ಮೌರ್ಯ ಸಾಮ್ರಾಜ್ಯ

ದಕ್ಷಿಣ ಭಾರತೀಯ ಚಿತ್ರರಂಗದ ಮಟ್ಟಿದೆ ಈಕೆಯೇ ನಂ.1 ನಾರಿ. ಐಟಂ ಹಾಡುಗಳಿಗೆ ಈಕೆ ಗಜ್ಜೆ ಕಟ್ಟಿ ನಿಂತರೆ ಕ್ಯಾಮೆರಾಗೂ ಚಳಿ ಮತ್ತು ಬಿಸಿ ಒಟ್ಟೊಟ್ಟಿಗೆ. ಚಿತ್ರರಸಿಕನ ಎದೆಯಲ್ಲೇನೋ ತಳಮಳ.
ಮೌರ್ಯ ಸಾಮ್ರಾಜ್ಯ
Updated on: 

ತುಂಬು ದೇಹದ ತುಂಡುಡುಗೆಯ ನಟಿ. 'ನಾ ಅಕ್ಕಿ ಪೇಟೆ ಲಕ್ಕಮ್ಮ, ಸಿಕ್ಕಾಪಟ್ಟೆ ಕಿಕ್ಕಮ್ಮ' ಎಂದು ಈಕೆ ಹಾಡದಿದ್ದರೂ ದಕ್ಷಿಣ ಭಾರತೀಯ ಚಿತ್ರರಂಗದ ಅತ್ಯಂತ ಬೇಡಿಕೆಯ ಲಕ್ಕಮ್ಮ. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗವನ್ನು ಸರಸರನೆ ಐದಾರು ಸುತ್ತು ಹೊಡೆದಿರುವ ಈ ನೃತ್ಯ ಬಾಲೆ ಬಾಳೆದಿಂಡಿನಂತೆ ಬಲು ಆಕರ್ಷಕ. ಮುಂಬೈ ಗಲ್ಲಿಯಿಂದ ಸೀದಾ ಹಾರಿ ಬಂದು ಬಹುಭಾಷೆಯ ನೃತ್ಯಗಾರ್ತಿಯಾಗಿರುವ ಈಕೆಯ ಹೆಸರು, ರಚನಾ ಮೌರ್ಯ.

ದಕ್ಷಿಣ ಭಾರತದ ನಾಲ್ಕು ಪ್ರಮುಖ ಭಾಷೆಗಳ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಹೆಜ್ಜೆ ಹಾಕುವ ಮೂಲಕ ಐಟಂ ನಂ.1 ಎನ್ನಿಸಿಕೊಂಡಿದ್ದಾಳೆ. ಐಟಂ ರಂಗಮಂಚಕ್ಕೆ ಎಷ್ಟೇ ಹೊಸ ನಟಿಯರು ಬಂದು ತಮ್ಮ ಝಲಕ್ ತೋರಿಸಿದರೂ ರಚನಾ ತನ್ನ ಎಂದಿನ ಬೇಡಿಕೆಯನ್ನು ಉಳಿಸಿಕೊಂಡಿರುವುದು ಹೆಮ್ಮೆಯೇ ಸರಿ. 'ಉಪ್ಪಿದಾದ ಎಂಬಿಬಿಎಸ್‌' ಚಿತ್ರದಲ್ಲಿ ಈಕೆಯ ಕಾಲ್ ಕುಣಿತದ ಸದ್ದಿಗೆ ಮಾರು ಹೋದ ಗಾಂಧಿನಗರ ಆಗಾಗ ಈಕೆಯ ಕಾಲ್‌ಶೀಟ್‌ಗೆ ಮುಂಬೈನ ಬಾಗಿಲು ತಟ್ಟಿದುಂಟು. ಈಗಲೂ ಮಿನಿಮಮ್ ಬಜೆಟ್ ಚಿತ್ರಗಳಿಂದ ಹಿಡಿದು ದೊಡ್ಡ ಬಜೆಟ್ ಚಿತ್ರಗಳವರೆಗೂ ಅಲ್ಲೊಂದು ಐಟಂ ಹಾಡು ಇದ್ದರೆ ರಚನಾ ಮೌರ್ಯಳೂ ಹೆಜ್ಜೆ ಹಾಕಲು ರೆಡಿ.

ಕನ್ನಡ ಒಂದರಲ್ಲೇ 'ಜಂಗ್ಲಿ', 'ಸೆಲ್ಯೂಟ್‌', 'ಕರಿಚಿರತೆ', 'ಪುಂಡ', 'ಗುಣ', 'ಕೋಟೆ' ಮುಂತಾದ ಚಿತ್ರಗಳಲ್ಲಿ ರಚನಾ ತನ್ನ ಮೈಮಾಟವನ್ನು ತೆರೆದಿಟ್ಟಿದ್ದಾಳೆ. ಕೇವಲ ಈಕೆಯ ಬಣ್ಣದ ಜಗತ್ತಿನ ಪಯಣ ಐಟಂ ಹಾಡಿಗೆ ಮಾತ್ರ ಸೀಮಿತವಾಗಿಲ್ಲ. ಐಟಂ ಹಾಡುಗಳಲ್ಲಿ ಹಾಟ್ ಕೇಕ್‌ನಂತೆ ಕಾಣಿಸಿಕೊಳ್ಳುವ ಸಂದರ್ಭದಲ್ಲೇ ಕೆಲ ಚಿತ್ರಗಳಲ್ಲಿ ಅತಿಥಿ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾಳೆ. ಮೂಲತಃ ಮಾಡೆಲ್ ಆಗಿದ್ದ ರಚನಾ, ಒಂದಿಷ್ಟು ಜಾಹೀರಾತುಗಳಲ್ಲಿ ಮಿಂಚಿದ ಮೇಲೆ ನೃತ್ಯಕ್ಕೆ ಮನಸೋತಳು. ನೃತ್ಯವನ್ನು ವೃತ್ತಿಯಾಗಿಸಿಕೊಂಡ ಮೇಲೆ ರಚನಾ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿಸಿಕೊಂಡು ಬಹುಭಾಷಾ ಐಟಂ ನಂ.1 ಎನ್ನಿಸಿಕೊಂಡಿದ್ದಾಳೆ.

-ಕೇಶು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com