ಹಾಡು: ಏನೋ ಏನೋ ಆಗಿದೆ
ಚಿತ್ರ: ಗೂಗ್ಲಿ
ಸಾಹಿತ್ಯ: ಪವನ್ ಒಡೆಯರ್
ಸಂಗೀತ: ಜೋಶ್ವಾ ಶ್ರೀಧರ್
ಗಾಯಕರು: ಹರಿಚರಣ್, ಅಪೂರ್ವ
ಏನೋ ಏನೋ ಆಗಿದೆ,
ನನಗೇ ಗೊತ್ತೇ ಆಗದೆ
ಮನಸು ಹಾದಿ ತಪ್ಪಿದೆ
ಹಾ ಆಗೋಗಿದೆ ಮಾಯ,
ಈ ನನ್ನ ಮುದ್ದಿನ ಹೃದಯ
ಆ ಕುಡಿನೋಟವ ಎಡವಿ ಜಾರಿ ಬಿದ್ದಿದೆ ಜೀವ
ನಾ ಋಷಿಯಂತೆ ಇದ್ದೆ, ನೀ ಖುಷಿಯಂತೆ ಬಂದೆ
ಆ ಮುಂಗುರುಳ ಸರಿಸಿ, ನಿಲಿಸಿಬಿಟ್ಟೆ ನೀ ಜಪವ
ಇದೂ ಕೂಡ ಪವನ್ ಒಡೆಯರ್ ಚಿತ್ರದ ಹಾಡೇ. ಇದರ ಥೀಮ್ ಕೂಡ 'ಪ್ಯಾರ್ಗೇ ಆಗ್ಬಿಟ್ಟೈತೆ' ಎನ್ನುವ ಸಾಹಿತ್ಯವನ್ನೇ ಹೊಂದಿದೆ. ಇದನ್ನು ಬರೆದಿದ್ದೂ ಕೂಡ ಪವಲ್ ಒಡೆಯರ್ರೇ. ಆದರೆ ಎರಡೂ ಹಾಡುಗಳೂ ಪ್ರೀತಿ ಆಗಿದೆ ಎನ್ನುವುದನ್ನೇ ಹೇಳಿದರೂ ಎರಡರ ಮೂಡು ಮಾತ್ರ ಬೇರೆ ಬೇರೆ. ಬಹುಷಃ ಅಲ್ಲಿನ ಪ್ರೀತಿಗೂ, ಇಲ್ಲಿನ ಪ್ರೀತಿಗೂ, ಆ ಚಿತ್ರಕ್ಕೂ ಈ ಚಿತ್ರಕ್ಕೂ ಇರುವ ವ್ಯತ್ಯಾಸವನ್ನು ಈ ಹಾಡೇ ಹೇಳುತ್ತದೆ. ಸಂಗೀತ ಜೋಶ್ವಾ ಶ್ರೀಧರ್ ಅವರದ್ದಾದರೂ ಹಾಡಿನಲ್ಲಿರುವ ಜೋಶ್ ತುಂಬಿದ ಫ್ಲೇವರ್ ಮಾತ್ರ ಪವನ್ ಅವರದ್ದೇ.
ಹಳೆ ರೆಕಾರ್ಡ್
ಹಾಡು: ರಂಗ ಕುಣಿದು ರಂಗು ಏರಿ ಪರಿಷೆ ಮುಗಿದವೋ
ಚಿತ್ರ: ಮತದಾನ
ಸಾಹಿತ್ಯ: ಎಚ್.ಎಸ್. ವೆಂಕಟೇಶಮೂರ್ತಿ
ಸಂಗೀತ: ಸಿ. ಅಶ್ವಥ್, ವಿ.ಮನೋಹರ್
ಗಾಯಕರು: ಯುವರಾಜ್, ಎಂ.ಡಿ. ಪಲ್ಲವಿ ಮತ್ತು ಸಂಗಡಿಗರು.
ರಂಗ ಕುಣಿದು ರಂಗು ಏರಿ ಪರಿಷೆ ಮುಗಿದವೋ
ಹಂಗು ಹಿಂಗು ಮನಸು ಸೇರಿ ದೂರವಾದವೋ
ದೂರ ದೂರವಾದವೋ
ತಾರೆ ಮರದ ನೆರಳಿನಲ್ಲಿ ವಾರೆಯಾಗಿ ಕುಂತ ದೇವಿ
ಸೋಮರಾಮ ವೇಷವುಟ್ಟು ಬಣ್ಣಬಣ್ಣದಾಟ ತೊಟ್ಟು
ಮೂರು ಮರದ ತೋಪಿನಲ್ಲಿ ಊರಜಾತ್ರೆಯೋ
ಕುಂತು ನೋಟ ಬೀರುತಾಳೆ ಹರನ ಗಂಗೆಯೋ ದೇವಿ ಲೋಕಮಾತೆಯೋ
ಮೊದ ಮೊದಲು ಪೂಟ್ ಟ್ಯಾಂಪಿಂಗ್ ನಂಬರ್ ಎನಿಸಿದರೂ ಕೊನೆಯಲ್ಲಿ ಬರುವ 'ಹಕ್ಕಿಯಂತೆ ಹಾರಿದವಳ ತಿರುಗಿ ತಿರುಗಿ ನೋಡಬಯಸಿ, ಉಳಿದೇನಲ್ಲಾ ನಾನು ಬರಿಯ ಕನಸಲೇ. ಅಳಿಯಂತೆ ಉಳಿಯಲೇನೇ, ಉಳಿದು ನಿನ್ನ ನೆನಪಲೇನೆ, ನೆನಪ ಹಂಚಿಕೊಳ್ಳಲೇನೆ, ಹಂಚಿಕೊಂಡು ಬಾಳಲೇನೆ, ಬರಲೇ ನಿನ್ನಾ ಬಳಿಗೆ ಹೇಳೆ ಜೀವವೇ' ಎಂಬ ಎಮೋಷನಲ್ ಟಚ್ ಈ ಹಾಡಿಗೂ ಅದೆಂಥದೋ ಮಾಂತ್ರಿಕ ಸ್ಪರ್ಶ ನೀಡಿದೆ. ಟಿ.ಎನ್. ಸೀತಾರಾಮ್ ನಿರ್ದೇಶನದ ಈ ಚಿತ್ರದಲ್ಲಿ ಇದೊಂದೇ ಹಾಡಿನ ಬಗ್ಗೆ ಮಾತ ಾಡಿದರೆ ಅದು ದೊಡ್ಡ ಅಪರಾಧ. ಅಶ್ವಥ್ ಮತ್ತು ಮನೋಹರ್ ಸಂಗೀತದಲ್ಲಿ ಸಂಗೀತಪ್ರಿಯರಿಗೆ ಸಾಹಿತ್ಯ ಹಬ್ಬವಾಗಿತ್ತು ಮತದಾನ.