ಕನ್ನಡ ಚಿತ್ರ ತೇರು

ಕನ್ನಡ ಚಿತ್ರ ತೇರು
Updated on: 

ಕನ್ನಡ ಉಳಿಸುವ ಕಾಳಜಿ ಈಗ ಸಾಹಿತಿಗಳ ಮಟ್ಟಕ್ಕಷ್ಟೇ ಉಳಿದಿಲ್ಲ. ಚಿತ್ರರಂಗದವರೂ ಈ ನಿಟ್ಟಿನಲ್ಲಿ ಭರದ ಹೆಜ್ಜೆ ಹಾಕುತ್ತಿದ್ದಾರೆ. ಅದರಲ್ಲೂ ಕನ್ನಡ ರಾಜ್ಯೋತ್ಸವದಂಥ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಆಚರಿಸುವ ಟೆಲಿ ಕ್ರಿಯೇಷನ್ಸ್ ಈಗ ಹೊಸ ಯಾತ್ರೆಗೆ ಸಜ್ಜಾಗಿದೆ.

ಅಂದಹಾಗೆ, ಈ ಕಾರ್ಯಕ್ರಮದ ಹೆಸರು 'ಕನ್ನಡ ಚಿತ್ರ ತೇರು'. ಕನ್ನಡ ಚಿತ್ರರಂಗ 80 ವಸಂತ ಪೂರೈಸುತ್ತಿರುವ ಈ ಹೊತ್ತಿನಲ್ಲಿ ಕನ್ನಡ ಕಹಳೆ ಊದುವ ಹೊಣೆಯನ್ನು ಹೀಗೆ ಹೊತ್ತವರು ಎಸ್‌ಎಲ್‌ಎನ್ ಸ್ವಾಮಿ. ಕಾರ್ಯಕ್ರಮದ ನಿರ್ದೇಶಕರೂ ಇವರೇ. ಇವರೊಂದಿಗೆ ಮಾಸ್ಟರ್ ಹಿರಣ್ಣಯ್ಯ, ವಿ. ಮನೋಹರ್, ಟಿ.ಎಸ್. ನಾಗಾಭರಣ್, ಶಶಿಧರ್, ನಾಗೇಂದ್ರ ಪ್ರಸಾದ್, ಮಹಾದೇವನ್, ಬಾಬು ರಮೇಶ್ ಹಾಗೂ ಚಂದ್ರ ತಂಡದಲ್ಲಿದ್ದಾರೆ. ದೇಶದ 6ನೇ ಅತಿದೊಡ್ಡ ನಗರ ಬೆಂಗಳೂರಿನಲ್ಲಿ ಕನ್ನಡ ದಿನೇ ದಿನೇ ಕಾಣೆಯಾಗುತ್ತಿರುವುದರಿಂದ ಈ ಬಗ್ಗೆ ಅರಿವು ಮೂಡಿಸುವ ಹೊಣೆಯನ್ನು 'ಕನ್ನಡ ಚಿತ್ರ ತೇರು' ಹೊರುತ್ತಿದೆ. ಮಾಲ್‌ಗಳು, ಐಟಿ ಬಿಟಿ ಕಂಪನಿಗಳು, ಕನ್ನಡಿಗರ ಸಂಖ್ಯೆ ಕಡಿಮೆಯಿರುವ ಬಡಾವಣೆ ಸೇರಿದಂತೆ 80ಕ್ಕೂ ಅಧಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆ. 80 ಸಂಗೀತಗಾರರು ತಮ್ಮ ಸುಮಧುರ ಕಂಠದಿಂದ ಕನ್ನಡ ಸುಧೆ ಹರಿಸಲಿದ್ದಾರೆ. ಈ ಕಾರ್ಯಕ್ರಮದ ಅಂದಾಜು ವೆಚ್ಚ 2 ಕೋಟಿ ರುಪಾಯಿ. ನವೆಂಬರ್ 20ರಂದು ಫ್ರೀಡಂ ಪಾರ್ಕಿನಲ್ಲಿ 'ಕನ್ನಡ ಚಿತ್ರ ತೇರು'ಗೆ ಚಾಲನೆ ದೊರಕಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com