ಕೌಶಿಕ್ ಬೇಟೆ

ಕೌಶಿಕ್ ಬೇಟೆ
Updated on: 

ನಟ ಪ್ರಜ್ವಲ್ ದೇವರಾಜ್ ಅಭಿನಯದ 'ಅಂಗಾರಕ' ಚಿತ್ರ ಈ ವಾರ ತೆರೆ ಕಾಣಲಿದೆ. ಶ್ರೀನಿವಾಸ್ ಕೌಶಿಕ್ ನಿರ್ದೇಶನದ ಈ ಚಿತ್ರದ ನಿರ್ಮಾಪಕರು ರಾಘವೇಂದ್ರ ಹಾಗೂ ಜಯಸುಧಾ ರಾಘವೇಂದ್ರ. ನಿರಂಜನ್ ಬಾಬು ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ.

ಕೌಶಿಕ್ ಅವರು 'ಯಾರದು' ಹಾಗೂ 'ಬೇಟೆ' ಚಿತ್ರಗಳ ನಂತರ 'ಅಂಗಾರಕ' ಎನ್ನುವ ಭಿನ್ನ ಶೀರ್ಷಿಕೆಯ ಚಿತ್ರವನ್ನು ಮಾಡಿದ್ದು, ಅದು ಪ್ರೇಕ್ಷಕರ ಮುಂದೆ ಬಂದಿದೆ. 'ಪ್ರಜ್ವಲ್ ದೇವರಾಜ್ ಸಿನಿಮಾ ಅಂದರೆ ಮಿನಿಮಮ್ ಗ್ಯಾರಂಟಿ ಗೆಲುವು' ಎನ್ನುವ ನಂಬಿಕೆ ಕೌಶಿಕ್ ಅವರದ್ದು. ಇನ್ನು ಕನ್ನಡದ ನಟಿಯಾಗಿದ್ದರೂ 'ಪೊರ್ಕಿ' ಚಿತ್ರದ ಮೂಲಕ ಬಂದ ಪ್ರಣೀತಾ, ತೆಲುಗಿನಲ್ಲಿ ಸದ್ದು ಮಾಡುತ್ತಿರುವ ಹುಡುಗಿ. 'ಅತ್ತಾರಿಂಟಿಕಿ ದಾರೇದಿ' ಚಿತ್ರದಲ್ಲಿ ನಟ ಪವನ್ ಕಲ್ಯಾಣ್ ಜೊತೆ ಹೆಜ್ಜೆ ಹಾಕಿದ ಮೇಲೆ ಒಂದಷ್ಟು ಸ್ಟಾರ್ ನಟಿ ಎನಿಸಿಕೊಂಡಿರುವ ಪ್ರಣೀತಾ, 'ಅಂಗಾರಕ' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವುದು ಚಿತ್ರದ ಪ್ಲಸ್ ಪಾಯಿಟ್ ಎಂಬುದು ನಿರ್ದೇಶಕರ ನಂಬಿಕೆ.  ತುಂಬಾ ದಿನಗಳ ನಂತರ ಪ್ರಜ್ವಲ್ ಚಿತ್ರದ ಮೂಲಕ ಗೆಲುವಿನ 'ಬೇಟೆ'ಗೆ ಹೊರಟಿರುವ ಶ್ರೀನಿವಾಸ್ ಕೌಶಿಕ್ ಅವರಿಗೆ 'ಅಂಗಾರಕ' ಚಿತ್ರ ಗೆದ್ದೇ ಗೆಲ್ಲುತ್ತದೆ ಎನ್ನುವ ಭರವಸೆ. 'ಮಾಮೂಲಿ ಕಥೆ ಎನಿಸಿದರೂ ತುಂಬಾ ಭಿನ್ನವಾಗಿ ನಿರೂಪಣೆ ಮಾಡಿದ್ದೇನೆ. ಪ್ರಜ್ವಲ್‌ರ ಹಿಂದಿನ ಚಿತ್ರಗಳಿಗಿಂತಲೂ ಈ ಚಿತ್ರ ವಿಶೇಷವಾಗಿರುತ್ತದೆ' ಎಂದರು ಕೌಶಿಕ್. ನಟಿ ಹಾರ್ದಿಕಾ ಶೆಟ್ಟಿ ಚಿತ್ರದ ಮತ್ತೊಬ್ಬ ನಾಯಕಿ. 'ಈ ಚಿತ್ರದಲ್ಲಿ ತುಂಬಾ ಒಳ್ಳೆಯ ಪಾತ್ರ ಮಾಡಿದ್ದೇನೆ. ಕೌಶಿಕ್ ಅವರಿಂದ ಕಥೆ ಕೇಳಿದಾಗಲೇ ಈ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂದುಕೊಂಡಿದ್ದೆ. ಪ್ರೇಕ್ಷಕರ ನಿರೀಕ್ಷೆಯಂತೆ ಈ ಚಿತ್ರ ಮೂಡಿ ಬಂದಿದೆ' ಎಂದರು ಹಾರ್ದಿಕಾ ಶೆಟ್ಟಿ. ನಟ ಮುನಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗೆಲುವಿನ ಕುದುರೆ ಎನಿಸಿಕೊಂಡಿರುವ ಅರ್ಜುನ್ ಜನ್ಯ ಅವರ ಸಂಗೀತದಲ್ಲಿ 5 ಹಾಡುಗಳು ಮೂಡಿ ಬಂದಿವೆ. ಎಲ್ಲ ಹಾಡುಗಳು ಚೆನ್ನಾಗಿವೆ ಎಂಬುದು ಚಿತ್ರತಂಡದ ಅಭಿಪ್ರಾಯ. 'ನನ್ನ ಮಟ್ಟಿಗೆ ಈ ಚಿತ್ರದ ಕಥೆ ವಿಶೇಷವಾಗಿದೆ. ಶೀರ್ಷಿಕೆಯಷ್ಟೆ ಕಥೆ ಕೂಡ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುತ್ತದೆ' ಎಂದರು ಪ್ರಜ್ವಲ್ ದೇವರಾಜ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com