

ವರ್ಷದ ಕೊನೆಯಲ್ಲಿ ಭರವಸೆ ಮೂಡಿಸಿದ ನಿರ್ದೇಶಕ ಎಂದರೆ ದ್ಯಾವ್ರೇ ಚಿತ್ರದ ಗಡ್ಡ ವಿಜಿ. ಬಿಡುಗಡೆಗೂ ಮುನ್ನ ಯೋಗರಾಜ್ಭಟ್ ಅಭಿನಯಿಸಿದ್ದಾರೆ ಎಂಬ ಕಾರಣಕ್ಕೇ ಹೆಚ್ಚು ಸುದ್ದಿ ಮಾಡಿದ ಈ ಚಿತ್ರ ಬಿಡುಗಡೆಯಾದ ಮೇಲೆ ಈ ಚಿತ್ರದಿಂದ ಒಬ್ಬ ಹೊಸ ನಿರ್ದೇಶಕ ಹುಟ್ಟಿಕೊಂಡಿದ್ದಾನೆ ಎಂಬುದು ಎಲ್ಲರ ಅನಿಸಿಕೆಯಾಯಿತು. ಚಿತ್ರ ಕಮರ್ಷಿಯಲ್ ಆಗಿ ಎಷ್ಟರ ಮಟ್ಟಿಗೆ ಗೆಲುವು ಸಾಧಿಸಿದೆ ಎಂಬುದನ್ನೂ ಮೀರಿ ಈ ನಂಬಿಕೆ ಬೆಳೆದಿದ್ದು ಅಚ್ಚರಿಯ ಸಂಗತಿ. ಇದು ಅಚ್ಚರಿಯಾದರೂ ಅದಕ್ಕೆ ನಾನು ಅಭಾರಿಯಾಗಿದ್ದೇನೆ ಎನ್ನುವ ವಿಜಿ ಮುಂದೆ ಎಂಥ ಚಿತ್ರ ಮಾಡಬೇಕು ಎಂಬುದರ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದಾರಂತೆ. ನನ್ನ ಮುಂದಿನ ಚಿತ್ರ ಸಂಪೂರ್ಣ ಕಮರ್ಷಿಯಲ್ ಆಗಿರುತ್ತದೆ ಎಂಬ ಭರವಸೆಯನ್ನಂತೂ ಗಡ್ಡ ವಿಜಿ ಕೊಡುತ್ತಾರೆ. ಆದರೆ ಅದು ವಿಭಿನ್ನ ಎನಿಸಿಕೊಂಡ ದ್ಯಾವ್ರೇ ಚಿತ್ರ ನಿರೀಕ್ಷಿತ ದುಡ್ಡು ಮಾಡಲಿಲ್ಲ ಎಂಬ ಸಿಟ್ಟಿಗೆ ಖಂಡಿತಾ ಅಲ್ಲ ಎನ್ನುವುದನ್ನೂ ವಿಜಿ ಮರೆಯುವುದಿಲ್ಲ.
- ಹರಿ
- ಆರ್. ಕೇಶವಮೂರ್ತಿ