ವಿಜಯ್ ಕ್ಲಾಸ್

ನಟ ದುನಿಯಾ ವಿಜಯ್ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಫೈಟರ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟ ನಟ ವಿಜಯ್, 'ಜಂಗ್ಲಿ' ಚಿತ್ರದಲ್ಲಿ ಸಿಕ್ಸ್ ಪ್ಯಾಕ್ ಮಾಡಿದವರು.
ವಿಜಯ್ ಕ್ಲಾಸ್
Updated on: 

ನಟ ದುನಿಯಾ ವಿಜಯ್ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಫೈಟರ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟ ನಟ ವಿಜಯ್, 'ಜಂಗ್ಲಿ' ಚಿತ್ರದಲ್ಲಿ ಸಿಕ್ಸ್ ಪ್ಯಾಕ್ ಮಾಡಿದವರು. ಮೊದಲಿನಿಂದಲೂ ಸಾಹಸ ಕಲಾವಿದರ ಬಗ್ಗೆ ಗೌರವ ಮತ್ತು ಪ್ರೀತಿಯನ್ನಿಟ್ಟುಕೊಂಡಿರುವ ವಿಜಯ್, ಈಗ ಬಾಡಿ ಬಿಲ್ಡರ್‌ಗಳ ಜೊತೆ ನಿಂತಿದ್ದಾರೆ. ಆಕ್ಷನ್ ಚಿತ್ರಗಳಿಗೆ ಸೈ ಎನ್ನಿಸಿಕೊಂಡಿರುವ ವಿಜಯ್, ಬಾಡಿ ಬೆಳೆಸುವ ಸಾಹಸ ಮಾಡುವವರಿಗೆ ನೆರಳಾಗಲು ಹೊರಟಿದ್ದಾರೆ. ಹೌದು, ನಟ ವಿಜಯ್ ತಮ್ಮದೇ ಸಾರಥ್ಯದಲ್ಲಿ 'ದುನಿಯಾ ವಿಜಯ್ ಕ್ಲಾಸಿಕ್ 2013' ಎನ್ನುವ ಬಾಡಿ ಬಿಲ್ಡರ್ ಸ್ವರ್ಧೆಯನ್ನು ಆಯೋಜಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ನಡೆಸುವ ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ಮೊದಲನೇ ಬಹುಮಾನವಾಗಿ ಒಂದು ಲಕ್ಷ, ಎರಡನೇ ಬಹುಮಾನವಾಗಿ ಐವತ್ತು ಸಾವಿರ ನಗದನ್ನು ಘೋಷಿಸಿದ್ದಾರೆ. ಬಾಡಿ ಬಿಲ್ಡರ್ ಅಸೊಸೇಷನ್ ಜೊತೆ ಸೇರಿ ಆಯೋಜಿಸಿರುವ ಈ ಸ್ಪರ್ಧೆಯ ಅಂಗವಾಗಿ ವಿಜಯ್ ಅಭಿಮಾನಿಗಳು ರಕ್ತದಾನ ಮಾಡಲಿದ್ದಾರೆ. ಅಲ್ಲದೆ ಅದೇ ದಿನ ನೇತ್ರದಾನಕ್ಕೂ ಅವರ ಅಭಿಮಾನಿಗಳ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಲಿದ್ದಾರೆ ಎಂಬುದು ವಿಜಯ್‌ರ ಮಾತು.
 ಈ ಬಾಡಿ ಬಿಲ್ಡರ್ ಸ್ಪರ್ಧೆಯ ದಿನವೇ 'ಜಯಮ್ಮನ ಮಗ' ಚಿತ್ರದ ಆಡಿಯೋ ಬಿಡುಗಡೆ ನಡೆಯಲಿದೆ. ಹೀಗಾಗಿ ಬಾಡಿ ಜೊತೆ ಸಿಡಿ ಶೋ ಕೂಡ ನಡೆಯಲಿದೆ. ಮುಂದಿನ ತಿಂಗಳು 10ರಂದು ಈ ಕಾರ್ಯಕ್ರಮ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ನಡೆಯಲಿದೆ. 'ಕಟ್ಟು ಮಸ್ತಾಗಿ ದೇಹ ಬೆಳೆಸುವುದು ಹುಡುಕಾಟಿಗೆ  ಅಲ್ಲ. ತುಂಬಾ ರಿಸ್ಕ್ ತೆಗೆದುಕೊಂಡು ಈ ಕೆಲಸ ಮಾಡಬೇಕಿದೆ. ಆದರೆ ಬಾಡಿ ಬಿಲ್ಡರ್‌ಗಳಿಗೆ ಯಾವುದೇ ಮಾನ್ಯತೆ ಇಲ್ಲ. ಹೀಗಾಗಿ ಪೊಲೀಸ್ ಇಲಾಖೆ ಖಾಸಗಿ ಭದಗ್ರತೆಗಾಗಿ ಎಸ್‌ಕಾರ್ಟ್ ಕೆಲಸಕ್ಕೆ ಇವರನ್ನು ನೇಮಿಸಿಕೊಳ್ಳಬೇಕು' ಎಂಬುದು ವಿಜಯ್‌ರ ಮನವಿ. ಅಂದಹಾಗೆ ಜೂನ್ ತಿಂಗಳು 'ಜಯಮ್ಮನ ಮಗ' ಚಿತ್ರ  ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com