

ಇಂದು ಮಹಿಳಾ ದಿನ. ನಮ್ಮ ಸುತ್ತಮುತ್ತ, ಮಹಿಳಾ ಸಮಾಜಗಳು ನಮ್ಮೆದುರು ಹೇರಳವಾಗಿದ್ದರೂ ಸಮಾಜದಲ್ಲಿ ಮಹಿಳೆಯರಿಗೆ ಸಿಗುತ್ತಿರುವ ಪ್ರಾಶಸ್ತ್ಯ ಅಷ್ಟಕ್ಕಷ್ಟೆ. ಚಿತ್ರರಂಗವೂ ಇದಕ್ಕೆ ಹೊರತಲ್ಲ. ಪತ್ರಿಕೆಗಳಲ್ಲಿ, ಟಿವಿ ಚಾನೆಲ್ಗಳಲ್ಲಿ ಗ್ಲಾಮರ್ನ ನೆಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸಮಾಧಾನಕರ ಬಹುಮಾನ ಬಿಟ್ಟರೆ ಉಳಿದಂತೆ ದೊಡ್ಡ ಬದಲಾವಣೆಗಳೇನೂ ಆಗಿಲ್ಲ. ಹೀರೋಗಳ ಸಂಭಾವನೆ ಪೆಟ್ರೋಲ್ ರೇಟ್ನಂತೆ ಹೆಚ್ಚಾಗುತ್ತಿದ್ದರೂ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಹೀರೋಯಿನ್ಗಳ ಸಂಭಾವನೆ ಹಾಲಿನ ದರದಂತೆ. ವರ್ಷಕ್ಕೊಮ್ಮೆ 1 ರುಪಾಯಿ ಜಾಸ್ತಿ ಆದರೂ 'ಅಯ್ಯೋ, ತುಂಬಾ ದುಬಾರಿ ಆಯ್ತು ಕಣ್ರೀ' ಎನ್ನುವ ಹಾಲತ್ ಚಿತ್ರರಂಗದ್ದು. ಇಲ್ಲಿ ಮಹಿಳಾ ದಿನಾಚರಣೆಯ ನೆಪದಲ್ಲಿ ಚಿತ್ರರಂಗದ ಕೆಲವು ಮಹಿಳಾಮಣಿಗಳ ಜೊತೆ ಹರಿ ಮಾತುಕತೆ.
1. ನಿಮ್ಮ ಪ್ರಕಾರ 'ಮಹಿಳಾ ಪ್ರಧಾನ ಚಿತ್ರ' ಎಂದರೆ ಏನು?
2. ಯಾವುದೇ ರಂಗದಲ್ಲಿ ಮಹಿಳೆಯರಿಗೆ ಮೀಸಲಾತಿ ಬೇಕಾ?
3. ಮಾರ್ಚ್ 8ರ ಮಹಿಳಾ ದಿನಾಚರಣೆಯಿಂದ ನೀವು ಏನನ್ನು ಬಯಸುತ್ತೀರಿ?
ಕವಿತಾ ಲಂಕೇಶ್