ಪ್ರಾಯೋಗಿಕ ಪರೀಕ್ಷೆಗಳಿಗೆ ಈಗಿನಿಂದಲೇ ತಯಾರಿ ಶುರುಮಾಡಿ

ಪ್ರಾಯೋಗಿಕ ಪರೀಕ್ಷೆಗಳನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಇವು ಸಹ ಒಳ್ಳೆಯ ಅಂಕ ಗಳಿಸಲು ಸಹಾಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಕಳೆದ ವಾರದ ಅಂಕಣದಲ್ಲಿ ಪಿಯು ಬೋರ್ಡ್ ವಿತರಿಸುತ್ತಿರುವ ಕೈಪಿಡಿಯ ಬಗ್ಗೆ ಮತ್ತು ಅದರ ಉಪಯೋಗ ಪಡೆಯುವ ಬಗ್ಗೆ ಹೇಳಿದ್ದೆವು. ಈ ಕೈಪಿಡಿಯು ಬಹುತೇಕ ಎಲ್ಲ ಶಾಲೆಕಾಲೇಜುಗಳಲ್ಲಿ, ಪುಸ್ತಕದ ಅಂಗಡಿಗಳಲ್ಲಿ ದೊರೆಯುತ್ತದೆ. ಇಷ್ಟೊತ್ತಿಗಾಗಲೇ ಇದನ್ನು ಪಡೆದು ಎಲ್ಲರೂ ಪರೀಕ್ಷೆಯ ತಯಾರಿ ನಡೆಸಿದ್ದರೆ ಒಳ್ಳೆಯದು. ಶುರು ಮಾಡಿರದಿದ್ದರೆ ಇನ್ನೂ ಕಾಲ ಮಿಂಚಿಲ್ಲ, ಈಗ ಶುರು ಮಾಡಿ!
 ಇನ್ನೇನು ಬಹುತೇಕ ಕಾಲೇಜಿಗಳಲ್ಲಿ ಪಠ್ಯಕ್ರಮವು ಮುಕ್ತಾಯವಾಗಲು ಬಂದಿದ್ದು ಪ್ರಾಯೋಗಿಕ ತರಗತಿಗಳೂ ಅಂತ್ಯ ಕಾಣಲು ಬಂದಿರುತ್ತವೆ. ಪ್ರಾಯೋಗಿಕ ಪರೀಕ್ಷೆಗಳನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಇವು ಸಹ ಒಳ್ಳೆಯ ಅಂಕ ಗಳಿಸಲು ಸಹಾಯ ಮಾಡುತ್ತವೆ.  ಸೈದ್ಧಾಂತಿಕ ಪರೀಕ್ಷೆಗಳಿಗೆ ಹೋಲಿಸಿದರೆ ಪ್ರಾಯೋಗಿಕ ಪರೀಕ್ಷೆಗಳಲ್ಲಿ ಅಂಕ ಗಳಿಸುವುದು ಸುಲಭ. ಪಿಯು ಪ್ರಾಯೋಗಿಕ ಪರೀಕ್ಷೆಗಳು 30 ಅಂಕಗಳಿಗೆ ಇರುತ್ತದೆ. ಇಪ್ಪತ್ತು ಅಂಕಗಳು ನಿಮ್ಮ ಬರವಣಿಗೆ ಮತ್ತು ಪ್ರಯೋಗವನ್ನು ಕೈಗೊಳ್ಳುವ ಬಗೆಯ ಮೇಲೆ ಅವಲಂಬಿಸಿರುತ್ತವೆ. ಸರಿಯಾದ ಫಲಿತಾಂಶ ದೊರೆಯದಿದ್ದರೂ ನೀವು ಪ್ರಯೋಗವನ್ನು ಸರಿಯಾದ ರೀತಿಯಲ್ಲಿ ಕೈಗೊಂಡಿದ್ದರೆ ಮತ್ತು ಬರವಣಿಗೆಯಲ್ಲಿ ಸರಿಯಾದ ಅಂಶಗಳಿದ್ದರೆ ಹೆಚ್ಚು ಅಂಕಗಳನ್ನು ಕಳೆಯುವುದಿಲ್ಲ. ಆರು ಅಂಕಗಳು ರೆಕಾರ್ಡ್ ಗೆ ಮೀಸಲಿರುತ್ತವೆ. ನಾಲ್ಕು ಅಂಕಗಳು ಮೌಖಿಕ ಪ್ರಶ್ನೋತ್ತರಗಳಿಗೆ ಮೀಸಲಿರುತ್ತವೆ. ರೆಕಾರ್ಡ್ ಅನ್ನು ಸರಿಯಾಗಿ ಬರೆದು ನೀಟಾಗಿ ಇಟ್ಟುಕೊಂಡಿದ್ದರೆ ಸಾಮಾನ್ಯವಾಗಿ ಇದರಲ್ಲಿ ಅಂಕಗಳನ್ನು ಕಳೆಯುವುದಿಲ್ಲ. 
 ಪ್ರಾಯೋಗಿಕ ಪರೀಕ್ಷೆಗಳಿಗೆ ಕನಿಷ್ಟ ಒಂದು ತಿಂಗಳು ಮೊದಲಿನಿಂದಲೇ ಸಿದ್ಧತೆ ನಡೆಸಿಕೊಳ್ಳಬೇಕು.ಓದುತ್ತಾ ಹೋದಂತೆ ಪ್ರಯೋಗದ ಬಗ್ಗೆ ಸಂದೇಹಗಳು ಮತ್ತು ಪ್ರಶ್ನೆಗಳು ಮೂಡತೊಡಗುತ್ತವೆ. ಇವನ್ನು ಶಿಕ್ಷಕರ ಜೊತೆ ಮಾತನಾಡಿ ನಿವಾರಿಸಿಕೊಳ್ಳಬೇಕು. ಪುನರಾವರ್ತನೆಯ ಸಮಯದಲ್ಲಿ ಪ್ರಯೋಗಗಳ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸಿ ಮನನ ಮಾಡಿಕೊಳ್ಳಬೇಕು. ಕಡೆಯ ಒಂದುವಾರ ಶಿಕ್ಷಕರು ಬಿಡುವಾಗಿರುವುದಿಲ್ಲ ಮತ್ತು ಪ್ರಯೋಗ ಶಾಲೆಯೊಳಗೆ ವಿದ್ಯಾರ್ಥಿಗಳನ್ನು ಬಿಡುವುದಿಲ್ಲ. ಹಾಗಾಗಿ ಸಾಕಷ್ಟು ಮೊದಲೇ ತಯಾರಿಗಳನ್ನು ಮುಗಿಸಿಕೊಳ್ಳಬೇಕು.
 ಬಹುತೇಕ ಸಮಯದಲ್ಲಿ ಮೌಖಿಕ ಪ್ರಶ್ನೆಗಳು ಪ್ರಯೋಗಕ್ಕೆ ಸಂಬಂಧಪಟ್ಟದ್ದೇ ಆಗಿರುತ್ತದೆ. ಪ್ರಯೋಗಕ್ಕೆ ಸಂಬಂಧಪಟ್ಟಂತೆ ಸೈದ್ಧಾಂತಿಕವಾದ ಯಾವುದೇ ಪ್ರಶ್ನೆಯನ್ನು ಕೇಳಬಹುದು.  ಭೌತಶಾಸ್ತ್ರ ಮತ್ತು ಜೀವಶಾಸ್ತ್ರಗಳ ಪರೀಕ್ಷೆಗಳಲ್ಲಿ ಮೌಖಿಕ ಪ್ರಶ್ನೆಗಳನ್ನು ಕೇಳಲು ಇಂತಹದೇ ಪಠ್ಯ ಎಂಬುದಿಲ್ಲ. ಯಾವ ಪ್ರಶ್ನೆಯನ್ನಾದರೂ ಕೇಳಬಹುದು. ಆದರೆ ರಸಾಯನ ಶಾಸ್ತ್ರದಲ್ಲಿ ಇಷ್ಟೇ ಪ್ರಶ್ನೆಗಳನ್ನು ಕೇಳಬೇಕೆಂದು ಪಠ್ಯಕ್ರಮದಲ್ಲಿ ವಿವರಿಸಲಾಗಿದೆ. ಇದರ ವಿವರಗಳನ್ನು ಕೈಪಿಡಿಯಲ್ಲಿ ನೋಡಬಹುದು. ಹಾಗಾಗಿ ರಸಾಯನ ಶಾಸ್ತ್ರದಲ್ಲಿ ಪರೀಕ್ಷೆ ಎದುರಿಸುವುದು ಸುಲಭ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com