ಪೋಲಿ ಹುಡುಗ್ರು

ಪೋಲಿ ಹುಡುಗ್ರು
Updated on: 

ನಿರ್ದೇಶಕ ಯೋಗರಾಜ್ ಭಟ್ಟರ ಹಾಡುಗಳ ಗಮ್ಮತ್ತಿನ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಒಂಥರಾ ಅವರ ಹಾಡು ಖಾಲಿಯಾಗದ ಕ್ವಾರ್ಟು ಬಾಟ್ಲಿ. ಆದರೆ, ಭಟ್ಟರ ಹಾಡಿಗೆ ನರ್ಸ್ ಜಯಲಕ್ಷ್ಮಿ ಹೆಜ್ಜೆ ಹಾಕಿದರೆ? ಅನುಮಾನವೇ ಬೇಡ, ನೋಡೋರಿಗೆ ಫುಲ್ ಬಾಟ್ಲು ಕಿಕ್ಕು. ಕಿಸ್ಸಿಂಗ್ ನರ್ಸಮ್ಮ 'ಬಿಗ್ ಬಾಸ್‌' ಮನೆಗೆ ಹೋಗಿ ಬಂದ ಮೇಲೆ ಒಂಚೂರು ಸೆಲೆಬ್ರಿಟಿಯಾಗಿದ್ದಾಳೆ. ಹೀಗಾಗಿ 'ಜಾಲಿಬಾರು ಪೋಲಿ ಹುಡುಗ್ರು' ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕುತ್ತಿದ್ದು, ಈ ಹಾಡನ್ನು ಯೋಗರಾಜ್ ಭಟ್ ಬರೆದಿದ್ದಾರೆ. ವಿಶೇಷ ಅಂದರೆ ಈ ಹಾಡಿನಲ್ಲಿ ರಿಯಲ್ ನರ್ಸಮ್ಮ, ಡಾಕ್ಟರ್ ಆಗಿ ಬಡ್ತಿ ಪಡೆದುಕೊಂಡಿದ್ದಾರೆ. ಮಾತ್ರವಲ್ಲ ಹಾಡಿನಲ್ಲಿ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡು ಕೆಲ ಟಿಪ್ಸ್‌ಗಳನ್ನೂ ನರ್ಸಮ್ಮ ಯುವಕರಿಗೆ ಕೊಡಲಿದ್ದಾರಂತೆ. ಮುಖದ ಮೇಲೆ ಗುಳ್ಳೆಗಳು ಹೇಗೆ ಬರುತ್ತವೆ ಎನ್ನುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಜಯಲಕ್ಷಿ ತಿಳಿಸಿದ್ದಾರಂತೆ.
 'ನನಗೆ ಇದು ವಿಶೇಷ ಸಿನಿಮಾ. ನಿಜ ಜೀವನದಲ್ಲಿ ನಾನು ನರ್ಸ್. ಆದರೆ ಸಿನಿಮಾದಲ್ಲಿ ಡಾಕ್ಟರ್. ಹೀಗಾಗಿ ಹಾಡಿನಲ್ಲಿ ಕಾಣಿಸಿಕೊಳ್ಳಲು ಒಪ್ಪಿಕೊಂಡೆ. ನಿರ್ದೇಶಕರು ಮತ್ತು ಚಿತ್ರದ ನಾಯಕ ನನಗೆ ಮಾರ್ಗದರ್ಶನ ಮಾಡಿದ್ದಾರೆ. ಅವರ ಸಹಕಾರದಿಂದ ಇಲ್ಲಿ ಕುಣಿದ್ದೇನೆ' ಎನ್ನುತ್ತಾರೆ ಜಯಲಕ್ಷ್ಮಿ.
ಚಿತ್ರದ ನಿರ್ದೇಶಕ ಶ್ರೀಧರ್. ಈ ಹಿಂದೆ ಇವರು 'ಕಾರಂಜಿ' ಚಿತ್ರ ನಿರ್ದೇಶಿಸಿದ್ದರು. ಥ್ರಿಲ್ಲರ್ ಮಂಜು ಸಾಹಸ ಸಂಯೋಜನೆ ಮಾಡಿದ್ದಾರೆ. ವೆಂಕಟೇಶ್ ನಿರ್ಮಾಪಕ. ಕೃಷ್ಣ ನಾಯಕ. ಮಾನಸಿ ಚಿತ್ರದ ನಾಯಕಿ. ವೀರ್‌ಸಮರ್ಥ್ ಅವರ ಸಂಗೀತ ಚಿತ್ರಕ್ಕಿದೆ. 'ಶೇ.75 ಭಾಗ ಚಿತ್ರೀಕರಣ ಮುಗಿದೆ.
ಕಿರುತೆರೆಯ ಸುನೀಲ್ ನಾಗಪ್ಪ ಹಿರಿತೆರೆಗೆ ಬಂದ ಮೇಲೆ ಕೃಷ್ಣ ಆಗಿದ್ದು ನಿಮಗೆ ಗೊತ್ತೇ ಇದೆ. ನಟ ಕೃಷ್ಣ 'ಮದರಂಗಿ' ಚಿತ್ರದ ಮೂಲಕ ನಾಯಕನಾಗಿ ಈಗ 'ಜಾಲಿಬಾರು ಪೋಲಿ ಹುಡುಗ್ರು' ಚಿತ್ರದಲ್ಲಿ ನಟಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com