ವಿಶ್ವಾಮಿತ್ರ- ವಸಿಷ್ಠರ ಸವಾಲು-ಪ್ರತಿ ಸವಾಲು

ವಿಶ್ವಮಿತ್ರರ ಮಾತಿನಿಂದ ಉಗ್ರರಾಗಿಬಿಟ್ಟರು ವಸಿಷ್ಠರು. ಹಿಂದೆಂದೂ ಅವರನ್ನು ಹಾಗೇ ತಾನು ಕಂಡೇ ಇರಲಿಲ್ಲ....
ವಿಶ್ವಾಮಿತ್ರ- ವಸಿಷ್ಠರ ಸವಾಲು-ಪ್ರತಿ ಸವಾಲು

ವಿಶ್ವಮಿತ್ರರ ಮಾತಿನಿಂದ ಉಗ್ರರಾಗಿಬಿಟ್ಟರು ವಸಿಷ್ಠರು. ಹಿಂದೆಂದೂ ಅವರನ್ನು ಹಾಗೇ ತಾನು ಕಂಡೇ ಇರಲಿಲ್ಲ. " ಭೇಶ್ ವಿಶ್ವಮಿತ್ರರೆ! ಅಂತೂ ವಸಿಶ್ಠರನ್ನು ಸಿಟ್ಟಿಗೆಬ್ಬಿಸಿಬಿಟ್ಟರಲ್ಲ! " ಇಂದ್ರ ಹಾಗೆಂದುಕೊಳ್ಳುತ್ತಿದ್ದಂತೆಯೇ ವಸಿಶ್ಠರು ಗಡುಸಾಗಿ, ಆದರೆ ಸ್ಥಿರವಾಗಿ ನುಡಿದರು, " ನಾನು ಗಳಿಸಿರುವ ಪುಣ್ಯ ಅತ್ಯಧಿಕ. ವೇದಾಚಾರ, ಧರ್ಮಾಚಾರ, ಕುಲಾಚಾರವೆಂಬ ತ್ರಿಮಾರ್ಗ ಧರ್ಮಿ ನಾನು. ಇದನ್ನು ವ್ರತದಂತೆ ಪಾಲಿಸುತ್ತಿರುವೆ. ಶಿವಪೂಜಾ ಸಮಾಧಿಸ್ಥನಾಗಿ ಆತನನ್ನೇ ಗುರುವೆಂದು, ಆತನ ಆಙ್ಞೆಯನ್ನು ಅತಿಕ್ರಮಿಸದೆ ಇದ್ದೇ . ಇಷ್ಟಲ್ಲದೇ ಸದಾ ಸರ್ವದಾ ಬ್ರಹ್ಮಚಾರಿಯಾಗಿಯೇ ಬದುಕಿ ಅಪಾರ ಪುಣ್ಯ ಸಂಗ್ರಹ ಮಾಡಿರುವೆ. ಅಕಸ್ಮಾತ್ ಹರಿಶ್ಚಂದ್ರ ಎತ್ತೆರದಲ್ಲಲ್ಲ, ಮರೆತು ಸುಳ್ಳಾಡಿದರೂ ಈ ಎಲ್ಲ ಪುಣ್ಯವನ್ನು ಪರಿತ್ಯಜಿಸಿ, ಅರುಂಢತಿಗೆ ವಿಛ್ಛೇದನವನ್ನಿತ್ತು, ಬೆತ್ತಲಾಗಿ, ತಲೆ ಬುರುಡೆಯಲ್ಲಿ ಹೆಂಡ ಕುಡಿಯುತ್ತ, ತಲೆ ಕೆದರಿಕೊಂಡು, ದಕ್ಷಿಣ ದಿಕ್ಕಿಗೆ ಹೋಗುವೆ ಭೃಷ್ಠನಾಗಿ!

(ಶೃತಿ ಮತ ಕುಲ ಆಚಾರ ಧರ್ಮಮಾರ್ಗಂ ಮಹಾ ವ್ರತವನುಷ್ಠಾನ ಗುರುವಾಙ್ಞೆ ಲಿಂಗಾರ್ಚನೆ ಉನ್ನತತಪಂ ಬ್ರಮ್ಹಕರ್ಮಂ ಬೆಳೆದ ಪುಣ್ಯದ ಒಳಗೆ ಆz ಅವಂ ತೊರೆದು ಕಳೆದು ಸತಿಯನು ಉಳಿದು ಅತಿ ದಿಗಂಬರನಾಗಿ ಮುಕ್ತ ಕೇಶಿತನಾಗಿ ನರಕಪಾಲದೊಳು ಸುರೆಯನೆ ಎರೆದು ಕುಡಿ ಯುತ ತೆಂಕಮುಖವಾಗಿ ಹೋಹೆಂ ಹರಿಶ್ಚಂದ್ರ ಮರೆತು ಹುಸಿಯಂ ನುಡಿದಡೆ)
ಮುಂದೇನು ? ಇಡೀ ಸಭೆ ಸ್ತಬ್ಧ . ಇಂದ್ರನಿಗೋ ಮಹಾ ಕಸಿಬಿಸಿ, " ಯಾರಿಗೆ ಹೇಳುವುದು, ವಸಿಷ್ಠರನ್ನು ಸಮಾಧಾನ ಮಾಡುವುದೆಂತು ? ಇತ್ತ ವಿಶ್ವಮಿತ್ರರಿಗೂ ಮುಂದೇನು ಮಾಡುವುದೆಂದು ಅರಿಯದೇ ಆಗಿದೆ. ಹಗುರ ಮಾಡಲೋ , ಅಥವಾ ಸಮ ಮಾಡಲೋ ? " ಎದ್ದವರು ನಾರದರು , ದೇವರ್ಶಿಗಳು. " ವಸಿಷ್ಠರು ದೊಡ್ಡವರು, ದೊಡ್ಡ ಮಾತಾಡಿಬಿಟ್ಟರು. ವೀರ ಪ್ರತಿಙ್ಞೆಯನ್ನೇ ಮಾಡಿಬಿಟ್ಟರು. ಅಲ್ಲಿಗೆ ಅದು ಸವಾಲಾಗಿ ಉತ್ತರವಾಯಿತು. ಆದರೆ ಪ್ರತಿಸವಾಲಾಗದೆ ಸ್ಪರ್ಧೆ ಮುಗಿಯುವುದಿಲ್ಲವಲ್ಲ, ಆದ್ದರಿಂದ ವಿಶ್ವಮಿತ್ರರೇ, ನೀವೀಗ ಪ್ರತಿಙ್ಞೆ ಮಾಡಬೇಕಾದದ್ದು ನಿಮ್ಮ ಕರ್ತವ್ಯ. ಅಕಸ್ಮಾತ್ ನೀವು ಪರೀಕ್ಷಿಸಿದರೂ, ಎಷ್ಟೇ ಪ್ರಯತ್ನ ಪಟ್ಟರೂ, ಹರಿಶ್ಚಂದ್ರ ಸುಳ್ಳು ಹೇಳದೆಯೇ ಹೋದರೆ ನೀವೇನು ಪಣ ತೊಡುವಿರಿ ? ವಸಿಷ್ಠರು ಗೆದ್ದಾಗ ನೀವು ಕೊಡುವ ಉಡುಗರೆ ಏನು ? "
                     (ಕೊಡು ವಸಿಷ್ಠಂಗೆ ಭಾಷೆಯನು ಕೌಶಿಕ ಎಂದನು)
ತಾನು ವಸಿಷ್ಠರನ್ನು ಕೇಳಿದ್ದು, ಹರಿಶ್ಚಂದ್ರ ಸೋತರೆ ಸೋಲೊಪ್ಪುವಿರೋ ಎಂದು. ಆದರೆ ಅವರು ಅದಕ್ಕೆ ಉತ್ತರಿಸದೇ ತುಂಬ ದೂರ ಹೋಗಿ ಅವನು ಸೋತರೆ ಅವನು ಹೆಸರು ಹೇಳಿದ ತಮಗೇ ಶಿಕ್ಷೆ ವಿಧಿಸಿಕೊಳ್ಳುತ್ತಾರಂತೆ. ಇರಬಹುದು, ಹರಿಶ್ಚಂದ್ರನಿಗಿನ್ನ ಇದೀಗ ವಸಿಷ್ಠರೇ ಸತ್ಯವ್ರತರು. ಆದರೆ ನಾನು ಪರೀಕ್ಷಿಸಬೇಕಿರುವುದು ಅವರನ್ನಲ್ಲ, ಹರಿಶ್ಚಂದ್ರನಿಗೆ ತಾನೇ ? ಆ ಪರೀಕ್ಷೆಯಲ್ಲಿ ಅವನು ಗೆದ್ದರೆ ಉಡುಗೊರೆ ಅವನಿಗೆ ತಾನೇ ಸಿಗಬೇಕಾದದ್ದು ? ವಿಶ್ವಮಿತ್ರರ ಯೋಜನೆ ಒಂದು ಹತಕ್ಕೆ ಬಂದಾಗ ಹೇಳಿದರು, " ವಸಿಷ್ಠರಿಗಷ್ಟೇ ಅಲ್ಲ, ನನ್ನಲ್ಲೂ ತಪಸ್ಸಿನ ಪುಣ್ಯಫಲ ಅತ್ಯಧಿಕವಾಗಿದೆ. ಅದು ಭತ್ತಿಅಲ್ಲಿ ಮೊಳಕೆ ಒಡೆದು ಶಮದಮಗಳೇ ಎಲೆಗಳಾಗಿ, ಯೋಗ ಯಾಗಗಳ ಬೆಂಬಲದಿಂದ ವೇದೋಕ್ತ ವಿರಕ್ತಿಯ ಕಾಂಡವಾಗಿ ತಪೋ ನಿಷ್ಠೆಯ ಘೋರ ವ್ರತದ ಜ್ವಾಲೆಯ ಬಿಸುಪನ್ನು ಉಂಡು ಮೌನ ಧ್ಯಾನಗಳ ಜಪಸ್ನಾನಾಭಿಶೇಕದಲ್ಲಿ ಮೀಯುತ್ತ ಸತ್ಯದ ಮೊಗ್ಗು ಅರಳಿ ನಿಯಮ ಹೂ ಗರ್ಭದಲ್ಲಿ ಈಶ್ವರಾಗಮಗಳೆಂಬ ಕಾಯಾಗಿ ಲಿಂಗಾರ್ಚನೆಯ ಫಲಭಾರದಿಂದ ಜಗ್ಗುತ್ತಿದೆ . ಆ ಪುಣ್ಯರಾಶಿಯಲ್ಲಿ ಅರ್ಧಭಾಗವನ್ನು ಹರಿಶ್ಚಂದ್ರನಿಗೆ ಬಹುಮಾನವಾಗಿ ಕೊಡುವೆ ಅವನು ಸುಳ್ಳನ್ನೇ ಹೇಳದಿದ್ದರೆ . 
( ಭಕ್ತಿ ಶಮೆ ದಮೆ ಯೋಗ ಯಾಗ ಶೃತಿ ಮತ ಮಯ ವಿರಕ್ತಿ ಘೂರವ್ರತ ತಪೋನಿಷ್ಠೆ ಜಪಗುಣಾ ಸಕ್ತತೆ ಸ್ನಾನ ಮೌನ ಧ್ಯಾನವಾಚಾರ ಸತ್ಯ ತಪ ನಿತ್ಯ ನೇಮ
ಯುಕ್ತಿಶೈವಾಗಮಾವೇಶ ಲಿಂಗಾರ್ಪಣಾಸಕ್ತೀಂ ಬೆಳೆದ ಪುಣ್ಯದೊಳರ್ಧಮಂ ಸುಧಾ
ಭುಕ್ತಳರಿಯಲು ಕೊಡುವೆ ನಾ ಹರಿಶ್ಚಂದ್ರ ಹುಸಿಯಂ ನುಡಿಯದೆ ಇರಲಿ ಎಂದನು )

ಛೆ ! ಏನೋ ಹೋಗಿ ಏನೋ ಆಯಿತು . ತಾನು ಸುಮ್ಮನಿರಬಹುದಿತ್ತು . ಇಲ್ಲ , ಹಾಗಾಗಲಿಲ್ಲ . ಏಕೆ ಇಷ್ಟೆಲ್ಲಾ ನಡೆದು ಹೋಯಿತು ? ಬಹುಶಹ ಇದೆಲ್ಲ ಅಯೋಜಿತವಾದ್ದರಿಂದ ಇದೆಲ್ಲವೂ ಆ ವಿಧಿಯ ಇಛ್ಛೆಯೇ ಇರಬೇಕು . ಬಿಲ್ಲಿನಿಂದ ಚಿಮ್ಮಿದ ಬಾಣ ಗುರಿ ತಾಗದೆ ಮಧ್ಯದಲ್ಲಿ ಎಂತು ನಿಂತಾತು ? ಈಗ ತಾನು ಮುಂದುವರಿಯಲೇ ಬೇಕು . ಆ ನಡೆಯಲ್ಲಿ ಅರೆ ಮನಸ್ಸು ಸಾಲದು . ಇರಲಿ , ಮೊದಲನೇಯದಾಗಿ ಒಂದು ಪುಟ್ಟ ಪ್ರಯತ್ನ . ಅನುಚರ ಶಿಶ್ಯರನ್ನು ಕರೆದು ಆದೇಶಿಸಿದ , " ಹೋಗಿ ಹರಿಶ್ಚಂದ್ರನನ್ನೊಪ್ಪಿಸಿ ಬಹು ಸುವರ್ಣ ಯಾಗ ಮಾಡುವಂತೆ . " ಮಧ್ಯಸ್ಥ ಮುನಿಗಳು ಹರಿಶ್ಚಂದ್ರನನ್ನು ಹೋಗಿ ಕಂಡರು . 
ಮಾಧವ: ರಾಜ ಹರಿಶ್ಚಂದ್ರ ಬಹುಕಾಲದಿಂದ ಕಾಯುತ್ತಿದ್ದೇವೆ ಯಾರಾದರೂ ಸುವರ್ಣ ಯಾಗ ಮಾಡುವರೋ ಎಂದು .
ರಾಜ: ಏನು ಮಹರ್ಶಿಗಳೆ ಹಾಗೆಂದರೆ ? 
ತರುಣ ತಾಪಸಿ: ತುಂಬ ಕಷ್ಟದ ಕೆಲಸವದು . ಬಹಳ ದ್ರವ್ಯ ಅಪೇಕ್ಷೆಯ ಯಙ್ಞ ಅದು .
ರಾಜ: ಹೇಳಿ , ಅದರ ಅತಿ ಕಷ್ಟವಾದ ಭಾಗ ಯಾವುದು ? 
ವಿಭಂಗ: ಯಾಗಾವಧಿಯಲ್ಲಿ ಯಾರು ಬಂದು ಎಷ್ಟು ಹಣ ಕೇಳಿದರೂ ದಾನ ಮಾಡಬೇಕು .
ಹರಿಶ್ಚಂದ್ರ: ಅದಶ್ಟು ಕಷ್ಟವಾಗದು . ಬೊಕ್ಕಸದಲ್ಲಿ ಎಣಿಸಲಾರದಷ್ಟು ಹಣ ಬಿದ್ದಿದೆ . ಅದು ಕಮ್ಮಿಯಾದರೆ ಕುಬೇರನಿಂದ ಕಡತಂದರಾಯಿತು . 
ಇಚ್ಛಾರಿ: ಸರಿ ಮಹಾರಾಜ್ , ನಾವಿನ್ನು ಹೊರಡುತ್ತೀವಿ . ಇಂದಿಗೆ ಐದನೇ ದಿನ ಸಂಘಮ ಕಾಲದಲ್ಲಿ ಆರಂಭಗೊಳ್ಳುವ ಯಾಗ ಸಂಧ್ಯೆಯಲ್ಲಿ ಮುಗಿಯುತ್ತದೆ . ಆ ಅವಧಿಯಲ್ಲಿ ಯಾರೆಷ್ಟು ಹಣ ಕೇಳಿದರೂ ನೀನು ದಾನ ಮಾಡುವೆಯಲ್ಲ ? 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com