ಮಹತ್ವ: ಶತ ಶತಮಾನಗಳಿಂದ ರಾಮಾಯಣ ಸುತ್ತಾಡಿದ ಪ್ರದೇಶ, ಲಂಘಿಸಿದ ಸಾಗರಗಳು , ಏರಿದ ರಾಷ್ಟ್ರಗಳು, ಏರಿದ ರಾಷ್ಟ್ರಗಳು , ವಶಪಡಿಸಿಕೊಂಡ ಜನಾಂಗಗಳು ಒಂದೇ ಎರಡೇ ? ಅದರ ಮೇಲೆ ನಡೆಸಿದ ಸಂಶೋಧನೆಗಳು, ಮಹಾ ಪ್ರಬಂಧಗಳು, ರಚಿಸಿದ ಕೀರ್ತನೆಗಳು, ಹಾಡಿದ ಹಾಡುಗಳು , ರಚಿಸಿದ ಕಾವ್ಯಗಳು, ನಟಿಸಿದ ನಾಟ್ಯಗಳು, ಆಡಿದ ನಾಟಕಗಳು, ಪರವಶರಾದ ತಾತ್ವಿಕರು, ತಲೆ ಕೆಡೆಸಿಕೊಂಡ ಇತಿಹಾಸಙ್ಞರು, ಶರಣಾಗತರಾದ ನೀತಿ ನಿರೂಪಕರು, ಪ್ರಭಾವಕ್ಕೊಳಗಾದ ಉತ್ಸದ್ದಿಗಳು , ಮುಳುಗೆದ್ದ ಚಿತ್ರ - ಕಲಾವಿದರು , ಕಾಷ್ಟ , ಶಿಲ, ಲೋಹ ಶಿಲ್ಪಿಗಳು.... ಲಕ್ಷವೇ ಕೋಟಿಯೇ ? ಭಾರತದ ಮಟ್ಟಿಗೆ ಹೇಳಬೇಕೆಂದರೆ ರಾಮನ ಬಗೆಗೆ ಏನೂ ಗೊತ್ತಿಲ್ಲ ಎಂದರೆ ಅವನೊಬ್ಬ ಮಹಾ ಅಙ್ಞಾನಿ ಅಥವ ಉಸಿರಾಡುವ ಶವ.