ ಪಾಲನೆ ಮಾಡಿದ ಚೆಫ್, ಸಪ್ಲೈರ್, ಚಾಲಕ, ಸೂಪರ್ ವೈಸ್ರ ರ್ , ಜನರಲ್ ಮ್ಯಾನೇಜರ್ , ಮ್ಯಾನೇಜರ್ ಸೇರಿದಂತೆ ವಿವಿಧ ಹಂತದ ಕಾರ್ಮಿಕರನ್ನು ಗುರುತಿಸಿ ಒಟ್ಟು 15 ಕಾರು ಮತ್ತು 22 ದ್ವಿಚಕ್ರವಾಹನವನ್ನು ನೀಡಿದರು. ಇದರ ಮೊತ್ತ 1 ಕೋಟಿ ರೂ.ಗಳಿಗೂ ಅಧಿಕವಾಗಿದೆ.

ಈ ವೇಳೆ ಮಾತನಾಡಿದ ನಟ ರಮೇಶ್ ಅರವಿಂದ್, "ನಂದನ ಎಂದರೆ, ಖುಷಿಯನ್ನು ಹಂಚುವವರು. ಊಟ ಮಾಡಿದಾಗ ಜನರಿಗೆ ತೃಪ್ತಿಯಾಗಬೇಕು. ಇಲ್ಲಿ ಬರುವ ಗ್ರಾಹಕರಿಗೆ ಸಂತೃಪ್ತಿ ಸಿಗಲಿದೆ. "ಮನತಿಲ್ ಉರುತಿ ವೆಂಡುಮ್" ಇದು ನನ್ನ ಮೊದಲ ತಮಿಳು ಚಿತ್ರ. ಈ ಚಿತ್ರವನ್ನು ನೋಡಿ ಸ್ಫೂರ್ತಿ ಪಡೆದು ಅವರು ಇಷ್ಟು ದೊಡ್ಡ ಉದ್ಯಮ ಕಟ್ಟಿರುವುದು ನಿಜಕ್ಕೂ ದೊಡ್ಡ ಸಾಧನೆಯಾಗಿದೆ. ನಿಮ್ಮ ಬ್ರಾಂಡ್ ಎಂದರೆ, ಅದೇ ನಿಮ್ಮ ಅಹಾರದಲ್ಲಿ ಕಾಯ್ದುಕೊಳ್ಳುವ "ಗುಣಮಟ್ಟ"ವಾಗಿದೆ. ಇದನ್ನು ಪ್ರತಿಬಾರಿ ಕಾಪಾಡಿಕೊಳ್ಳುವುದು ಸಾಮಾನ್ಯವಲ್ಲ. ನಂದನ ಇಡೀ ಕುಟುಂಬವನ್ನು ನಡೆಸಿಕೊಂಡು ಬರುವುದಕ್ಕೆ ಒಬ್ಬ ನಾಯಕ ಇರಬೇಕು. ಆ ನಾಯಕನ ಪಾತ್ರವನ್ನು ರವಿಚಂದರ್ ಉತ್ತಮವಾಗಿ ನಿರ್ವಹಿಸಿಕೊಂಡು ಬರುತ್ತಿದ್ದಾರೆ. "ಕಾಯಕವೇ ಕೈಲಾಸ" ಎಂದು ಅರಿತುಕೊಂಡು ಅದನ್ನು ನೋಡಿಕೊಳ್ಳುವುದು ಸುಲಭವಲ್ಲ. ಕಾರ್ಮಿಕರ ಕೆಲಸವನ್ನು ನೆನಪಿನಲ್ಲಿಟ್ಟುಕೊಂಡು ಅವರಿಗೆ ಊಡುಗೊರೆ ನೀಡುವುದು ಇವರಲ್ಲಿರುವ ಬದ್ಧತೆಯನ್ನು ತೋರಿಸಲಿದೆ" ಎಂದು ಬಣ್ಣಿಸಿದರು.

ನಂದನ ಪ್ಯಾಲೇಸ್ನ ಸಿಎಂಡಿ ಡಾ.ಆರ್.ರವಿಚಂದರ್ ಮಾತನಾಡಿ, "ನಾನು ಬ್ಯಾಂಕ್ನಲ್ಲಿ ಸಿಕ್ಕ ಕೆಲಸವನ್ನು ಬಿಟ್ಟು, ಬ್ಯುಸಿನೆಸ್ ಮಾಡಬೇಕೆಂದು ಹೊಟೇಲ್ ಉದ್ಯಮದಲ್ಲಿ ಸೇರಿಕೊಂಡೆ. ಜೀವನದಲ್ಲಿ ಎಷ್ಟೇ ಕಷ್ಟ ಇದ್ದರೂ, ಗೆಲ್ಲಬೇಕು ಎಂಬ ಛಲವನ್ನು ನಾನು "ಮನತಿಲ್ ಉರುತಿ ವೆಂಡುಮ್" ಸಿನಿಮಾ ನೋಡಿ ಕಲಿತೆ. ಅಲ್ಲಿ ನಟಿ ಸುಹಾಸಿನಿ ಅವರ ಪಾತ್ರ ನನಗೆ ಜೀವನದಲ್ಲಿ ಸ್ಫೂರ್ತಿ ನೀಡಿತು. ನಾನು ಇಂದು ಇಷ್ಟು ಎತ್ತರಕ್ಕೆ ಬೆಳೆಯುವುದಕ್ಕೆ ನನ್ನ ಜೊತೆಗಿರುವ ಕೆಲಸಗರಾರ ಪರಿಶ್ರಮವೇ ಕಾರಣ. ಕೋವಿಡ್ ಸಮಯದಲ್ಲಿ ಹೋಟೆಲ್ ಉದ್ಯಮಕ್ಕೆ ಭಾರಿ ಹೊಡೆತ ಬಿತ್ತು. ನಾನು ಆಸ್ತಿ ಪಾಸ್ತಿ ಮಾರಿ ಕಾರ್ಮಿಕರನ್ನು ನೋಡಿಕೊಂಡೆ. ಇಂದು ಉದ್ಯಮ ಉನ್ನತಮಟ್ಟಕ್ಕೆ ಬೆಳೆದಿದೆ. ಇದಕ್ಕೆ ಕಾರ್ಮಿಕರ ಸಹಕಾರ ಬಹಳ ಮುಖ್ಯ. ಹೀಗಾಗಿ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುವುದಕ್ಕಾಗಿ ನಾನು ಇಂದು ಈ ಊಡುಗೊರೆಯನ್ನು ನೀಡುತ್ತಿದ್ದೇನೆ" ಎಂದರು.

ಈ ಕಾರ್ಯಕ್ರಮದಲ್ಲಿ ಸುಭಾಶ್ಚಂದ್ರ, ಎಂ.ಡಿ. ಸಂಗೀತ ಮೊಬೈಲ್ಸ್, ಡಾ. ಆರ್. ರವಿಚಂದರ್, ಸಿಎಂಡಿ, ನಂದನ ಪ್ಯಾಲೇಸ್, ಮನೋಹರ್. ಪಿ - ಮಾಜಿ ಇನ್ಫಿನಿಟಿಸಂ, ರಮ್ಯ - ನಿರ್ದೇಶಕಿ, ಎಸ್.ಆರ್.ಆರ್. ಫುಡ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್; ರವಿನಾ - ನಿರ್ದೇಶಕಿ, ಲಸಾರಾ ಹೋಟೆಲ್ಡ್ ಪ್ರೈವೇಟ್ ಲಿಮಿಟೆಡ್ ಮತ್ತು ಪ್ರಕಾಶ್ ರಾಜು, ಬಿಲ್ಡರ್ಸ್ ಅಂಡ್ ಡೆವಲಪರ್ಸ್ ಇತರರು ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X