ತಿಳಿಝಲಕ್

Updated on: 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಅಚ್ಚಿ ಶಾಸ್ತ್ರೀಯ ನೃತ್ಯ ಕೇಂದ್ರ 'ತಿಳಿಜಲ 2014' ಆಯೋಜಿಸಿದೆ. ಈ ಪ್ರಯುಕ್ತ ಏ.13ರಂದು ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನವಿದೆ. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಪ್ರಾಧ್ಯಾಪಕ ಪ್ರೊ. ಎಂ. ಕೃಷ್ಣೇಗೌಡ, ನೃತ್ಯಗುರು ಜ್ಯೋತಿ ಪಟ್ಟಾಭಿರಾಮ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಸಂಸ್ಥೆಯ ಹಿನ್ನೆಲೆ
ಅಚ್ಚಿ ಸಂಸ್ಥೆಯ ಸ್ಥಾಪಕಿ, ನಿರ್ದೇಶಕಿ ಪದ್ಮಿನಿ ಭರತನಾಟ್ಯದಲ್ಲಿ 'ವಿದ್ವತ್‌' ಮುಗಿಸಿದ್ದಾರೆ. 2002ರಲ್ಲಿ ಅಚ್ಚಿ ನೃತ್ಯ ಶಾಲೆ ತೆರೆದು ಸದ್ಯ 3 ಶಾಖೆ ಹಾಗೂ 100 ವಿದ್ಯಾರ್ಥಿಗಳನ್ನು ನಿಭಾಯಿಸುತ್ತಿದ್ದಾರೆ. 'ವಿಶೇಷ ಕನ್ನಡ ಕಣ್ಮಣಿ', 'ನೃತ್ಯ ಲಾಂಛನ' ಬಿರುದಾಂಕಿತೆ ಪದ್ಮಿನಿ, ಕುವೆಂಪು ಕವನ- ನಾಟ್ಯ ನಮನ, ಗಿರಿಜಾ ಕಲ್ಯಾಣ, ವಚನ ನವರಸ, ದಶಾವತಾರ, ಶ್ರೀ ಕೃಷ್ಣ ಲೀಲೆ ಸೇರಿದಂತೆ ನೂರಾರು ಕಾರ್ಯಕ್ರಮಗಳನ್ನು ಸಂಯೋಜಿಸಿ ನಿರ್ದೇಶಿಸಿದ್ದಾರೆ. ಅಚ್ಚಿ ಕೇಂದ್ರವು ದಶಕ ಪೂರೈಸಿದ ನೆನಪಿಗೆ 'ತಿಳಿಜಲ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮ: ತಿಳಿಜಲ 2014
ದಿನಾಂಕ: 13.04.2014
ಸಮಯ: ಸಂಜೆ 6.30
ಸ್ಥಳ: ಎ.ಡಿ.ಎ. ರಂಗಮಂದಿರ, ಜೆ.ಸಿ.ರಸ್ತೆ, ಬೆಂಗಳೂರು    

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com