ಲೂಜ್ ಗೀತೆ

Updated on: 

ಚಿತ್ರಕ್ಕೆ 'ಲೂಜ್‌ಗಳು' ಅಂತ ಹೆಸರಿದ್ದರೂ ಎಲ್ಲವನ್ನೂ ಪಕ್ಕಾ ಯೋಜನಾ ಬದ್ಧವಾಗಿ ರೂಪಿಸಿದ್ದಾರೆ ನಿರ್ದೇಶಕ ಅರುಣ್. ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ನಡೆಯಿತು. ಆಡಿಯೋ ಹಾಗೂ ಖಾಸಗಿ ವಾಹಿನಿಗಳಿಗೆ ಟ್ರೈಲರ್ ಬಿಡುಗಡೆ ಮಾಡಲಾಯಿತು. ಮುರಳಿ, ಶ್ರೀಕಿ, ಅಕುಲ್ ಬಾಲಾಜಿ, ಐಶ್ವರ್ಯನಾಗ್, ಶ್ರವ್ಯಾ, ರೇಖಾ ಚಿತ್ರದ ನಾಯಕ ಗಣದಲ್ಲಿದ್ದಾರೆ. ವಾಣಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಸಯ್ಯದ್ ಹುಸೇನ್ ನಿರ್ಮಾಪಕರು. ಚಿದಾನಂದ್ ಛಾಯಾಗ್ರಹಣ ಮಾಡಿದ್ದಾರೆ. ಆರಂಭದಿಂದಲೂ ಒಂದಲ್ಲ ಒಂದು ವಿಭಿನ್ನತೆ ಮೆರೆಯುತ್ತಲೇ ಬರುತ್ತಿರುವ ನಿರ್ದೇಶಕ ಅರುಣ್, ಅಂದು ನಡೆದ ಆಡಿಯೋ ಬಿಡುಗಡೆ ಸಹ ಭಿನ್ನವಾಗಿಯೇ ಆಯೋಜಿಸಿದ್ದರು. ಹೀಗಾಗಿ ಚಿತ್ರದ ಹೆಸರು 'ಲೂಜ್‌ಗಳು' ಎಂದಿದ್ದರೂ, ಚಿತ್ರ ಮಾತ್ರ ತುಂಬಾ ಟೈಟಾಗಿ ಬಂದಿರುತ್ತದೆ ಎಂಬುದು ಚಿತ್ರತಂಡದ ಅಭಿಪ್ರಾಯ.

 ಆಡಿಯೊ ಬಿಡುಗಡೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಮುಖ್ಯ ಅಥಿತಿಗಳಾಗಿ ಆಗಮಿಸಿ, 'ಹೊಸಬರು ಮಾಡಿರುವ ಚಿತ್ರಗಳು ಗೆಲ್ಲುತ್ತಿವೆ. ಹಾಗೆ ನಿಮ್ಮ ಚಿತ್ರವೂ ಗೆಲ್ಲಲಿ' ಎಂದು  ಹಾರೈಸಿದರು.

ನಿರ್ದೇಶಕರಿಗೆ ಇದು ಮೊದಲ ಚಿತ್ರವಾದರೂ ಕಥೆ, ಚಿತ್ರಕಥೆ ಅಚ್ಚುಕಟ್ಟಾಗಿ ಮಾಡಿಕೊಂಡಿದ್ದರಿಂದ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆಯಂತೆ. 'ಮಲ್ಟಿಸ್ಟಾರ್ ಚಿತ್ರವಾದರೂ ಯಾವುದೇ ತೊಂದರೆ ಆಗಲಿಲ್ಲ. ಎಲ್ಲರ ಸಹಕಾರ ಇದ್ದಿದ್ದರಿಂದ ಅಂದುಕೊಂಡಂತೆ ಸಿನಿಮಾ ಮಾಡಿದ್ದೇನೆ. ವಾಣಿ ಹರಿಕೃಷ್ಣ ಅವರು ತುಂಬಾ ಚೆನ್ನಾಗಿರುವ ಸಂಗೀತ ಕೊಟ್ಟಿದ್ದಾರೆ. ಪಕ್ಕಾ ಯೂತ್ ಓರಿಯಂಟೆಡ್ ಪ್ರೇಮ ಕಥೆ. ಇಲ್ಲಿ ತರಲೆ, ತಮಾಷೆ, ಪ್ರೀತಿ, ಪ್ರೇಮ, ಸೆಂಟಿಮೆಂಟ್ ಎಲ್ಲ ಅಂಶಗಳೂ ಇವೆ. ಹೀಗಾಗಿ ಎಲ್ಲ ವರ್ಗದ ಪ್ರೇಕ್ಷಕರು ನೋಡುವಂಥ ಚಿತ್ರವಿದು' ಎಂಬುದು ಅರುಣ್ ಭರವಸೆ. ವಾಣಿ ಹರಿಕೃಷ್ಣ ನಿರ್ದೇಶಕರು ಹೇಳಿದಂತೆ ಟ್ಯೂನ್‌ಗಳನ್ನು ಸೆಟ್ ಮಾಡಿ ಕೊಟ್ಟಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆ. ಎಲ್ಲ ಹಾಡುಗಳನ್ನೂ ಕನ್ನಡದ ಹೊಸ ಗಾಯಕ- ಗಾಯಕಿಯರಿಂದಲೇ ಹಾಡಿಸಿದ್ದಾರಂತೆ. ಇನ್ನು ಹಾಡುಗಳಿಗೆ ಸಾಹಿತ್ಯ ಕೂಡ ಹೊಸಬರಿಂದಲೇ ಬರೆಸಿರುವುದು ವಿಶೇಷ.

ನಾಯಕ ನಟ ಮುರಳಿಗೆ 'ಲೂಜ್‌ಗಳು' ಪಾತ್ರ ಮತ್ತು ಅದರ ಕಥೆ ಮೇಲೆ ತುಂಬಾ ನಂಬಿಕೆ ಇದೆ. ಪ್ರತಿಯೊಬ್ಬರ ಪಾತ್ರದಲ್ಲಿ ಹೊಸತನ ಇದೆ. ಹೊಸ ಹೊಸ ಲೋಕೇಶ್‌ನಲ್ಲಿ ಚಿತ್ರೀಕರಣ ಮಾಡಿರುವುದು ಚಿತ್ರತಂಡಕ್ಕೆ ಹೊಸ ಅನುಭವ ನೀಡಿದೆ ಎಂಬುದು ಮುರಳಿ ಮಾತು. ಶ್ರೀಕಿ, ಅಕುಲ್ ಬಾಲಾಜಿ, ಐಶ್ವರ್ಯನಾಗ್, ಚಿದಾನಂದ್ ಎಲ್ಲರೂ ಅಭಿಪ್ರಾಯಗಳನ್ನು ಹಂಚಿಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com