ದಾವಣಗೆರೆಯ ಸಾಹುಕಾರ ದೇವದಾಸಿಯ ಜೊತೆ ಸಂಬಂಧ ಇಟ್ಟುಕೊಂಡಿರುತ್ತಾನೆ. ಸಾಹುಕಾರನ ಹೆಂಡತಿ 'ಮಕ್ಕಳೆಲ್ಲ ಬೆಳೆದಿದ್ದಾರೆ. ಈ ವಯಸ್ಸಿನಲ್ಲಿ ಇದೆಲ್ಲಾ ಬೇಕಾ?' ಎಂದು ಗಂಡನನ್ನು ಬಯ್ಯುತ್ತಾಳೆ. ಅಲ್ಲದೆ ದೇವದಾಸಿಯನ್ನೂ ತೆಗಳುತ್ತಾಳೆ. ಈ ದೃಶ್ಯವನ್ನು ತಿಪ್ಪಜ್ಜಿ ಸರ್ಕಲ್ ಚಿತ್ರಕ್ಕಾಗಿ ಬಿ.ದುರ್ಗದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು. ಈ ಚಿತ್ರದ ಶೇಕಡ 40 ರಷ್ಷು ಚಿತ್ರಿಕರಣ ಪೂರ್ಣಗೊಂಡಿದ್ದು ಇದೇ ತಿಂಗಳ 26 ರಿಂದ ಚಿತ್ರದುರ್ಗ, ಸಂಡೂರು ಸುತ್ತಮುತ್ತ ಚಿತ್ರೀಕರಣ ಮುಂದುವರೆಯಲಿದೆ. ರೂಬಿ ಸಿನಿ ಕ್ರಾಫ್ಟ್ಸ್ ಸಂಸ್ಥೆಯಲ್ಲಿ ಆರ್.ಜಿ.ಸಿದ್ದರಾಮಯ್ಯ, ಎಸ್.ಕೆ.ವಿನೋದ್ ಕೃಷ್ಣ ನಿರ್ಮಿಸುತ್ತಿರುವ ಆದಿತ್ಯ ಚಿಕ್ಕಣ್ಣ ಚಿತ್ರ ಕಥೆ ರಚಿಸಿ ನಿರ್ದೇಶಿಸುತ್ತಿರುವ ತಿಪ್ಪಜ್ಜಿ ಸರ್ಕಲ್ ಚಿತ್ರಕ್ಕೆ ಪಿ.ಕೆ.ಹೆಚ್.ದಾಸ್ ಛಾಯಾಗ್ರಹಣ, ಡಾ. ಬಿ.ಎಲ್.ವೇಣು, ಕಥೆ ಮತ್ತು ಸಂಭಾಷಣೆ, ಭರಣಿ ಶ್ರೀ. ಸಂಗೀತ, ಇದೆ. ಪೂಜಾಗಾಂಧಿ, ಡಾ.ಸುರೇಶ್ ಶರ್ಮ, ಧ್ರುವಶರ್ಮ ನೇಹಾ ಪಾಟೀಲ್, ಶ್ರೀನಿವಾಸಮೂರ್ತಿ, ಮಾನಸಿ, ಮುಂತಾದವರು ತಾರಾಬಳಗದಲ್ಲಿದ್ದಾರೆ.