( ಆದರೆ ಒಂದು ವಿಷಯವನ್ನು ಓದುಗರೆ , ನಾನು ತಮ್ಮಲ್ಲಿ ಚರ್ಚಿಸಬೇಕಿದೆ . ಹರಿಶ್ಚಂದ್ರನ ಕಥೆ ಕೇಳಿದ ಮಂದಿ, ಚಲನಚಿತ್ರ ನೋಡಿದ ಜನ , ಹರಿಕಥೆಗೆ ಕಿವಿಕೊಟ್ಟ ಭಕ್ತರು .... ಎಲ್ಲರೂ ವಿಶ್ವಮಿತ್ರರನ್ನು ಬೈಯ್ಯುವವರೇ , ನಿಟಿಗೆ ಮುರಿಯುವವರೇ , ಕಣ್ಣು ತುಂಬಿಕೊಳ್ಳುವವರೇ . ಅಲ್ಲವೇ ? ಖಳನಾಯಕನಿಗಿನ್ನ ಹೆಚ್ಚು ಹಿಂಸಿಸಿದ್ದ ವಿಶ್ವಮಿತ್ರರನ್ನು ಇನ್ನೇನು ಹೂಗಳಿಂದ ಪೂಜಿಸಬೇಕೇ ? ವಸಿಷ್ಠರಲ್ಲಿ ಸೆಣೆಸಿ ಗೆಲ್ಲಲಾಗದೆ , ಅವನ ಶಿಷ್ಯನಲ್ಲಿ , ಅದೂ ಸ್ಪರ್ಧೆಗೇ ಸಿದ್ಧವಾಗದ ಅಷ್ಟು ಮೃದು ಮಾತಿನ ಶುದ್ಧ ಮನಸ್ಕನನ್ನು ನೋಯಿಸಬಹುದೇ ? ಪಾಪ , ಚಂದ್ರಮತಿ ಎಂತಹ ಕೋಮಲೆ ; ಆಕೆಯನ್ನು ಜೀತದಾಳಾಗಿ ಮಾಡುವುದೇ ? ನಾಗನನ್ನು ಕಳಿಸಿ ಲೋಹಿತಾಶ್ವನನ್ನು ಕಚ್ಚಿಸುವುದೇ ? ಕಾಶಿ ರಾಜನ ಮಗನನ್ನು ಸಾಯಿಸಿ , ಚಂದ್ರಮತಿಯ ದಾರಿಯಲ್ಲಿ ಇಟ್ಟು , ಹತಾಶ ರಾಣಿಯನ್ನು ಕಟಕಟೆಯಲ್ಲಿ ನಿಲ್ಲುವಂತೆ ಮಾಡಬಹುದೇ ? ಇನ್ನೇನು ಪರಾಕ ಪಟ್ಟಿ ಹೇಳೋಣ ಸ್ವಾಮಿ , ವಿಶ್ವಮಿತ್ರರ ಬಗ್ಗೆ ?