ಪ್ರಾಸ್ಟೇಟ್‍ ಗ್ರಂಥಿಯ ಸಮಸ್ಯೆ (ಕುಶಲವೇ ಕ್ಷೇಮವೇ)

ಡಾ. ವಸುಂಧರಾ ಭೂಪತಿಪ್ರಾಸ್ಟೇಟ್‍ ಗ್ರಂಥಿ ಪುರುಷರಲ್ಲಿ ಮೂತ್ರಪಿಂಡದ ಕೆಳಗಡೆ ಇರುವ ಗ್ರಂಥಿ. ಈ ಗ್ರಂಥಿ ಗಾತ್ರದಲ್ಲಿ ಒಂದು ವಾಲ್ನ ಟ್ನಥಷ್ಟು ಇರುತ್ತದೆ. ವೀರ್ಯಾಣುವಿಗೆ ಪೌಷ್ಟಿಕಾಂಶ ಒದಗಿಸುವ ವೀರ್ಯದ್ರವವನ್ನು ಸಂಗ್ರಹಿಸುವುದು ಪ್ರಾಸ್ಟೇಟ್‍ ಗ್ರಂಥಿಯ ಮುಖ್ಯ ಕೆಲಸ.
ಪ್ರಾಸ್ಟೇಟ್‍ ಗ್ರಂಥಿ
ಪ್ರಾಸ್ಟೇಟ್‍ ಗ್ರಂಥಿ

ಪ್ರಾಸ್ಟೇಟ್‍ ಗ್ರಂಥಿ ಪುರುಷರಲ್ಲಿ ಮೂತ್ರಪಿಂಡದ ಕೆಳಗಡೆ ಇರುವ ಗ್ರಂಥಿ. ಈ ಗ್ರಂಥಿ ಗಾತ್ರದಲ್ಲಿ ಒಂದು ವಾಲ್ನ ಟ್ನಥಷ್ಟು ಇರುತ್ತದೆ. ವೀರ್ಯಾಣುವಿಗೆ ಪೌಷ್ಟಿಕಾಂಶ ಒದಗಿಸುವ ವೀರ್ಯದ್ರವವನ್ನು ಸಂಗ್ರಹಿಸುವುದು ಪ್ರಾಸ್ಟೇಟ್‍ ಗ್ರಂಥಿಯ ಮುಖ್ಯ ಕೆಲಸ.

ವಯಸ್ಸಾಗುತ್ತ ಹೋದಂತೆ ಪ್ರಾಸ್ಟೇಟ್‍ ಗ್ರಂಥಿ ಹಿಗ್ಗುತ್ತಾ ಹೋಗುತ್ತದೆ. ನಲವತ್ತು ವರ್ಷದ ಬಳಿಕ ಪ್ರಾಸ್ಟೇಟ್‍ ಗ್ರಂಥಿಯು ನಿಧಾನಗತಿಯ, ಸೌಮ್ಯ ಸ್ವರೂಪದ ಊತಕ್ಕೆ ಒಳಗಾಗಿ ಗಾತ್ರವನ್ನು ಹಿಗ್ಗಿಸಿಕೊಳ್ಳುತ್ತದೆ. ಇದರ ಪರಿಣಾಮವಾಗಿ ಮೂತ್ರನಾಳದ ಮೇಲೆ ಒತ್ತಡ ಬೀಳುತ್ತದೆ ಮತ್ತು ಅದು ಕುಗ್ಗುತ್ತದೆ. ಈ ಅಡಚಣೆಯನ್ನು ನಿವಾರಿಸಿಕೊಳ್ಳಲು ಮೂತ್ರಕೋಶವು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಇದರಿಂದ ಮೂತ್ರನಾಳದಿಂದ ಮೂತ್ರ ವಿಸರ್ಜನೆಯಾಗುವಾಗ ಉರಿ ಕಾಣಿಸಿಕೊಳ್ಳಬಹುದು. ಮೂತ್ರ ವಿಸರ್ಜನೆಗೆ ಅವಸರವಾಗುವುದು, ಪದೇ ಪದೇ ಮೂತ್ರಕ್ಕೆ ಹೋಗುವುದು, ಅನಿಶ್ಚಿತ ಮೂತ್ರಶಂಕೆ, ಮೂತ್ರಕೋಶದಿಂದ ಪೂರ್ಣ ಪ್ರಮಾಣದಲ್ಲಿ ಮೂತ್ರ ಹೊರ ಹೋಗುತ್ತಿಲ್ಲ ಎಂದೆನಿಸುವುದು, ಮೂತ್ರಧಾರೆ ತೆಳುವಾಗಿರುವುದು, ಮೂತ್ರ ಅನಿಯಂತ್ರಿತವಾಗಿ ಹರಿಯುವುದು ಇತ್ಯಾದಿಯಾಗಿ ಇವೆಲ್ಲ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದು ಕಿರಿಕಿರಿಗೆ ಕಾರಣವಾಗುತ್ತದೆ. ಜೊತೆಗೆ ಇದು ಜೀವನ ಶೈಲಿಯ ಗುಣಮಟ್ಟದ ಮೇಲೆಯೂ ಪರಿಣಾಮ ಬೀರುತ್ತದೆ. 
ಕೆಲವರಲ್ಲಿ ಇದರಿಂದ ಮೂತ್ರದ ಹರಿವಿಗೆ ಪೂರ್ಣ ಪ್ರಮಾಣದಲ್ಲಿ ಅಡೆತಡೆ ಉಂಟಾಗಿಬಿಡಬಹುದು. ಇದಕ್ಕೆ ಸಾಮಾನ್ಯ ಕಾರಣಗಳೆಂದರೆ ಪ್ರಾಸ್ಟೇಟ್‍ ಗ್ರಂಥಿಯ ಉರಿಯೂತ (ಪ್ರಾಸ್ಟ್ಯಾಟಿಸ್), ಪ್ರಾಸ್ಟೇಟ್‍ ಗ್ರಂಥಿಯ ಹಿಗ್ಗುವಿಕೆ (ಬಿನೈನ್ ಪ್ರಾಸ್ಟ್ಯಾಟಿಕ್ ಹೈಪರ್ಟ್ರೋ್ಫಿ) ಹಾಗೂ ಪ್ರಾಸ್ಟೇಟ್‍ ಕ್ಯಾನ್ಸರ್.

ಪ್ರಾಸ್ಟೇಟ್‍ ಕ್ಯಾನ್ಸರ್
ರೋಗಿಯು ಇವುಗಳ ಪೈಕಿ ಒಂದು ಅಥವಾ ಹೆಚ್ಚು ಲಕ್ಷಣಗಳನ್ನು ಅನುಭವಿಸಬಹುದು ಮತ್ತು ಇದು ನಿಧಾನವಾಗಿ ಜೀವನದ ಗುಣಮಟ್ಟವನ್ನು ಬಾಧಿಸುವುದಕ್ಕೆ ತೊಡಗುತ್ತದೆ. ಸಾಮಾನ್ಯವಾಗಿ ಪ್ರಾಸ್ಟೇಟ್‍ ಗ್ರಂಥಿಯ ಊತವು ಸೌಮ್ಯವಾಗಿ, ನಿರಪಾಯಕಾರಿಯಾಗಿ ಇರುತ್ತದಾದರೂ ಪ್ರಾಸ್ಟ್ರೇಟ್‍ ಕ್ಯಾನ್ಸರ್‍ ಆಗಿರುವ ಸಾಧ್ಯತೆಯೂ ಇಲ್ಲದಿಲ್ಲ. ರೋಗಿಯು ಇಂತಹ ಲಕ್ಷಣಗಳು ಅನುಭವಿಸಿದಾಗ ಅದು ಕ್ಯಾನ್ಸರ್‍ ಅಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಯುರಾಲಜಿಸ್ಟ್‍ ಅವರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಂತ ಮುಖ್ಯ. ಪ್ರಾಸ್ಟೇಟ್‍ ಗ್ರಂಥಿಯ ಕ್ಯಾನ್ಸರ್‍ ಇರುವುದು ಆರಂಭಿಕ ಹಂತದಲ್ಲಿ ಅದು ಪತ್ತೆಯಾಗುವುದರಿಂದ ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ.

ಪ್ರಾಸ್ಟೇಟ್‍ ಸಮಸ್ಯೆಗೆ ಚಿಕಿತ್ಸೆ
ಚಿಕಿತ್ಸೆಯ ಮೊದಲ ಹಂತವೆಂದರೆ ಔಷಧಗಳ ಸೇವನೆ. ಕಡಿಮೆ ಅಡ್ಡಪರಿಣಾಮಗಳಿರುವ ಹೆಚ್ಚು ಪರಿಣಾಮಕಾರಿ ಔಷಧಗಳು ಲಭ್ಯವಿದ್ದು, ದೀರ್ಘಕಾಲದವರೆಗೆ ತೆಗೆದುಕೊಳ್ಳಬಹುದು. ಔಷಧಗಳಿಗೆ ಬಗ್ಗದ ಅಥವಾ ಅತ್ಯಂತ ದೊಡ್ಡದಾದ ಪ್ರಾಸ್ಟೇಟ್‍ ಗ್ರಂಥಿಯಿರುವ ರೋಗಿಗಳಿಗೆ ಮಾತ್ರ ಶಸ್ತ್ರಚಿಕಿತ್ಸೆ ಮಾಡಬಹುದು. ಆಧುನಿಕ ಶಸ್ತ್ರಚಿಕಿತ್ಸಾ ವಿಧಾನವಾದ ಎಂಡೊಸ್ಕೋಪಿಯಿಂದ ಪ್ರಾಸ್ಟೇಟ್‍ ಗ್ರಂಥಿಯ ಚಿಕಿತ್ಸೆ (ಟಿಯುಆರ್ಪಿಕ) ಮಾಡಬಹುದು ಮತ್ತು ಲೇಸರ್ ವಿಧಾನ (ಎಚ್ಒ್ಎಲ್ಇ್ಪಿ) ದಿಂದ ಮೂತ್ರದ ಹರಿವಿನ ಅಡೆತಡೆಯನ್ನು ತೆಗೆದು ಹಾಕಬಹುದು. ಈ ಚಿಕಿತ್ಸೆಗಳನ್ನು ಶಿಶ್ನ ಹಾಗೂ ಮೂತ್ರನಾಳದ ಮೂಲಕ ಉಪಕರಣ ಅಳವಡಿಸಿ ಮಾಡುವುದರಿಂದ ತೀರಾ ಕಡಿಮೆ ರಕ್ತಸ್ರಾವ ಇರುತ್ತದೆ, ಮಾತ್ರವಲ್ಲ, ಶಸ್ತ್ರಚಿಕಿತ್ಸೆ ಕಲೆಯೂ ಇರುವುದಿಲ್ಲ. ಇಂತಹ ಪ್ರಕರಣಗಳಲ್ಲಿ ವಯಸ್ಸಾದವರ ಮೇಲೇ ಈ ಶಸ್ತ್ರಚಿಕಿತ್ಸೆಗಳನ್ನು ಮಾಡುವುದರಿಂದ ಅವರ ಸುರಕ್ಷತೆಯೇ ಮುಖ್ಯವಾಗಿದ್ದು, ಅತ್ಯಂತ ಸುರಕ್ಷಿತವೂ ಹೌದು.

ಪ್ರಾಸ್ಟೇಟ್ ಹಿಗ್ಗುವಿಕೆಯ ಲಕ್ಷಣಗಳ ಬಗ್ಗೆ ಜಾಗೃತಿ ಮೂಡಿಸಿ, ವೃದ್ಧರಲ್ಲಿ ಆಗಾಗ ತಪಾಸಣೆ ಮಾಡಿಸುತ್ತಿದ್ದರೆ ಪತ್ತೆ ಹಚ್ಚುವುದು ಸುಲಭ. ಇದರಿಂದ ಜೀವನಮಟ್ಟವನ್ನು ಹಾಗೂ ಸಾಮಾನ್ಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆದರೆ, ಚಿಕಿತ್ಸೆ ಒದಗಿಸದೆ ಊತವನ್ನು ಹಾಗೆಯೇ ಬಿಟ್ಟರೆ ಊದಿಕೊಂಡ ಪ್ರಾಸ್ಟೇಟ್‍ ಗ್ರಂಥಿಯು ಮೂತ್ರಕೋಶದ ಸ್ನಾಯುಗಳಿಗೆ ಹಾನಿ ಉಂಟು ಮಾಡಬಹುದು, ಪದೇಪದೇ ಸೋಂಕುಗಳಿಗೆ ಕಾರಣವಾಗಬಹುದು, ಮೂತ್ರಪಿಂಡಗಳಿಗೆ ಹಾನಿ ಉಂಟು ಮಾಡಬಹುದು ಹಾಗೂ ಕೆಲವು ರೋಗಿಗಳಲ್ಲಿ ಮೂತ್ರ ವಿಸರ್ಜನೆ ಸಂಪೂರ್ಣವಾಗಿ ನಿಂತು ಮೂತ್ರ ಕಟ್ಟಿಕೊಳ್ಳುವುದಕ್ಕೂ ಕಾರಣವಾಗಬಹುದು.

ವ್ಯಕ್ತಿ ಎಷ್ಟು ಶಕ್ತಿಯುತವಾಗಿ ಮೂತ್ರ ವಿಸರ್ಜನೆ ಮಾಡುತ್ತಾನೆ ಎಂಬುದನ್ನು ತಿಳಿಯಲು ಮೂತ್ರಧಾರೆಯ ತಪಾಸಣೆ ನಡೆಸಲಾಗುತ್ತದೆ. ಸಾಮಾನ್ಯವಾಗಿ, ದೊಡ್ಡಗಾತ್ರದ ಪ್ರಾಸ್ಟೇಟ್‍ ಗ್ರಂಥಿಯು ಮೂತ್ರ ವಿಸರ್ಜನೆಗೆ ಹೆಚ್ಚು ಅಡಚಣೆಯನ್ನು ಒಡ್ಡುತ್ತದೆ. ಆದರೆ ಸಣ್ಣಗಾತ್ರದ ಪ್ರಾಸ್ಟೇಟ್‍ ಗ್ರಂಥಿಯೂ ತೀವ್ರ ಅಡಚಣೆಯನ್ನು ಒಡ್ಡುವುದುಂಟು. ಹೀಗಾಗಿ ಮೂತ್ರಧಾರೆಯ ತಪಾಸಣೆ ಉಪಯುಕ್ತವಾಗುತ್ತದೆ ಗಮನಾರ್ಹವಾದ ಅಡಚಣೆ ಇಲ್ಲವಾಗಿದ್ದಲ್ಲಿ, ಪ್ರಾಸ್ಟ್ರೇಟ್ ಲಕ್ಷಣಗಳನ್ನು ದೂರ ಮಾಡಲು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಸಹಾಯ ಮಾಡುತ್ತದೆ.

ಕಾಫಿ, ಚಹಾ ಮತ್ತು ಕೋಲಾದಂತಹ ಕೆಫೀನ್ಯುಹಕ್ತ ಪಾನೀಯಗಳ ಸೇವನೆಯನ್ನು ಕಡಿಮೆ ಮಾಡುವುದು ಇದರಲ್ಲಿ ಸೇರಿದೆ. ಮದ್ಯಪಾನವನ್ನು ವರ್ಜಿಸಬೇಕು. ರಾತ್ರಿ ಮೂತ್ರ ವಿಸರ್ಜನೆಗೆ ಏಳಬೇಕಾಗಿ ಬರುವುದನ್ನು ಕಡಿಮೆ ಮಾಡಲು ನಿರ್ದಿಷ್ಟವಾಗಿ ಸಂಜೆ ಮತ್ತು ರಾತ್ರಿ ದ್ರವಾಹಾರ ಸೇವನೆಯನ್ನು ಮಿತಗೊಳಿಸುವುದು ಅಗತ್ಯ. ಪ್ರಾಸ್ಟೇಟ್‍ ಗ್ರಂಥಿಯ ಊತದಿಂದ ಸಮಸ್ಯೆಗಳು ತೀವ್ರವಾಗಿರುವ ಅಥವಾ ಅಡಚಣೆ ಇರುವುದು ತಪಾಸಣೆಗಳಿಂದ ಖಚಿತವಾಗಿರುವ ರೋಗಿಗಳಿಗೆ ಪ್ರಾಸ್ಟ್ರೇಟ್‍ ಗ್ರಂಥಿಯನ್ನು ಸಡಿಲಿಸುವ ಔಷಧಿಗಳು ಮತ್ತು ಅಗತ್ಯವಾದರೆ ಅದರ ಗಾತ್ರವನ್ನು ಕುಗ್ಗಿಸುವ ಔಷಧಿಗಳನ್ನು ಶಿಫಾರಸು ಮಾಡಲಾಗುತ್ತದೆ.

ಆಯುರ್ವೇದಲ್ಲಿಯೂ ಪ್ರಾಸ್ಟೇಟ್ ಸಮಸ್ಯೆಗೆ ಔಷಧಗಳು ಮತ್ತು ಚಿಕಿತ್ಸೆಗಳು ಲಭ್ಯವಿವೆ. ರೋಗಿಗಳು ಸಮಸ್ಯೆ ಕಂಡುಬಂದ ತಕ್ಷಣ ಆಯುರ್ವೇದ ವೈದ್ಯರನ್ನು ಕಂಡು ಸಲಹೆ ಪಡೆದು ಅದರಂತೆ ನಡೆದುಕೊಳ್ಳಬಹುದು. ಆಯುರ್ವೇದದಲ್ಲಿ ರೋಗಿಗಳ ವಯಸ್ಸು, ಪ್ರಕೃತಿ ಮತ್ತು ಸಮಸ್ಯೆಯ ತೀವ್ರತೆ ನೋಡಿ ಕ್ರಮ ಕೈಗೊಳ್ಳಲಾಗುತ್ತದೆ.

ಕೊನೆಯದಾಗಿ ಹೇಳುವುದಾದರೆ, ಪ್ರಾಸ್ಟೇಟ್‍ ಗ್ರಂಥಿಯ ಸಮಸ್ಯೆಯು ವಯೋವೃದ್ಧರಾಗುತ್ತಿರುವ ಪುರುಷರಲ್ಲಿ ಕಾಣಿಸಿಕೊಳ್ಳುವುದು ಅತ್ಯಂತ ಸಾಮಾನ್ಯವಾಗಿದೆ. ಇದರಲ್ಲಿ ಮೂತ್ರಾಂಗ ಲಕ್ಷಣಗಳು ಪ್ರಧಾನವಾಗಿರುತ್ತವೆ ಮತ್ತು ಅವುಗಳನ್ನು ಅಲಕ್ಷಿಸಬಾರದು. ಬಹುತೇಕ ಪ್ರಕರಣಗಳಲ್ಲಿ ಊತವು ಸೌಮ್ಯ ರೂಪದ್ದಾಗಿರುತ್ತದೆ. ಆದರೆ, ಕ್ಯಾನ್ಸರ್‍ ಆಗಿರುವ ಸಾಧ್ಯತೆಯೂ ಇಲ್ಲದಿಲ್ಲ. ಈ ಲಕ್ಷಣಗಳನ್ನು ನಿರ್ಲಕ್ಷಿಸದೆ, ಯುರಾಲಜಿಸ್ಟ್‍ ಜತೆಗೆ ಸಮಾಲೋಚಿಸಿ, ತಪಾಸಣೆಗೊಳಪಡುವುದು ಅತ್ಯಂತ ಪ್ರಾಮುಖ್ಯ. ಜೀವನ ಶೈಲಿಯಲ್ಲಿ ಬದಲಾವಣೆಗಳು, ಔಷಧಿಗಳು ಮತ್ತು ಶಸ್ತ್ರಕ್ರಿಯೆ ಪ್ರಾಸ್ಟೇಟ್‍ ಗ್ರಂಥಿಯ ಸಮಸ್ಯೆಗಳಿಗೆ ಒಳಗಾದ ಪುರುಷರಿಗೆ ಇರುವ ಚಿಕಿತ್ಸೆಯ ಆಯ್ಕೆಗಳಾಗಿವೆ.

ಡಾ. ವಸುಂಧರಾ ಭೂಪತಿ
bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com