ಉಗ್ರಂ

ಇತ್ತೀಚೆಗೆ ತೆರೆಕಂಡು ಭರ್ಜರಿ ಯಶಸ್ಸು ಗಳಿಸುತ್ತಿರುವ ಮುರಳಿ ಅಭಿನಯದ 'ಉಗ್ರಂ' ಚಿತ್ರ ಈಗ ಪರದೇಶ ಪ್ರವೇಶಕ್ಕೆ ಸಜ್ಜಾಗಿದೆ...
ಉಗ್ರಂ
Updated on: 

ಇತ್ತೀಚೆಗೆ ತೆರೆಕಂಡು ಭರ್ಜರಿ ಯಶಸ್ಸು ಗಳಿಸುತ್ತಿರುವ ಮುರಳಿ ಅಭಿನಯದ 'ಉಗ್ರಂ' ಚಿತ್ರ ಈಗ ಪರದೇಶ ಪ್ರವೇಶಕ್ಕೆ ಸಜ್ಜಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದ ಚೊಚ್ಚಲ ಚಿತ್ರವನ್ನು ರೀಲ್‌ಬಾಕ್ಸ್ ಸಂಸ್ಥೆ ಅಮೆರಿಕಾ, ಜರ್ಮನಿ, ಆಸ್ಟೇಲಿಯಾ, ಯುಎಇಯಲ್ಲಿರುವ ಕನ್ನಡಿಗರ ವೀಕ್ಷಣೆಗೆ ಕೊಂಡೊಯ್ಯಲಿದೆ.
ರೀಲ್‌ಬಾಕ್ಸ್ ಮತ್ತು ಇನ್‌ಫೈನೆಟ್ ಪಿಕ್ಟರ್ಸ್‌ನ ಈ ಪ್ರಯತ್ನ ವಿಶಿಷ್ಟವಾದದ್ದು. ಏಕೆಂದರೆ ವೈಫೈ ಸಂಪರ್ಕ ಬಳಸಿಕೊಂಡು, ಟೆಲಿವಿಶನ್‌ನ ಎಚ್‌ಡಿಎಂಐ ಪೋರ್ಟ್‌ಗೆ ಪ್ಲಗ್ ಮಾಡಬಹುದಾದ ಮೀಡಿಯಾ ಸ್ಟ್ರೀಮಿಂಗ್ ಡಾಂಗಲ್ ಮೂಲಕ 'ಉಗ್ರಂ' ಚಿತ್ರವನ್ನು ಅಲ್ಲಿನ ಜನರಿಗೆ ತಲುಪಿಸುತ್ತಿದೆ ರೀಲ್‌ಬಾಕ್ಸ್. 5.1 ಡಾಲ್ಬಿ ಸೌಂಡ್‌ನ ತಂತ್ರಜ್ಞಾನದೊಂದಿಗೆ 'ಉಗ್ರಂ' ಚಿತ್ರವನ್ನು ಪ್ರೇಕ್ಷಕರು ವೀಕ್ಷಿಸಬಹುದಂತೆ. 'ಈಗಾಗಲೇ ಇಲ್ಲಿ ಸಿನಿಮಾ ಹಿಟ್ ಆಗಿದೆ. ಒಂದು ಅತ್ಯುತ್ತಮ ಚಿತ್ರವನ್ನು ಅತ್ಯುತ್ತಮ ತಂತ್ರಜ್ಞಾನದೊಂದಿಗೆ ವಿದೇಶಕ್ಕೆ ಕೊಂಡೊಯ್ಯುವ ಪ್ರಯತ್ನ ನಮ್ಮದು' ಎನ್ನುವುದು ರೀಲ್‌ಬಾಕ್ಸ್ ನಿರ್ದೇಶಕ ರಘು ಹೇಳುವ ಮಾತು. ನಿರ್ದೇಶಕ ಪ್ರಶಾಂತ್ 'ಅನಿವಾಸಿ ಭಾರತೀಯರ ಬಳಿಗೂ ನಮ್ಮ ಉಗ್ರಂ ಸಿನಿಮಾ ಹೋಗುತ್ತಿರುವುದು ಸಂತಸದ ಸಂಗತಿ. ರೀಲ್‌ಬಾಕ್ಸ್‌ನ ಕೆಲಸ ಶ್ಲಾಘನೀಯ. ಇದು ಕೇವಲ 'ಉಗ್ರಂ' ಚಿತ್ರಕ್ಕಷ್ಟೇ ಅಲ್ಲ ಇಡೀ ಕನ್ನಡ ಚಿತ್ರರಂಗಕ್ಕೇ ಉತ್ತಮ ಕೊಡುಗೆ' ಎನ್ನುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com