
ಚೆನ್ನೈ: ಬಹುಬಾಷ ನಟ ಹಾಗೂ ನಿರ್ಮಾಪಕ ಕಮಲ್ ಹಾಸನ್ ಮೂರು ಭಾಷೆಗಳಲ್ಲಿ ಶಹಬಾಸ್ ನಾಯ್ಡು ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಮಾಹಿತಿ ಹೊರಹಾಕಿರುವ ಕಮಲ್ ಹಾಸನ್ ಶಹಬಾಸ್ ನಾಯ್ಡು ಚಿತ್ರವನ್ನು ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ನಿರ್ಮಿಸಲಿದ್ದಾರೆ.
ಟಿ.ಕೆ ರಾಜೀವ್ ಕುಮಾರ್ ನಿರ್ದೇಶನದ ಈ ಚಿತ್ರವನ್ನು ಮೂರು ಭಾಷೆಗಳಲ್ಲೂ ಏಕಕಾಲದಲ್ಲಿ ಚಿತ್ರೀಕರಣ ನಡೆಸುವುದಾಗಿ ಕಮಲ್ ಹಾಸನ್ ಹೇಳಿದ್ದಾರೆ. ಇನ್ನು ತೆಲುಗು ಮತ್ತು ತಮಿಳಿನಲ್ಲಿ ಶಹಬಾಸ್ ನಾಯ್ಡು ಎಂಬ ಟೈಟಲ್ ಇದ್ದು ಹಿಂದಿಗೆ ಶಹಬಾಸ್ ಕುಂಡು ಎಂದು ಹೆಸರಿಡಲಾಗಿದೆ.
ರಾಜ್ ಕಮಲ್ ಇಂಟರ್ ನ್ಯಾಷನಲ್ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ಕಮಲ ಹಾಸನ್ಸ ರಮ್ಯಾ ಕೃಷ್ಣ, ಶೃತಿ ಹಾಸನ್ ಹಾಗೂ ಬ್ರಹ್ಮಾನಂದಂ ಮುಖ್ಯ ಭೂಮಿಕೆಯಲ್ಲಿದ್ದಾರೆ.
2008 ರಲ್ಲಿ ತೆರೆಕಂಡ ದಶವತಾರಂ ಕಾಮಿಡಿ ಆಕ್ಷನ್ ಚಿತ್ರದಂತೆ ಶಹಬಾಸ್ ನಾಯ್ಡು ಚಿತ್ರದಲ್ಲೂ ಕಮಲ್ ಹಾಸನ್ ಮತ್ತು ತೆಲುಗು ಹಾಸ್ಯನಟ ಬ್ರಹ್ಮಾನಂದಂ ಮತ್ತೆ ತಮ್ಮ ಕಾಮಿಡಿ ಕಮಾಲ್ ತೋರಲಿದ್ದಾರೆ. ಮೇ 2ನೇ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಇಳಯರಾಜ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ.
Advertisement