ಭಾಷಾಂತರ: ಹರ್ಷವರ್ಧನ್ ಸುಳ್ಯ
ಚೆನ್ನೈ: ನಾಯಕ ಪ್ರಧಾನ ಪಾತ್ರಗಳ ಹೊರತಾಗಿಯೂ ಗಟ್ಟಿಯಾದ ಸತ್ವಯುತವಾದ ಮಹಿಳಾ ಪಾತ್ರದ ಮೂಲಕ ಮನೆತಾಗಿರುವ ಜೈ ಭೀಮ್ ಸಿನಿಮಾ ನಟಿ ಲಿಜೊಮೋಳ್ ಜೋಸ್. ತಮಿಳು ನಾಯಕ ನಟ ನಿರ್ಮಿಸಿ ನಟಿಸಿರುವ ಜೈ ಭೀಮ್ ಸಿನಿಮಾದಲ್ಲಿ ಶೋಷಿತ ಸಮುದಾಯಕ್ಕೆ ಸೇರಿದ ಮಹಿಳೆಯ ಪಾತ್ರವನ್ನು ಅವರು ನಿಭಾಯಿಸಿರುವ ರೀತಿ ದೇಶಾದ್ಯಂತ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಬುಡಕಟ್ಟು ಜನಾಂಗದ ಮಹಿಳೆ ಪಾತ್ರಕ್ಕೆ ಹೇಗೆ ತಯಾರಾದಿರಿ?
ಶುರುವಿನಲ್ಲಿ ನನಗೆ ಆ ಪಾತ್ರಕ್ಕೆ ಒಗ್ಗಿಕೊಳ್ಳುವ ಸಲುವಾಗಿ ತರಬೇತಿ ಹಾಗೂ ಕಾರ್ಯಾಗಾರಗಳನ್ನು ನೀಡಉವುದಾಗಿ ಜೈ ಭೀಮ್ ತಂಡದವರು ಹೇಳಿದ್ದರು. 90ರ ದಕಶಕದಲ್ಲಿ ನಡೆಯುವ ಘಟನೆಯನ್ನು ಆಧರಿಸಿದ ಈ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಆಗ ನನಗೆ ತಿಳಿದಿರಲಿಲ್ಲ. ತರಬೇತಿ ಸಮಯದಲ್ಲಿ ನಾನು ಮತ್ತು ಸಿನಿಮಾದಲ್ಲಿ ಪತಿಯಾಗಿ ನಟಿಸಿರುವ ಮಣಿಕಂಠನ್ ಇಬ್ಬರೂ ಬುಡಕಟ್ಟು ಜನಾಂಗ ಇರುಳರ ಕುಟುಂಬದ ಜೊತೆ ವಾಸವಿದ್ದೆವು. ಈ ಸಮಯದಲ್ಲಿ ಅವರ ಚಟುವಟಿಕೆಗಳು, ದೈನಂದಿನ ಜೀವನ ಮತ್ತಿತರ ಸೂಕ್ಷ್ಮಗಳನ್ನು ಕಲಿತುಕೊಂಡೆವು.
ನೀವು ನಿಜಕ್ಕೂ ಆ ಪಾತ್ರದ ಒಳಹೊಕ್ಕಿದ್ದೀರಿ?
ನಿಜ ಹೇಳಬೇಕೆಂದರೆ ನಾನು ಇನ್ನೂ ಆ ಪಾತ್ರದ ಗುಂಗಿನಿಂದ ಹೊರಬಂದಿಲ್ಲ. ಆ ಸಿನಿಮಾದಲ್ಲಿ ಭಾವನಾತ್ಮಕ ಸನ್ನಿವೇಶಗಳು ಬಹಳವೇ ಇದ್ದವು. ಆ ದೃಶ್ಯಗಳಲ್ಲಿ ನಟಿಸುವುದು ತುಂಬಾ ಸವಾಲಾಗಿತ್ತು.
ಮೂಲತಃ ಮಲಯಾಳಿಯಾದರೂ ತಮಿಳು ಸಿನಿಮಾದಲ್ಲಿ ಈ ಪರಿಯಾಗಿ ನಟಿಸುವ ಆತ್ಮವಿಶ್ವಾಸ ಬಂದಿದ್ದು ಹೇಗೆ?
ಸಿನಿಮಾ ಕತೆಯನ್ನು ನನಗೆ ನಿರೂಪಿಸಿದಾಗ ಈ ಸಿನಿಮಾದಲ್ಲಿ ನನಗೆ ನಟನೆಗೆ ಅವಕಾಶವಿದೆ ಎನ್ನುವುದು ತಿಳಿದುಹೋಯಿತು. ಸಿನಿಮಾದ ಪಾತ್ರಧಾರಿ ಸೆಂಗಿನಿಯಾಗಿ ನಾನು ಹಲವು ವಿಚಾರಗಳನ್ನು ಕನೆಕ್ಟ್ ಮಾಡಿಕೊಳ್ಲಬಲ್ಲೆನಾಗಿದ್ದೆ. ತರಬೇತಿ ಸಮಯದಲ್ಲಿ ಸುಲಲಿತವಾಗಿ ತಮಿಳು ಮಾತನಾಡಲು ಕಷ್ಟಪಡುತ್ತಿದ್ದೆ. ನಂತರ ಲಾಕ್ ಡೌನ್ ಘೋಣೆಯಾಯಿತು. ತುಂಬಾ ಬಿಡುವು ಸಿಕ್ಕಿತು. ಆ ಸಮಯವನ್ನು ತಮಿಳು ಕಲಿಯಲು ವಿನಿಯೋಗಿಸಿಕೊಂಡೆ.
ಬೆಳ್ಳಗಿರುವ ನೀವು ಈ ಸಿನಿಮಾಗಾಗಿ ಕಪ್ಪು ಬಣ್ನ ಬಳಿದುಕೊಂಡಿರಿ. ಆ ಬಗ್ಗೆ ಏನು ಹೇಳುತ್ತೀರಿ?
ಈ ಪ್ರಶ್ನೆಯನ್ನು ನಿರ್ದೇಶಕರಿಗೆ ಕೇಳಿದರೆ ಚೆನ್ನ. ಅವರು ಚೆನ್ನಾಗಿ ಉತ್ತರಿಸಬಲ್ಲರು. ಪಾತ್ರ ಹೇಗಿರಬೇಕು ಎನ್ನುವ ಕಲ್ಪನೆ ಅವರಿಗೆ ಚೆನ್ನಾಗಿ ಇರುತ್ತದೆ. ಹೀಗಾಗಿ ಆ ಪಾತ್ರವನ್ನು ತೆರೆ ಮೇಲೆ ಹೇಗೆ ತೋರ್ಪಡಿಸಬೇಕು ಎನ್ನುವ ಸ್ವಾತಂತ್ರ್ಯ ಅವರದೇ ಅಲ್ಲವೇ.
ಸೂರ್ಯ ಅವರ ಜೊತೆ ನಟಿಸಿದ ಅನುಭವ ಹೇಗಿತ್ತು?
ಅವರ ಜೊತೆ ನಟಿಸುವ ಸಂಗತಿಯಿಂದ ನಾನು ಎಕ್ಸೈಟ್ ಆಗಿದ್ದೆ. ಆತಂಕಕ್ಕೂ ಒಳಗಾಗಿದ್ದೆ. ಆದರೆ ಈ ಆತಂಕವನ್ನು ದೂರ ಮಾಡಲು ಅವರೇ ನೆರವಾದರು. ಸಿನಿಮಾ ಸ್ಕ್ರಿಪ್ಟ್ ವಿಚಾರವಾಗಿ ಮಾತನಾಡಲು ಅವರೇ ನನ್ನ ಬಳಿ ಬರುತ್ತಿದ್ದರು. ಆತಂಕ ದೂರ ಮಾಡಿ ಸಹಕಲಾವಿದರೊಂಡನೆ ಕಂಫ್ಹರ್ಟ್ ವಾತಾವರಣ ನಿರ್ಮಾಣ ಮಾಡುವ ಅವರ ಪ್ರಯತ್ನ ಯಶಸ್ವಿಯಾಯಿತು. ಅದು ಅವರ ದೊಡ್ಡ ಗುಣ.
'ಮಹೇಶಿಂಡೆ ಪ್ರತೀಕಾರಂ' ಮಲಯಾಳಂ ಸಿನಿಮಾ ಮೂಲಕ ಹೆಸರು ಪಡೆದಿದ್ದ ನಿಮ್ಮನ್ನು ಮುಂದೆ ಜೈ ಭೀಮ್ ಸಿನಿಮಾದಿಂದ ಗುರುತಿಸಲಿದ್ದಾರೆ
ಮಲಯಾಳಂನಲ್ಲಿ 'ಮಹೇಶಿಂಡೆ ಪ್ರತೀಕಾರಂ' ಸಿನಿಮಾ ನಂತರ ನನಗೆ ಅದೇ ರೀತಿಯ ಇಡುಕ್ಕಿ ಊರಿನ ಪಾತ್ರಗಳೇ ಸಿಗತೊಡಗಿದ್ದವು. ಹಾಗೆ ಒಂದೇ ಬಗೆಯ ಪಾತ್ರಕ್ಕೆ ಬ್ರ್ಯಾಂಡ್ ಆಗಲು ನನಗಿಷ್ಟವಿರಲಿಲ್ಲ. ಈಗ ಜೈಭೀಮ್ ಮೂಲಕ ಪ್ರೇಕ್ಷಕರು ನನ್ನನ್ನು ಹೊಸ ಬಗೆಯಿಂದ ನೋಡುವಂತಾಗಿದೆ ಎನ್ನುವುದೇ ಸಂತೋಷ.
Advertisement