ದಿಟ್ಟ ಪುಸ್ತಕಗಳು ಬಂದಿವೆ, ನಿಷೇಧಿಸಲು ಇದು ಸಮಯವೇನೋ?

ದಿಟ್ಟ ಪುಸ್ತಕಗಳು ಬಂದಿವೆ, ನಿಷೇಧಿಸಲು ಇದು ಸಮಯವೇನೋ?

ಅಧಿಕಾರಕ್ಕಾಗಿ ಜನರ ಮನಸ್ಸು ಬದಲಾಯಿಸುವಲ್ಲಿ ಚಾಣಕ್ಯ ಎಷ್ಟು ಚಾಣಕ್ಯನಾಗಿದ್ದ ಎನ್ನುವುದು ನಮಗೆಲ್ಲ ಗೊತ್ತಿದೆ. ಈಗ ಮತ್ತೊಮ್ಮೆ ಆತ ಹುಟ್ಟಿಬಂದು ಇಂದಿನ ರಾಜಕಾರಣದಲ್ಲಿ ಸಕ್ರಿಯನಾದರೆ, ಆತ(ಮತ್ತು ನಾವೂ) ಎಷ್ಟು ಮಜ ಅನುಭವಿಸಬಹುದಾಗಿತ್ತೋ ಯೋಚಿಸಿ? ಅಥವಾ ಒಂದು ವೇಳೆ ಪಶ್ಚಿಮ ಬಂಗಾಳ ಚೀನಾದ ಆಶ್ರಿತ ಪ್ರದೇಶವಾಗಿ ಮತ್ತು ಅದರ ಗವರ್ನರ್ ವೆನ್ ನಕ್ಸಲರನ್ನು ನಿಯಂತ್ರಿಸುವುದಕ್ಕೆ ತಿಣುಕಾಡುತ್ತಿರುವ ಚಿತ್ರಣವನ್ನು ಕಣ್ಮುಂದೆ ತಂದುಕೊಳ್ಳಿ? ಅಥವಾ...ರಾಮ ಇದ್ದನೆಂಬುದನ್ನು ರುಜುವಾತು ಮಾಡಲು ಯಾವುದೇ ಪುರಾವೆ ಇಲ್ಲ ಎಂಬ ಪ್ರತಿಪಾದನೆಯೊಂದು ಎದುರಾಯಿತೆಂದುಕೊಳ್ಳಿ?
ಕೂದಲು ನಿಮಿರಿಸುವಂಥ ಇಂಥ ದೃಷ್ಟಿಕೋನಗಳು ನಮ್ಮ ಪುಸ್ತಕ ಮಳಿಗೆಗಳಲ್ಲಿ ಗಮನ ಸೆಳೆಯಲು ಕಾಯುತ್ತಾ ಕುಳಿತಿವೆ.
ಸಾಮಾನ್ಯವಾಗಿ ಪ್ರಕಾಶಕರ ಪುಸ್ತಕಪಟ್ಟಿಗಳು ಒಂದೇ ರೀತಿಯಲ್ಲಿರುತ್ತವೆ. ಪುಸ್ತಕಗಳ ಶೀರ್ಷಿಕೆ, ಅವುಗಳ ಗಾತ್ರವೇನು, ಎಷ್ಟು ಪುಟಗಳಿವೆ, ಪೇಪರ್ ಗುಣಮಟ್ಟ ಹೇಗಿದೆ ಮತ್ತು ಯಾವಾಗ ಬಿಡುಗಡೆ ಆಗಲಿವೆ ಇತ್ಯಾದಿ. ಆದರೆ ಅಲೆಫ್ ಗ್ರಂಥಪಟ್ಟಿ ಮಾತ್ರ ಭಿನ್ನ. ಅವರು ಅದನ್ನು ಗ್ರಂಥಪಟ್ಟಿ ಎಂದೂ ಕರೆಯುತ್ತಿಲ್ಲ, ಬದಲಾಗಿ 'ದಿ ಬುಕ್ ಆಫ್ ಅಲೆಫ್ 3' ಎಂದು ಅದಕ್ಕೆ ಹೆಸರಿಟ್ಟಿದ್ದಾರೆ. ಅದೂ ಒಂದು ಪುಸ್ತಕದಂತೆಯೇ ಗಟ್ಟಿ ರಟ್ಟು, ಚೊಕ್ಕ ವಿನ್ಯಾಸ ಮತ್ತು ಅದ್ಭುತ ಮುದ್ರಣದೊಂದಿಗೆ ಅಚ್ಚಾಗಿದೆ. ಅದಾಗ್ಯೂ ಅದರಲ್ಲೂ ಪ್ರಕಟಿತ ಮತ್ತು ಅಪ್ರಕಟಿತ 50 ಪುಸ್ತಕಗಳ ಪಟ್ಟಿಯಿದೆಯಾದರೂ, ಈ 192 ಪುಟಗಳ ಕ್ಯಾಟಲಾಗಿನಲ್ಲಿ ಪುಸ್ತಕಗಳ ಆಯ್ದ ಭಾಗಗಳು, ಅವುಗಳಿಗೆ ಸೂಕ್ತವೆನಿಸುವ ಚಿತ್ರಗಳು ಮತ್ತು ಲೇಖಕರ ಕಿರುಪರಿಚಯಗಳೂ ಜಾಗ ಪಡೆದಿವೆ. ಒಟ್ಟಾರೆ ಇದನ್ನು ಸಂಗ್ರಹಯೋಗ್ಯ ಗ್ರಂಥವೆಂದರೂ ತಪ್ಪಾಗಲಿಕ್ಕಿಲ್ಲ. ಅದರಲ್ಲೂ ಟಿಮೆರಿ ಮುರಾರಿ, ಶೋವೆನ್ ಚೌಧರಿ, ರೋಮಿಲಾ ಥಾಪರ್ ಮುಂತಾದವರ ಬರಹಗಳ ಆಯ್ದ ಭಾಗಗಳನ್ನು ಓದುವುದೇ ಒಂದು ಸುಗ್ಗಿ.
ಹಾಗಿದ್ದರೆ ಮುರಾರಿ ಮತ್ತು ಚೌಧರಿಯಲ್ಲಿ ಯಾರು ಅದ್ಭುತವೆನ್ನುವಂಥದ್ದನ್ನು ಕಟ್ಟಿಕೊಟ್ಟಿದ್ದಾರೆ? ಝಛಟಿಛ್ಞಣಛ ಖಜಡ್ಡ್ಠಿಟಿಡ ಎಂಬ ಸಾಹಿತ್ಯಿಕ ವಸ್ತು ಎಷ್ಟು ಅದ್ಭುತವಾಗಿದೆಯೆಂದರೆ ಟಿಮೆರಿ ಮುರಾರಿಯನ್ನು ಬಿಟ್ಟರೆ ಬೇರೆ ಯಾರಿಗೂ ಆ ರೀತಿ ಯೋಚಿಸಲು ಸಾಧ್ಯವಿಲ್ಲವೆಂದೆನಿಸುತ್ತದೆ? ಅದೂ ನಿಜ, ಏಕೆಂದರೆ ಹಿಂದೆಯೂ ಮುರಾರಿ 'ದಿ ತಾಲಿಬಾನ್ ಕ್ರಿಕೆಟ್ ಕ್ಲಬ್‌' ರಚಿಸಿದಾಗ ಇದೇ ರೀತಿಯ ಆಶ್ಚರ್ಯದ ಅಲೆಯೊಂದು ಓದುಗರನ್ನು ಜೋರಾಗಿ ತಟ್ಟಿತ್ತು. ಅವರ ಪುಸ್ತಕದಲ್ಲಿ ಮತ್ತೊಮ್ಮೆ ಜನ್ಮತಾಳಿರುವ ಚಾಣಕ್ಯ 21ನೇ ಶತಮಾನದ ರಾಜಕೀಯದಲ್ಲಿ ಪ್ರವೀಣ.
ಇಲ್ಲಿ ಆತನಿಗೂ ಕೆಲವು ಅಸಮಾಧಾನಗಳಿವೆ. ಮುಖ್ಯವಾಗಿ ತನ್ನ ಸಿದ್ಧಾಂತಗಳನ್ನು ಕದ್ದು ಖ್ಯಾತಿ ಪಡೆದ 'ಮಾಚಿಯವೆಲ್ಲಿ'ಯೆಂಬ ವ್ಯಕ್ತಿಯ ಮೇಲೆ. ಈ ಬಗ್ಗೆ ಅಸಮಾಧಾನಗೊಂಡು ಆತ ಹೇಳುತ್ತಾನೆ: "ಸಾವಿನಿಂದುಟಾಗುವ ಸಮಸ್ಯೆಯೇ ಇದು. ಒಂದು ಸಾವಿರದ ಏಳುನೂರಾ ಐವತ್ತೆರಡು ವರ್ಷಗಳ ನಂತರ ನೀವು ಮಾಡಿದ ಕೆಲಸದ ಪ್ರತಿಫಲವನ್ನು ಬೇರೊಬ್ಬ ವ್ಯಕ್ತಿ ಅನುಭವಿಸಿ ಖ್ಯಾತನಾಗುತ್ತಾನೆ. ನಮಗೆ ಬರಬೇಕಾದ ಅಮರತ್ವ ಆತನ ಪಾಲಾಗುತ್ತದೆ".
ಆದರೆ ಕೃತಿಚೌರ್ಯ ಮಾಡಿದ ವ್ಯಕ್ತಿಗೆ ಒಂದು ವಿಷಯದಲ್ಲಿ ಮಾತ್ರ ಚಾಣಕ್ಯ ಪಡೆಯುವ ಲಾಭವನ್ನು ತನ್ನದಾಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ತನ್ನ ಆಧುನಿಕ ಅವತಾರದಲ್ಲಿ ಚಾಣಕ್ಯ ಅವಂತಿ ಎನ್ನುವಾಕೆಗೆ ಸಲಹೆಗಾರನಾಗುತ್ತಾನೆ. ಯುವ ಅವಂತಿ, ದೇಶವನ್ನು ದಶಕಗಳಿಂದ ಆಳಿದ ಕುಟುಂಬವೊಂದರ ವಾರಸುದಾರಳು. ತನ್ನ ಪಾಲಿಗೆ ಸುಲಭವಾಗಿ ಬಂದ ಅಧಿಕಾರದ ಬಗ್ಗೆ ಆಕೆ ಎಚ್ಚರಿಕೆಯಿಂದಿಂದ್ದಾಳೆ. ಈ ಬಗ್ಗೆ ಚಾಣಕ್ಯ ಹೇಳುತ್ತಾನೆ: "ನಾನೊಬ್ಬ ವಿಧೇಯ ಗುಮಾಸ್ತನಾಗಿ ಆಕೆಯ ಸೇವೆಯಲ್ಲಿ ತೊಡಗಿದೆ. ಆದರೆ ಆಕೆಗಷ್ಟೇ ವಿಧೇಯನಾಗಿದ್ದೆನೇ ಹೊರತು ಅನ್ಯರಿಗಲ್ಲ. ಈ ನಿಷ್ಠೆಯನ್ನು ಗಮನಿಸಿದ ಆಕೆ ತನ್ನ ಭಾವನೆ ಮತ್ತು ಯೋಚನೆಗಳನ್ನು ನನ್ನೊಡನಷ್ಟೇ ಹಂಚಿಕೊಳ್ಳತೊಡಗಿದಳು"
ಈ ಸಾಲುಗಳು ಏನನ್ನೋ ನೆನಪಿಸುತ್ತಿವೆಯಲ್ಲವೇ?
ಚಾಣಕ್ಯ ಪ್ರೇಮದ ಬಗ್ಗೆ ಏನು ಹೇಳುತ್ತಾನೋ ಕೇಳಿ: "ಹೃದಯವನ್ನು ಎಂದಿಗೂ ನಂಬಬಾರದು. ಏಕೆಂದರೆ ಅದಕ್ಕೆ ಮಿದುಳಿಲ್ಲ. ಪ್ರೀತಿ ಎನ್ನುವುದು ದುರ್ಬಲ ಬುನಾದಿ. ಅದು ನಾಣ್ಯವನ್ನು ಮೇಲೆ ಚಿಮ್ಮಿದಂತೆಯೇ. ಒಂದೇ ಕ್ಷಣದಲ್ಲಿ ಪ್ರೀತಿ ದ್ವೇಷವಾಗಿ ತಿರುಗಿಬೀಳಬಹುದು. ಆದರೆ ಅಧಿಕಾರ ಕಾಮೋತ್ತೇಜಕ. ಅದು ಎಂದಿಗೂ ಮುಗಿಯದ 1001 ಭಂಗಿಯ ಸಂಭೋಗದಂತೆ. ಅದು ಅನಿರ್ವಚನೀಯ ಮೋಹಕತೆ, ಅದು ಪವಾಡ! ಯಾವ ದೇವರಿಗೂ ದಯಪಾಲಿಸಲು ಸಾಧ್ಯವಾಗದಂಥ ಕೀರ್ತಿಯನ್ನು ಕೊಡುವವಳು ಎಂದು ನಿನ್ನನ್ನು(ಅವಂತಿ) ಬೆಂಬಲಿಗರು ಪೂಜಿಸುತ್ತಾರೆ." ಚಾಣಕ್ಯನ ಮಾತು ಕೇಳಿದ ಮೇಲೆ ಅವಂತಿಗೆ "ಪ್ರೀತಿಯ ಶಕ್ತಿಗಿಂತ ಅಧಿಕಾರದ ಮೇಲಿನ ಪ್ರೀತಿಯೇ ಮಹತ್ವದ್ದು" ಎಂದೆನ್ನಿಸಿದ್ದರ ಹಿಂದೆ ಆಶ್ಚರ್ಯಪಡುವಂಥದ್ದೇನೂ ಇಲ್ಲ. ಈ ಮಾತೂ ಏನನ್ನೋ ನೆನಪಿಸುತ್ತಿದೆಯೇ? ನಿಮ್ಮ ಊಹೆಯನ್ನೆಲ್ಲ ದಯವಿಟ್ಟು ಒತ್ತಟ್ಟಿಗಿಡಿ. ಏಕೆಂದರೆ, "ಈ ಕಾದಂಬರಿಯಲ್ಲಿ ಬರುವ ಎಲ್ಲಾ ಪಾತ್ರಗಳೂ ಕಾಲ್ಪನಿಕ. ಯಾವುದೇ ಘಟನೆಗೆ ಅಥವಾ ಜೀವಂತ ವ್ಯಕ್ತಿಯೊಂದಿಗೆ ಸಾಮ್ಯತೆಯಿದ್ದರೆ, ಅದು ಕಾಕತಾಳೀಯವಷ್ಟೆ".
ಇನ್ನು ಶೋವೆನ್ ಚೌಧರಿ ವಿಷಯಕ್ಕೆ ಬಂದರೆ, ಈ ಮಹಾಷಯರಿಗೆ ಓದುಗರನ್ನು ವಿಚಲಿತಗೊಳಿಸುವ ಅಭ್ಯಾಸವಿದೆ. ಬುಡಮೇಲು ಮಾಡುವಂಥ ಅದ್ಭುತ ವಿಷಯಗಳನ್ನೆತ್ತಿಕೊಂಡು ಅದಕ್ಕೆ ವಿಚಿತ್ರ ಶೀರ್ಷಿಕೆಗಳನ್ನು ಕೊಡುತ್ತಾರೆ ಚೌಧರಿ. ಕಳೆದ ವರ್ಷ ಅವರು, ಚೀನಾದ ಪರಮಾಣು ಬಾಂಬ್‌ಗಳಿಂದ ಛಿದ್ರವಾದ ಭಾರತದ ಚಿತ್ರಣವನ್ನು ಕಟ್ಟಿಕೊಟ್ಟಿದ್ದರು. ಅದರಲ್ಲಿ ಬಾಂಬೆ ಸಂಪೂರ್ಣ ನಾಶವಾಗುತ್ತದೆ, ಬಂಗಾಳ ಚೀನಾದ ಹಿಡಿತಕ್ಕೆ ಸಿಲುಕುತ್ತದೆ. ಹಾಗಿದ್ದರೆ ಆ ಪುಸ್ತಕದ ಹೆಸರು ಏನಿರಬಹುದೋ ಯೋಚಿಸಿ? ಝಿಜ ಈ್ಟಟಠಜಡಿಜಟಿಡಿ ಆ್ಡಝ್ಟ್ಠ್ಝಿಡಿಣ (ಸಮರ್ಥ ಅಧಿಕಾರ)! ಅಂಥದ್ದೇ ತಂತ್ರವನ್ನು ಪುನರಾವರ್ತಿಸಿರುವ ಚೌಧರಿ ಈಗ "ಡೆತ್ ಆಫ್ ಎ ಸ್ಕೂಲ್ ಮಾಸ್ಟರ್‌" ಎನ್ನುವ ಪುಸ್ತಕದೊಂದಿಗೆ ಬರುತ್ತಿದ್ದಾರೆ. ಎಚ್ಚರವಿರಲಿ, ಇದು ಚೀನಾದ ಆಶ್ರಿತ ಪ್ರದೇಶವಾಗಿರುವ ಬಂಗಾಳಕ್ಕೆ ಮರುಭೇಟಿ ಮಾಡಿಸುವ ಪುಸ್ತಕ. ಅದರ ಗವರ್ನರ್ ವೆನ್ ಉಪಪತ್ನಿಯರಿಲ್ಲದೇ ಬಹುವಾಗಿ ಒದ್ದಾಡುತ್ತಿರುತ್ತಾನೆ. ಬಂಗಾಳದ ಮೇಲಿನ ಚೀನಿಯರ ಹಿಡಿತವನ್ನು ತಪ್ಪಿಸಲು ಕೇಡಿಗಳ ಸಮಾಜ ಪ್ರಯತ್ನಿಸುತ್ತಿರುತ್ತದೆ.
ಬಂಗಾಳ ಸೇನೆಗೆ ರೊಚ್ಚಿಗೇಳಲು ಇದು ಸಮಯವೇನೋ?
ಹೋಗಲಿ ಬಿಡಿ. ಇಂಥ ವಿಷಯಗಳನ್ನೆಲ್ಲ "ನಿಷೇಧತಜ್ಞ" ದೀನಾನಾಥ್ ಬಾತ್ರಾ ಅವರಿಗೆ ಬಿಟ್ಟುಬಿಡೋಣ. ಇತಿಹಾಸದ ಮೇಲೆ ಅನುಮಾನ ಪಡುವುದು(ರಾಮ ನಿಜಕ್ಕೂ ಇದ್ದನೇ ಎಂಬುದು) ಧರ್ಮನಿಂದನೆಯಾಗುವುದಿಲ್ಲ ಎಂದು ತಮ್ಮ "ಝಿಜ ಕಿಛಡಡಿ ಛಡ ಕ್ಠಿಜಡಜಟಿಡಿ" ಪುಸ್ತಕದಲ್ಲಿ ಬರೆದಿರುವ ರೋಮಿಲಾ ಥಾಪರ್‌ರನ್ನು ಬಾತ್ರಾ ಈ ಬಾರಿ ಹಿಡಿಯಬಹುದೇನೋ? ಅಷ್ಟಕ್ಕೇ ಸುಮ್ಮನಾಗದೇ "ಝ್ಝಢಛ, ಝಿಜ ಊ್ಠ್ಟಡ್ಝ್ಛಿ ಆಡ್ಛಜಡ್ಝ್ಛಿ" ಎನ್ನುವ ಹೊಸ ಅಧ್ಯಯನೊಂದಿಗೆ ಬಂದಿರುವ ವೆಂಡಿ ಡೋನಿಗರ್‌ಳನ್ನು ಮತ್ತೊಮ್ಮೆ ನಿಷೇಧಿಸಲು ಅವರು ಮುಂದಾಗಬೇಕು. ಇಲ್ಲದಿದ್ದರೆ ಭಾರತವನ್ನು ಪವಿತ್ರವಾಗಿ ಹೇಗೆ ಉಳಿಸಲು ಸಾಧ್ಯ ಸ್ವಾಮಿ?!

-ಟಿಜೆಎಸ್ ಜಾರ್ಜ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com