ರೌಡಿಗೆ ನಾಯಕನ ರಕ್ತ

Updated on: 

ರೌಡಿ ಮೈಕೋನಾಗರಾಜನ ಸಹೋದರ ಹೊಡೆದಾಟದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿರುತ್ತಾನೆ.  ಆತನಿಗೆ  ಎ  ನೆಗೆಟಿವ್ ರಕ್ತದ ಅವಶ್ಯಕತೆ ಇದ್ದಾಗ ನಾಯಕ ಲಿಖಿತ್‌ರಾಜ್ ತನ್ನ ರಕ್ತ ಕೊಡುತ್ತಾನೆ. ಮೇಲ್ಕಂಡ ದೃಶ್ಯವನ್ನು  ಬಿ.ಇ.ಎಲ್. ಸರ್ಕಲ್ ಸಮೀಪ ಇರುವ ರಾಜಲಕ್ಷ್ಮಿ ನರ್ಸಿಂಗ್ ಹೋಂನಲ್ಲಿ ಓಂ ಸಾಯಿ ಪ್ರಕಾಶ್ ನಿರ್ದೇಶನದ ಆ್ಯಕ್ಷನ್ ಚಿತ್ರಕ್ಕಾಗಿ  ಚಿತ್ರೀಕರಿಸಿಕೊಳ್ಳಲಾಯಿತು. ಇದರೊಂದಿಗೆ ಶೇ.75 ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು ಇದೇ 26 ರಿಂದ ಶಿಂಷಾದಲ್ಲಿ ಎರಡನೇ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ.
ನಿಮಿಷಾಂಭ ಸಿನಿ ಕಂಪೆನಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಎ.ಎಮ್.ನೀಲ್ ಸಂಗೀತ, ಜಿ.ರೇಣುಕುಮಾರ್ ಛಾಯಾಗ್ರಹಣ, ವಿಜಯಕುಮಾರ್.ಎಂ.ಸಿ. ಕಥೆ, ಚಿತ್ರಕಥೆ, ಸಂಭಾಷಣೆ ಇದೆ.  ಸಾಯಿಕುಮಾರ್, ಲಿಖಿತರಾಜ್ ಅರಸ್, ದುನಿಯಾ ರಶ್ಮಿ, ಸಾಧುಕೋಕಿಲ, ಪದ್ಮಜಾ ರಾವ್, ಶಂಕರ್ ಅಶ್ವತ್, ಸತ್ಯಜಿತ್, ರಾಜು ತಾಳಿಕೋಟೆ, ಮೈಕೋ ನಾಗರಾಜ್ ಮುಂತಾದವರ ತಾರಾಗಣವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com