ಸತ್ಯಹರಿಶ್ಚಂದ್ರನ ಪರೀಕ್ಷೆ: ಜಾರಿ ಬಿದ್ದ ಕರಿರಾಜ

ವಸಿಷ್ಠರು ಹೇಳಿದರು "ಹರಿಶ್ಚಂದ್ರ, ಬಂದ ದಾರಿಯಲ್ಲೇ ಹಿಂದಿರುಗು. ರಾಜ್ಯಕ್ಕೆ ವಾಪಸಾಗು. ಹರದಾರಿ ದೂರದಲ್ಲಿ ಕೌಶಿಕರ ಆಶ್ರಮವಿದೆ. ಅತ್ತ ಹೋಗಬೇಡ, ಏಕೆಂದು ಕೇಳಬೇಡ."
ಬೇಟೆಯಾಡುತ್ತಿರುವ ರಾಜ (ಸಾಂಕೇತಿಕ ಚಿತ್ರ)
ಬೇಟೆಯಾಡುತ್ತಿರುವ ರಾಜ (ಸಾಂಕೇತಿಕ ಚಿತ್ರ)

ಪಕ್ಕದಲ್ಲಿದ್ದ ಪ್ರಿಯ ಶಿಷ್ಯ ನಕ್ಷತ್ರಿಕ ಕೇಳಿದ; "ಗುರುಗಳೇ, ನನಗೆ ಅರ್ಥ ಆಗ್ತಾಯಿಲ್ಲ. ಈ ಪ್ರಾಣಿಗಳು ಅಯೋಧ್ಯೆಯನ್ನ ಮುತ್ತೋದಕ್ಕೂ, ನೀವು ರಾಜರನ್ನು ಪರೀಕ್ಷಿಸೋದಕ್ಕೂ ಏನು ಸಂಬಂಧ ಅಂತ". ನಸುನಕ್ಕು ನುಡಿದರು ವಿಶ್ವಮಿತ್ರರು; "ನಕ್ಷತ್ರ, ಮುತ್ತುವುದು ಪರೀಕ್ಷೆಯೇ ಅಲ್ಲ. ಹಾಗೆ ನೋಡಿದರೆ ನಾನು ಹಣ ಕೇಳಿದ್ದಿದೆಯಲ್ಲ, ಅದೂ ಪರೀಕ್ಷೆಯಲ್ಲ. ಈ ಪ್ರಾಣಿಗಳು ಕಾಟ ಕೊಟ್ಟಾಗ ಜನ ಏನು ಮಾಡ್ತಾರೆ? ರಾಜನ ಹತ್ತಿರಕ್ಕೆ ಹೋಗಿ ದೂರ್ತಾರೆ. ಪರಿಹಾರಕ್ಕೆ ರಾಜ, ರಾಜ್ಯ ಬಿಟ್ಟು ಹೊರಗಡೆ ಬರ್ತಾನೆ. ಬೇಟೆ ಆಡ್ತಾ ಆಡ್ತಾ ಆತ ನನ್ನ ಆಶ್ರಮಕ್ಕೆ ಬರಲೇ ಬೇಕು. ಯಾಕಂದರೆ, ಪ್ರಾಣಿಗಳು ನನ್ನ ಆಶ್ರಮದ ತನಕ ಇದ್ದೇ ಇರುತ್ತಲ್ಲ; ಇಲ್ಲಿಗೊಂದ್ಸಲ ಬರಲಿ, ಆಮೇಲೆ ನಾಟಕ ಹೇಗೆ ಬದಲಾಗುತ್ತೆ ಅಂತ ನೀನೇ ನೋಡ್ತೀಯ" ಇಷ್ಟು ಹೇಳಿದ್ದು ನಕ್ಷತ್ರಿಕನಿಗೆ. 

ಆದರೆ ಮನಸ್ಸಿನ ಆಲೋಚನೆ ಮುಂದುವರಿಯಿತು. " ರಾಜನನ್ನು ಸೋಲಿಸಲು ಅವನ ಸ್ಥಳಕ್ಕಿನ್ನ ನನ್ನ ಆಶ್ರಮ ಮೇಲಲ್ಲವೇ? ಅಲ್ಲದೇ ಅಲ್ಲಿ ವಸಿಷ್ಠರಿರುತ್ತಾರೆ. ಅವರ ಪ್ರಭಾವ ಇದ್ದಾಗ ತನ್ನ ಶಕ್ತಿ ಕೊಂಚ ಕಡಿಮೆಯೇ. ಎಷ್ಟೇ ಆಗಲೀ ಅವರು ನನಗಿನ್ನಾ ದೊಡ್ಡವರು ; ತನಗೂ ಪರೋಕ್ಷ ಗುರುಗಳು, ಬ್ರಹ್ಮರ್ಷಿಗಳು. ಇರಲಿ. ತನಗಿನ್ನೂ ಆ ಪಟ್ಟ ಸಿಕ್ಕಿಲ್ಲ. ಅದಕ್ಕಾಗಿ ತನ್ನ ಪ್ರಯತ್ನ. ಆದರೆ ಏನು ಮಾಡುವುದು, ಪುಣ್ಯ ಸಂಗ್ರಹ ಆಗತ್ತೆ, ಮಾಯ ಆಗತ್ತೆ. ಬಹುಶಃ  ಇನ್ನೂ ನಾನು ಆ ಪದವಿಗೆ ಸಿದ್ಧನಾಗಿಲ್ಲ ಅಂತ ಕಾಣತ್ತೆ . ಬಹುಶಃ ಈ ಹರಿಶ್ಚಂದ್ರನ ನೆವದಲ್ಲಿ ನನ್ನ ಪರೀಕ್ಷೆಯೂ ಆಗ್ತಾ ಇದೆಯೇನೋ. ಇರಲಿ, ಅವನನ್ನ ಇಲ್ಲಿ ಕರೆಸಿಕೊಂಡು ಹೇಗೆ ಪರೀಕ್ಷಿಸೋದು ? ಅವನಿನ್ನೂ ಬರೋದಿಕ್ಕೆ ಕೆಲವು ದಿವಸಗಳು ಬೇಕಲ್ಲ , ನೋಡೋಣ. ಹೇಗೆ ಇದು ರೂಪಗೊಳ್ಳುತ್ತೆ ಅಂತ"
                                         ************
ಮುಚ್ಚಿದ ಕಣ್ಣಿನ ಹಿಂದೆ ಹರಿಶ್ಚಂದ್ರ ರಾಜ್ಯದಿಂದ ಹೊರಟಿದ್ದು, ಬೇಟೆಯಾಡುತ್ತ ಬರುತ್ತಿರುವುದು ಎಲ್ಲ ಕಾಣುತ್ತಿದೆ. ಇನ್ನೇನು ತನ್ನ ಆಶ್ರಮಕ್ಕೆ ಬರಬೇಕು. " ಅರೆ ! ಇದೇನು ಪೂರ್ವಕ್ಕೆ ಹೋಗುತ್ತಿದ್ದಾನೆ! ಓಹ್, ಅಲ್ಲಿ ವಸಿಷ್ಠಾಶ್ರಮ. ಕುಲಗುರುಗಳನ್ನು ನೋಡೊದಿಕ್ಕೆ ಹೋಗುತ್ತಿದ್ದಾನೆ. ಸಹಜವೇ... ಹೋಗಲಿ ಹೋಗಲಿ, ಹೋಗಿ ಬರಲಿ. ಹೇಗೂ ಬರುತ್ತಾನೆ ತನ್ನ ಆಶ್ರಮಕ್ಕೆ.
                                      *************

ದಿನ ಕಳೆದರೂ ಹರಿಶ್ಚಂದ್ರನ ಸುಳಿವೇ ಇಲ್ಲ! ಮತ್ತೆ ಕಣ್ಣು ಮುಚ್ಚಿದರೆ, ರಾಜ ಹಿಂದಿರುಗುತ್ತಿದ್ದಾನೆ! ಏಕೆ ? ಏನಾಯಿತು ? ಭೂತಕಾಲದ ದರ್ಶನದ ಮಂತ್ರೋಚ್ಛಾರಣೆ ಮಾಡಿ ಕರ್ಣ ಪಿಶಾಚಿಯನ್ನು ಕೇಳಿದರು, " ರಾಜ ಹಿಂದಿರುಗುವುದಕ್ಕೆ ಕಾರಣ ಏನು? " ಮಾರುದ್ದ ಕಿವಿಗಳಿದ್ದ ಆ ಗಾಳಿಯ ಹಗುರದ ಪಿಶಾಚಿ ವಿಶ್ವಮಿತ್ರರ ಕಿವಿಯ ಬಳಿ ಉಸುರಿತು. " ಸ್ವಾಮಿ, ಅದಕ್ಕೆ ಕಾರಣ ವಸಿಷ್ಠರ ಸೂಚನೆ". " ಏನು ಹೇಳಿದರವರು ?" " ಸ್ವಾಮಿ, ತಾವೇ ಕೇಳಿ" . ಕ್ಷಣದಲ್ಲಿ, ಅತಿ ಪರಿಚಿತವಿದ್ದ ಬ್ರಹ್ಮರ್ಷಿಗಳ ಕಂಠೀರವ ಕೇಳಿಸಿತು. " ಹರಿಶ್ಚಂದ್ರ, ಬಂದ ದಾರಿಯಲ್ಲೇ ಹಿಂದಿರುಗು. ರಾಜ್ಯಕ್ಕೆ ವಾಪಸಾಗು. ಹರದಾರಿ ದೂರದಲ್ಲಿ ಕೌಶಿಕರ ಆಶ್ರಮವಿದೆ. ಅತ್ತ ಹೋಗಬೇಡ, ಏಕೆಂದು ಕೇಳಬೇಡ. "
                                      *************
ಓಹ್ ! ತನ್ನ ಶ್ರಮವೆಲ್ಲ ವ್ಯರ್ಥ. ರಾಜ ವಾಪಸಾಗುತ್ತಿದ್ದಾನೆ. ಇಲ್ಲ-ಇಲ್ಲ, ಹಾಗಾಗಕೂಡದು. ಹರಿಶ್ಚಂದ್ರ ಇಲ್ಲಿಗೆ ಬರಲೇ ಬೇಕು. ಮೂಲೆಯಲ್ಲಿದ್ದ ಕಂಬಳಿಯ ಮೇಲೆ ಅವರ ನೋಟ ಹರಿಯಿತು. ಕ್ಷಣಮಾತ್ರದಲ್ಲಿ ಅದು ಕಾಡು ಹಂದಿಯಾಯಿತು. ಬಲಾಢ್ಯ ಹಂದಿ. ಕಣ್ಣುಗಳೋ ಸಿಡಿಲ ಬೆಂಕಿ. ಬಾಯಿನ ದಾಡೆಗಳೋ ಬ್ರಹ್ಮಾಸ್ತ್ರಗಳು. ವಜ್ರದ ಚಿಪ್ಪಿನಿಂದ ಮಾಡಿದ ಕಿವಿ. ನೇಗಿಲಿನಂತಿರುವ ಮುಸುಡಿ. ಮೃತ್ಯುವಿನ ಕೈ ಬಾಣದಂತಹ ದೇಹ. ಒಟ್ಟಿನಲ್ಲಿ ಯಮನ ಕೋಣನಂತೆ ಅಕರಾಳ ವಿಕರಾಳ, ತಾಳೆಯ ಮರದೆತ್ತರದ ಹಂದಿ. 
 
(ಸಿಡಿಲ ಕಿಡಿಯಂತೆ ಎಸೆವ ಕಣ್ಣು ಬ್ರಹ್ಮಾಸ್ತ್ರದ ಎರಡು ಉಡಿಯನು ಇರುಕಿದ ತೆರೆದ ದಾಡೆ ವಜ್ರದ ಚಿಪ್ಪನು ಇಡಿದುವು ಎನಿಸಿರ್ಪ ಕಿವಿ ಬಲನ ನೇಗಿಲ ಪೋಲ್ವ ತುಂಡ, ಕಾಲನ ಕೋಣನರರೇ ವರಾಹ ಮುಖವಡೆದಿರದು) 
                                          *************
ಬಂದೆರಗುತ್ತಿದ್ದಂತೆಯೇ ಸೈನ್ಯ, ಬೇಟೆಗಾರರು ಚೆಲ್ಲಾಪಿಲ್ಲಿ. ಮುಂದಿದ್ದ ಹರಿಶ್ಚಂದ್ರನಿಗೆ ಹಿಂದಿನಿಂದ ಬೊಬ್ಬೆಯೋ ಬೊಬ್ಬೆ. ನೋಡುತ್ತಾನೆ, ಕರಿಯ ದೆವ್ವದಂತಹುದೇನೋ ಎರಗಿದೆ ಬೇಟೆಗಾರರ ಮೇಲೆ. ರಥವನ್ನು ಹಿಂದಿರುಗಿಸಿದ. ಅದನ್ನು ಕಂಡ ಹಂದಿ ಓಡ ತೊಡಗಿತು. ಅಟ್ಟಿಸಿಕೊಂಡು ಬಂತು ರಥ. ಸಮತಟ್ಟಲ್ಲದ ಜಾಗವಾದ್ದರಿಂದ ಬಾಣವನ್ನು ಕೇಂದ್ರೀಕರಿಸಲಾಗುತ್ತಿಲ್ಲ. ಕಾಡು, ಮೇಡು, ಅತ್ತ ಇತ್ತ ಅಲೆದು ಕೊನೆಗೆ ಮೈದಾನ ಸಿಕ್ಕು, ಬಾಣ ಹೂಡಿ ಹೊಡೆದ. ಎಗರಿ ಬಿದ್ದರೂ ಓಡಿ ಮರೆಯಾಯಿತು. ಮೈಲುಗಟ್ಟಲೆ ಕಾಡಿನಲ್ಲಿ, ದಾರಿಯಲ್ಲದ ದಾರಿಯಲ್ಲಿ ಏರು ತಗ್ಗುಗಳಲ್ಲಿ, ರಥದ ಕುಲುಕಾಟದಲ್ಲಿ ರಾಜ-ರಾಣಿಯರಿಗೆ ಮೈ ಹಣ್ಣಾಯಿತು. ರಥದಿಂದ ಇಳಿದವರು ಬಳಿಯ ಕೊಳದಲ್ಲಿ ನೀರು ಕುಡಿದರು. ಮರದ ನೆರಳಿನಲ್ಲಿ ಚಂದ್ರಮತಿಯ ತೊಡೆಯಮೇಲೆ ತಲೆಯಿಟ್ಟು ಮಲಗಿದ ಹರಿಶ್ಚಂದ್ರ. 
-ಡಾ. ಪಾವಗಡ ಪ್ರಕಾಶ್ ರಾವ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com