

ಅದೇನೇನ್ ಹೆಸರಿಡ್ತಾರಪ್ಪ ಎಂದು ಆಡಿಕೊಳ್ಳುವವರ ಬಾಯಿಗೆ ಆಸ್ಪದ ಕೊಡುವಂತೆ 'ಮನಿ, ಹನಿ, ಶನಿ' ಎಂಬ ಹೆಸರಿನ ಚಿತ್ರವೊಂದು ಸೆಟ್ಟೇರಿದೆ. ಚಿತ್ರದ ನಿರ್ದೇಶಕ ರಾಜೇಶ್ ಮೂರ್ತಿ ಶೀರ್ಷಿಕೆಯಲ್ಲೇ ಹಲವು ಅರ್ಥಗಳಿರುವ ಇದೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರ ಎನ್ನುತ್ತಾರೆ. 'ಮನಿ' ಎನ್ನುವುದು ಚಿತ್ರದ ನಾಯಕನ್ನು ಹೇಗೆ 'ಶನಿ'ಯಂತೆ ಕಾಡುತ್ತದೆ, ಅದರಿಂದಾಗಿ ಅವನು ತನ್ನ 'ಹನಿ'ಯೊಂದಿಗೆ ಯಾವ ರೀತಿಯ ಸಂಕಟಗಳನ್ನು ಅನುಭವಿಸುತ್ತಾನೆ ಎಂಬುದು ಚಿತ್ರದ ಕಥೆಯಂತೆ. ಕೇವಲ ಐದು ಕಲಾವಿದರೊಂದಿಗೆ ಚಿತ್ರೀಕರಣ ನಡೆಸುವ ಯೋಜನೆ ಇರುವ ನಿರ್ದೇಶಕರು ಇದೊಂದು ಪ್ರಯೋಗಾತ್ಮಕ ಚಿತ್ರ ಎನ್ನುತ್ತಾರೆ. ಮೋನಿಶ್ ನಾಗರಾಜ್, ಭಾವನಾ ರಾವ್, ಕಂಚನ್ ರಾಮ್‌ಪ್ರಸಾದ್, ಆರ್‌ಜೆ ಪೃಥ್ವಿ, ವಾಸು ದೀಕ್ಷಿತ್ ಚಿತ್ರದ ತಾರಾಗಣದಲ್ಲಿದ್ದು ಈಗಾಗಲೇ ಈ ಚಿತ್ರದ ಬಗ್ಗೆ ಫೇಸ್‌ಬುಕ್‌ನಲ್ಲೂ ಪ್ರಚಾರ ಆರಂಭಿಸಿದೆ ಚಿತ್ರತಂಡ.