ಪೈಪೋಟಿಯಲ್ಲಿ ಗೆಲುವು

ಪೂಲ್‌ನಿಂದ ಹಾಲಿವುಡ್‌ಗೆ ಫ್ಲ್ಯಾಷ್ ಆದ ಗೌತಮ್ ಬೇಲೂರ್‌ಗೆ ಈಗ ಆಸ್ಕರ್ ಸಂಭ್ರಮ. ಹೌದು!, ಗೌತಮ್ ನಟಿಸಿರುವ, 'ಲೈಫ್ ಆಫ್ ಪೈ'..
ಪೈಪೋಟಿಯಲ್ಲಿ ಗೆಲುವು
Updated on: 

ಪೂಲ್‌ನಿಂದ ಹಾಲಿವುಡ್‌ಗೆ ಫ್ಲ್ಯಾಷ್ ಆದ ಗೌತಮ್ ಬೇಲೂರ್‌ಗೆ ಈಗ ಆಸ್ಕರ್ ಸಂಭ್ರಮ.
ಹೌದು!, ಗೌತಮ್ ನಟಿಸಿರುವ, 'ಲೈಫ್ ಆಫ್ ಪೈ' ಚಿತ್ರಕ್ಕೆ ನಾಲ್ಕು ಆಸ್ಕರ್ ಪ್ರಶಸ್ತಿ ದೊರೆತಿದೆ!! ಹಾಲಿವುಡ್‌ನ ದಿಗ್ಗಜರ ಸಿನಿಮಾಗಳ ನಡುವಿನ 'ಪೈ'ಪೋಟಿಯಲ್ಲಿ ದೊಡ್ಡ ಗೆಲುವೇ ಸಿಕ್ಕಿದೆ.

'ನನ್ ಫಿಲ್ಮ್‌ಗೆ ಆಸ್ಕರ್ ಬಂದಿದೆ' ಎಂದು ಥ್ರಿಲ್ ಆಗಿರುವ ಸ್ವಿಮ್ಮಿಂಗ್ ಹೀರೋ ಗೌತಮ್ ತನ್ನ ಅಭಿನಯದ 'ಲೈಫ್ ಆಪ್ ಪೈ' ಚಿತ್ರ ಹಾಲಿವುಡ್ ನೀರಿನ ವಿರುದ್ಧ ಈಜಿ ಗೆದ್ದ ಸುದ್ದಿ ಗೊತ್ತಾಗಿ, ಉತ್ಸಾಹದ ಅಲೆಗಳ ಮೇಲೆ ತೇಲುತ್ತಿದ್ದಾನೆ.

ಗೌತಮ್‌ನ ತಾಯಿ ವಿದ್ಯಾ ದೇಶಿಕಾಚಾರ್ ಕೂಡ ಈ ಬಗ್ಗೆ ಮಾತನಾಡಿದರೆ ಮತ್ತೆ ಮತ್ತೆ ಹಳೆಯ ನೆನಪುಗಳನ್ನೇ ಕೆದಕುತ್ತಾರೆ. ಚಿತ್ರದ ಆಡಿಷನ್‌ನಿಂದ ಹಿಡಿದು ಆಸ್ಕರ್‌ವರೆಗಿನ ಪಯಣ ಅವರ ಕಣ್ಣಿಗೆ ಕಟ್ಟಿದಂತಿದೆ. ಮೊದ ಮೊದಲು ಬೇಡ, ಬೇಡ ಎಂದರೂ, ಚುರುಕಾಗಿದ್ದ, ಚೆನ್ನಾಗಿ ಈಜುತ್ತಿದ್ದ ಗೌತಮ್‌ನನ್ನು 'ಪೈ' ಚಿತ್ರತಂಡ ಬಿಡಲಿಲ್ಲವಂತೆ. ಇಷ್ಟವಿಲ್ಲದೆಯೇ 4 ರೌಂಡ್ ಆಡಿಷನ್ನೂ ಮುಗಿದು, ಡೈರೆಕ್ಟರ್ ಆಂಗ್ ಲೀ ಅವರೊಡನೆ, ಕೊನೆಯ ರೌಂಡ್ ಮುಂಬಯಿಯಲ್ಲಿ ಸರಾಗವಾಗಿ ನಡೆದು, ಗೌತಮ್‌ಗೆ ಆ ರೋಲ್ ಸಿಕ್ಕಿದಾಗ, ಬೇಡ ಎನ್ನುವುದನ್ನು ಬಿಟ್ಟು ಬೇಕು ಎನ್ನುವ ಮೂಡಿಗೆ ಬಂದಿದ್ದಾರೆ, ಗೌತಮ್‌ನ ಪೋಷಕರು.

'ಲೈಫ್ ಆಫ್ ಪೈ' ತಂಡದೊಂದಿಗೆ, ಪುದುಚೇರಿ, ಧಾಯಿಚುಂಗ್, ಧಾಯಿವಾನ್ ಮುಂತಾದೆಡೆ, 6 ವಾರಗಳ ಕಾಲ ಶೂಟಿಂಗ್ ನಡೆದಿತ್ತು. 5 ವರ್ಷದ ಟಿಪಿಕಲ್ ಕಾರ್ ಕ್ರೇಜಿ ಕಿಡ್, ಗೌತಮ್‌ನನ್ನು, 4 ವಾರ ಶೂಟಿಂಗ್ ಸಮಯದಲ್ಲಿ ಹೆಚ್ಚು ಆಕರ್ಷಿಸಿದ್ದು, ರೇಸಿಂಗ್ ಕಾರ್‌ಗಳಂತೆ.

'ಶೂಟಿಂಗ್ ಸಮಯದಲ್ಲಿ ನಿನಗೆ ಯಾರು ತುಂಬಾ ಕ್ಲೋಸ್ ಆಗಿದ್ರು?' ಅಂದ್ರೆ, 'ನಾನು ದೊಡ್ಡವನಾದ ಪಾತ್ರ ನಟಿಸಿರುವ ಅಯಾನ್ ಖಾನ್‌' ಅಂತಾನೆ ಗೌತಮ್. ಮುಕ್ಕಾಲುವಾಸಿ ನೀರಿನಲ್ಲಿ, ಕೆಲವೊಮ್ಮೆ ಅಂಡರ್‌ವಾಟರ್‌ನಲ್ಲಿದ್ದು, ಪರ್ಫೆಕ್ಷನಿಸ್ಟ್ ಆದ ಆಂಗ್ ಲೀರವರೊಡನೆ ಒಡನಾಡಿದ ಗೌತಮ್. ಆಂಗ್ ಲೀ ಶೂಟಿಂಗ್ ಸಮಯದಲ್ಲಿ ಗೌತಮ್‌ನ ಬೆಸ್ಟ್ ಫ್ರೆಂಡ್ ಆಗಿಬಿಟ್ಟರಂತೆ ಎನ್ನುತ್ತಾರೆ ಗೌತಮ್‌ನ ತಂದೆ ಕಸ್ತೂರಿ ಬೇಲೂರ್.

ಈಗ, ಕೆನ್‌ಶ್ರೀ ಶಾಲೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿರುವ ಗೌತಮ್‌ಗೆ ಸೆಟ್‌ನಲ್ಲಿ ಡೈರೆಕ್ಟರ್ ಆಂಗ್ ಲೀ, ಟಬೂ, ಆದಿಲ್‌ಹುಸೇನ್, ಅಯಾನ್ ಖಾನ್ ಎಲ್ಲರನ್ನೂ ಕಂಡದ್ದು ಮರೆಯಲಾಗದ ಅನುಭವ. ಹಾಗಾಗಿ, ಮುಂದೆ ಕೂಡ ಛಾನ್ಸ್ ಸಿಕ್ಕರೆ ನಟಿಸಲು ಸಿದ್ಧ ಅಂತಾನೆ ಗೌತಮ್.

ಅಣ್ಣನೊಡನೆ ವಿಡಿಯೊ ಗೇಮ್ಸ್ ಆಡುವುದು, ಅವನೊಡನೆ ಕುಳಿತು ಫೇವರೆಟ್ 'ಟಾಪ್ ಗಿಯರ್‌' ಟಿ.ವಿ. ಷೋ ನೋಡುವುದು ಇಷ್ಟ ಎನ್ನುವ ಗೌತಮ್‌ನೊಡನೆ ಒಂದು ಚಿಕ್ಕ ಚಿಟ್-ಚಾಟ್

ನಿನಗೆ ತುಂಬಾ ಇಷ್ಟವಾದ ತಿಂಡಿ?
- ದೋಸೆ, ಇಡ್ಲಿ, ನನ್ನ ನಂದಿನಿ ದೊಡ್ಡಮ್ಮ ಮಾಡೋ 'ಬ್ರೌನಿಬ್ರೆಡ್‌'.

 ನಿನಗಿಷ್ಟವಾದ ಕಾರ್ಟೂನ್?
- ಟಿನ್‌ಟಿನ್ ಅಡ್ವೆಂಚರ್.

ಅಪ್ಪ ತುಂಬಾ ಇಷ್ಟಾನಾ.. ಅಮ್ಮನಾ..?
- ಅಮ್ಮ ಅಪ್ಪ ಇಬ್ರೂ... ಅಪ್ಪನ ಜತೆ ಆಟ ಆಡಕ್ಕೆ ತುಂಬಾ ಇಷ್ಟ.

ನಿನ್ನಲ್ಲಿ ಅಮ್ಮ ತುಂಬಾ ಇಷ್ಟಪಡೋ ಗುಣ?
- ನಾನು ಒಂದು ಕೆಲಸ ಕೈಗೆ ತೊಗೊಂಡ್ರೆ ಮುಗಿಸೋವರ್ಗೂ ಬಿಡಲ್ಲ. ಅದು ನನ್ನಮ್ಮಂಗೆ ತುಂಬಾ ಇಷ್ಟ.

ಇಷ್ಟ ಇಲ್ಲದ ಗುಣ?
- ಸ್ಕೂಲಿಂದ ಬಂದ ಮೇಲೆ ನನ್ನ ಥಿಂಗ್ಸ್ ನೀಟಾಗಿ ಇಡದಿದ್ರೆ ಕೋಪ.

ನಿನ್ನ ರೋಲ್ ಮಾಡಲ್?
- ನನ್ನ ದೊಡ್ಡಮ್ಮಂದಿರಾದ- ನಂದಿನಿ ದೊಡ್ಡಮ್ಮ ಮತ್ತು ವೀಣಾ ದೊಡ್ಡಮ್ಮ.

ನಿನ್ನಣ್ಣನ ಜತೆ ದಿನಾ ನಿನ್ನ ಫೈಟಿಂಗ್ ನಡೆಯುತ್ತಾ?
- ಸ್ವಲ್ಪ ಫೈಟಿಂಗ್, ಜಾಸ್ತಿ ಫ್ರೆಂಡ್ಲಿ, ಪ್ರತಿ ಸೆಕೆಂಡ್ ಅವನ ಜತೇನೇ ಇರ್ತೀನಿ.

ನಿನ್ನ ಫ್ರೀ ಟೈಂನಲ್ಲಿ ಏನು ಮಾಡ್ತೀಯಾ?
- ಟಾಯ್ ಕಾರ್ಸ್ ಆಡ್ತೀನಿ.

- ಗೀತಾ ಶ್ರೀನಿವಾಸನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com