ಗಾಲಿ ಕುರ್ಚಿಗಳಿಂದ ಮುಕ್ತಿಗೊಳಿಸಲಿವೆ ಮೆದುಳನ್ನೋದುವ ಯಂತ್ರಗಳು

Amyotrophic lateral sclerosis - ಎಂಬುದು ವೈದ್ಯಕೀಯ ಹೆಸರು. ನರದೌರ್ಬಲ್ಯದಿಂದಾಗಿ ತಮ್ಮ ದೇಹದ ಅಂಗಗಳು ಅದರಲ್ಲೂ ಕಾಲುಗಳು ತಮ್ಮ ಮಾತನ್ನೇ ಕೇಳದೆ...
ಎಕ್ಸೋಸ್ಕೆಲಿಟನ್ಸ್
ಎಕ್ಸೋಸ್ಕೆಲಿಟನ್ಸ್

Amyotrophic lateral sclerosis - ಎಂಬುದು ವೈದ್ಯಕೀಯ ಹೆಸರು. ನರದೌರ್ಬಲ್ಯದಿಂದಾಗಿ ತಮ್ಮ ದೇಹದ ಅಂಗಗಳು ಅದರಲ್ಲೂ ಕಾಲುಗಳು ತಮ್ಮ ಮಾತನ್ನೇ ಕೇಳದೆ ನಿಶ್ಯಕ್ತವಾಗಿ ಬಿದ್ದಿರುತ್ತವೆ. ನಡೆಯುವಷ್ಟು ಕಸುವು ಕಾಲುಗಳಲ್ಲಿದ್ದರೂ ಮೆದುಳಿನ ಸಂಕೇತಗಳು ಕಾಲಿನವರೆಗೆ ಮುಟ್ಟದೇ ಯಾವ ಕಡೆ ಹೆಜ್ಜೆಯಿಡಬೇಕು ಎಂದು ಗೊತ್ತಾಗದೇ ಕಾಲುಗಳು ನಿಷ್ಕ್ರಿಯವಾಗಿರುತ್ತವೆ. ಇದರಿಂದಾಗಿ ಮನುಷ್ಯನು ನಡೆಯಲು ಸಾಧ್ಯವಾಗದೇ ಒಂದೇ ಕಡೆ ಹಾಸಿಗೆಯ ಮೇಲೆ ಹೆರರ ಮೇಲೆ ಅವಲಂಬಿತನಾಗಿ ಬಿದ್ದಿರಬೇಕು.    

ಈ ರೀತಿಯ ರೋಗ ಕೆಲವರಿಗೆ ವಂಶಪಾರಂಪರ್ಯವಾಗಿ ಬಂದಿದ್ದರೆ ಇನ್ನು ಕೆಲವರಿಗೆ ಅಪಘಾತ ಅಥವಾ ಔಷಧಿಯ ದುಷ್ಪರಿಣಾಮದಿಂದಾಗಿ ಹೀಗಾಗುತ್ತದೆ. ಕೆಲವರಿಗೆ  ಬೆನ್ನುಹುರಿಯಲ್ಲಿ ತೊಂದರೆ ಕಾನಿಸಿಕೊಂಡು ಗಾಲಿ ಕುರ್ಚಿ ಅಥವಾ ಹಾಸಿಗೆಯ ಮೇಲೆ ಬಿದ್ದಿರುತ್ತಾರೆ. ಇದೊಂದು ದೈಹಿಕ ಮತ್ತು ಮಾನಸಿಕ ಹಿಂಸೆ. ಈ ನರ ಸಂಬಂಧಿತ ಖಾಯಿಲೆಯು ನಿಧಾನವಾಗಿ ಬೇರೆ ಬೇರೆ ಅಂಗಗಳಿಗೆ ವ್ಯಾಪಿಸಿಕೊಂಡು ಕಡೆಗೆ ಉಸಿರಾಟದ ಅಂಗಗಳಿಗೂ ಹಚ್ಚಿ ವ್ಯಕ್ತಿಯ ಸಾವಿಗೆ ಕಾರಣವಾಗುತ್ತದೆ. ಇಲ್ಲಿಯವರೆಗೆ ಇದ್ದ ಒಂದೇ ಒಂದು ಉಪಾಯವೆಂದರೆ ಈ ರೋಗವು ಇತರ ಅಂಗಗಳಿಗೆ ಹಬ್ಬದಂತೆ ತಡೆ ಹಾಕುವುದು ಹಾಗೂ ಉಸಿರಾಟಕ್ಕೆ ತೊಂದರೆಯಾಗದಂತೆ ಕೆಲ ಔಷಧಿಗಳನ್ನು ಕೊಡುವುದಾಗಿತ್ತು.

 ಈಗ ರೊಬೋಟಿಕ್ ಇಂಜಿನಿಯರುಗಳು ಇದಕ್ಕೆ ಹೊಸ ಉಪಾಯವನ್ನು ಕಂಡುಹಿಡಿದಿದ್ದಾರೆ. ಹಿಂದಿನ ಲೇಖನದಲ್ಲಿ ಮೆದುಳನ್ನು ಓದಬಲ್ಲ ಯಂತ್ರದ ಬಗ್ಗೆ ತಿಳಿದುಕೊಂಡೊದ್ದೆವಷ್ಟೇ. ಈಗ ಅದೇ ಯಂತ್ರವನ್ನು ಪರಿಷ್ಕರಿಸಿ ಮೆದುಳಿನ ಮಾತುಗಳನ್ನು ಅಂಗಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ತಲೆಗೆ ಸೆನ್ಸಾರ್‍ ಗಳನ್ನು ಅಳವಡಿಸಲ್ಪಟ್ಟ ರಬ್ಬರ್‍ ಟೋಪಿಯನ್ನು ಕೂರಿಸಲಾಗುತ್ತಿದೆ. ರೋಗಿಯ ಕಣ್ಣಿನ ಎದುರಿಗೆ ಕೆಲವು ಸಂಕೇತವನ್ನು ದಿಟ್ಟಿಸುವಂತೆ ವ್ಯವಸ್ಥೆ ಮಾಡಲಾಗಿರುತ್ತದೆ. ಮುಂದೆ ನಡೆಯಬೇಕೆಂದರೆ ಒಂದು ಸಂಕೇತನ್ನೂ, ಎಡಕ್ಕೆ ತಿರುಗಬೇಕೆಂದರೆ ಇನ್ನೊಂದು, ಬಲಕ್ಕೆ ತಿರುಗಲು ಮತ್ತೊಂದು ಹೀಗೆ ಕೆಲ ವಿವಿಧ ಸಂಕೇತಗಳನ್ನು ಅಳವಡಿಸಲಾಗಿರುತ್ತದೆ. ರೋಗಿಯ ಕಣ್ಣುಗಳು ಒಂದು ಸಂಕೇತವನ್ನು ದಿಟ್ಟಿಸುತ್ತಿರುವ ಕ್ರಮವನ್ನು ಓದುವ ಮೆದುಳಿಗೆ ಅಳವಡಿಸಿದ ಸೆನ್ಸರುಗಳು ಅದನ್ನು ಕಾಲಿಗೆ ಅರ್ಥವಾಗುವ ಸಂದೇಶವನ್ನಾಗಿ ಮಾರ್ಪಡಿಸಿ ಕಾಲಿಗೆ ಸಂಕೇತವನ್ನು ರವಾನಿಸುತ್ತವೆ. ತಕ್ಷಣ ಕಾಲುಗಳು ಮಿದುಳಿನ ಹೇಳಿಕೆಯಂತೆ ಹೆಜ್ಜೆ ಹಾಕತೊಡಗುತ್ತವೆ. ಅಂದರೆ ಎಡಗಡೆ ತಿರುಗುವ ಸಂಕೇತವನ್ನು ದಿಟ್ಟಿಸುತ್ತಿದ್ದಂತೆ ಕಾಲುಗಳು ಎಡಕ್ಕೆ ತಿರುಗುತ್ತವೆ, ನಿಲ್ಲುವ ಸಂಕೇತ ನೋಡುತ್ತಿದ್ದಂತೆ ಕಾಲುಗಳು ನಿಲ್ಲುತ್ತವೆ.

 ಈ ಪ್ರಯೋಗವನ್ನು ಇತ್ತೀಚೆಗೆ ಮತ್ತು ಕೊರಿಯನ್ ವಿವಿಯ ವಿದ್ಯಾರ್ಥಿಗಳ ಸಹಯೋಗದೊಂದಿಗೆ ರೋಗಿಗಳ ಮೇಲೆ ಪ್ರಯೋಗಿಸಿದಾಗ ಕೇವಲ ಹದಿನೈದು ನಿಮಿಷದಲ್ಲಿ ಅವರು ಎದ್ದು ಓಡಾಡತೊಡಗಿದರು. ಆದರೆ ಇಲ್ಲಿ ನಡೆಯಲು ಕಾಲು ಮಾತ್ರವಲ್ಲ ಕಣ್ಣುಗಳೂ ಆಯಾಸಗೊಳ್ಳಬೇಕಾಗುತ್ತದೆ. ಈಗ ಸಂಕೇತವನ್ನು ದಿಟ್ಟಿಸುವ ಕಣ್ಣುಗಳ ಮೇಲೆ ಹೆಚ್ಚಿನ ಹೊರೆ ಬೀಳದಂತೆ ಮಾಡಲು ಸಂಶೋಧನೆ ನಡೆಸಲಾಗುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ ಸ್ಲಿಪ್ ಡಿಸ್ಲ್ ನಿಂದಾಗಿಯೋ ಬೇರಾವುದೋ ನರದ ಊನದಿಂದಾಗಿಯೋ ಕಷ್ಟಪಡುತ್ತಿರುವ ರೋಗಿಗಳಿಗೆ ತಮ್ಮ ಕಾಲ ಮೇಲೆ ನಿಂತುಕೊಳ್ಳಲು ಆಶಾಕಿರಣವಾಗಿ ಈ ಸಂಶೋಧನೆ ಗೋಚರಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com