

ಸದಾಶಿವ ಶೆಣೈ ನೇತೃತ್ವದ 'ಚಿತ್ತಾರ' ಸಿನಿಮಾ ಪತ್ರಿಕೆಯ ಆಶ್ರಯದಲ್ಲಿ ನಡೆದ ಕಿರುಚಿತ್ರಗಳ ಪ್ರಶಸ್ತಿ ಪ್ರಧಾನ ಸಮಾರಂಭ ಅದು. ಹಿರಿತೆರೆಯ ಕನಸುಕಾಣುತ್ತಿರುವ ಎಳೆಯ ಪ್ರತಿಭೆಗಳ ಪ್ರಯತ್ನಗಳಿಗೆ ಪ್ರೊತ್ಸಾಹ ನೀಡಲು ಕನಸುಗಾರ ರವಿಚಂದ್ರನ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ, ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ವಿಜಯ್ಕುಮಾರ್, ನಿರ್ಮಾಪಕರಾದ ಬಿ.ಕೆ.ಶ್ರೀನಿವಾಸ್ ಆಗಮಿಸಿದ್ದರು. ಅವರ ಜೊತೆಗೆ ಹಿರಿಯರಾದ ನಿರ್ದೇಶಕರಾದ ಸಿದ್ದಲಿಂಗಯ್ಯ, ಕೆ.ಎಸ್.ಎಲ್. ಸ್ವಾಮಿ, ಭಗವಾನ್, ಭಾರ್ಗವ ಅವರ ಹಾಜರಿ ಮತ್ತು ಅವರಿಗೆ ಮಾಡಲಾದ ಸನ್ಮಾನ ಅಂದಿನ ಇನ್ನೊಂದು ವಿಶೇಷ. ಎಲೆ ಪ್ರತಿಬೆಗಳ ಹಾಡಿಗೆ ಸ್ಪಂದಿಸಿದ ಕುಂಚ ಕಲಾವಿದ ಬಿಕೆಎಸ್ ವರ್ಮಾ ವೇದಿಕೆಯ ಮೇಲೆ ಆಶು ಚಿತ್ರ ರಚಿಸಿದರು. ನಟಿ ಅದಿತಿ ಸೇರಿದಂತೆ ಚಿತ್ರರಂಗದ ಹಲವು ನಟ ನಟಿಯರು ಹಾಡು ನೃತ್ಯದ ಮೂಲಕ ಅಂದಿನ ಸಮಾರಂಭದಲ್ಲಿ ಚಿತ್ತಾರ ಬಿಡಿಸಿದರು. ಹರೀಶ್ರಾಜ್, ಧ್ರುವ ಸರ್ಜಾ, ಮೇಘನಾ ಗಾಂವ್ಕರ್ ಕೂಡ ಹಾಜರಿದ್ದರು.