ಚಂದ್ರ ತೇಜಸ್ಸು

Updated on: 

ಬೇಕಿದ್ದರೆ ಇದನ್ನು ಮುಂಗಾರುಮಳೆಯ ಸೈಡ್ ಎಫೆಕ್ಟ್ ಎನ್ನಬಹುದು. ಏಕೆಂದರೆ ನಿರ್ದೇಶಕ ಆರ್. ಚಂದ್ರು ಕೂಡ ಯೋಗರಾಜ್‌ಭಟ್ಟರ ಹಾದಿ ಹಿಡಿದಿದ್ದಾರೆ. ಹಾಗಂತ ಚಂದ್ರು ಬಾಲಿವುಡ್‌ಗೆ ಹೋಗುತತಿದ್ದಾರೆ ಎಂದುಕೊಳ್ಳಬೇಕಿಲ್ಲ. ಭಟ್ಟರು ಯೋಗರಾಜ್ ಮೂವೀಸ್ ಮೂಲಕ ತಮ್ಮ ಶಿಷ್ಯಂದಿರ ಸಿನಿಮಾಗಳಿಗೆ ಆಸರೆಯಾಗುತ್ತಿರುವುದು ಎಲ್ಲರಿಗೂ ಗೊತ್ತು. ಈಗ ಚಂದ್ರು ಕೂಡ ಆರ್. ಚಂದ್ರು ಮೂವೀಸ್ ಮೂಲಕ ಅದೇ ಕೆಲಸ ಮಾಡುತ್ತಿದ್ದಾರೆ. ಬಹಳ ವರ್ಷಗಳಿಂದ ತಮ್ಮ ಜೊತೆಯಲ್ಲಿದ್ದ ತೇಜಸ್ ಎನ್ನುವವರನ್ನು ನಿರ್ದೇಶಕರನ್ನಾಗಿಸಿರುವ ಚಂದ್ರು 'ಮಳೆ' ಎಂಬ ಸಿನಿಮಾ ಮಾಡಲು ಹೊರಟಿದ್ದಾರೆ. ಈ ಹಿಂದೆ 'ಮಳೆ' ಚಿತ್ರದ ಕಥೆ, ಚಿತ್ರಕಥೆ ಸಿದ್ಧಪಡಿಸಿಕೊಂಡು ತಾವೇ ನಿರ್ದೇಶನ ಮಾಡಲು ಯೋಜನೆ ಹಾಕಿದ್ದ ಚಂದ್ರು ಅದನ್ನು ಈಗ ತಮ್ಮ ಶಿಷ್ಯನ ಕೈಗೆ ಒಪ್ಪಿಸಿದ್ದಾರೆ. ಹಾಗಾಗಿ ಇಲ್ಲಿ ಹಣ ಹೂಡುವ ಜವಾಬ್ದಾರಿ ಮಾತ್ರ ಚಂದ್ರು ಅವರದ್ದು. ಕಥೆ ನನ್ನದೆ, ಆದರೆ ಉಳಿದೆಲ್ಲವನ್ನೂ ತೇಜಸ್ ಅವರಿಗೇ ಬಿಟ್ಟಿದ್ದೇನೆ. ಅವರಲ್ಲೂ ಹೊಸ ಐಡಿಯಾಗಳಿವೆ. ಅವರು ಒಳ್ಳೆಯ ಸಿನಿಮಾ ಮಾಡುತ್ತಾರೆ ಎಂಬ ನಂಬಿಕೆ ನನಗಿದೆ ಎನ್ನುತ್ತಾರೆ ಚಂದ್ರು. ಅಂದಹಾಗೆ, ಈ 'ಮಳೆ' ಚಿತ್ರಕ್ಕೆ  ನಾಯಕನಾಗಿ, ಮತ್ತೆ ಮಳೆ ಹುಯ್ಯುತಿದೆ, ಎಲ್ಲ ನೆನಪಾಗುತಿದೆ ಎನ್ನುತ್ತಿರುವುದು ನೆನಪಿರಲಿ ಪ್ರೇಮ್. ಮಳೆಯ ನಾಯಕಿ ಅಮೂಲ್ಯ.

- ಹ್ಯಾರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com