social_icon

ಫೈನಾನ್ಸಿಯಲ್ ರೇಶ್ಯುಸ್: ಅನುಪಾತಗಳ ಜಗತ್ತಿನಲ್ಲಿ ಒಂದು ಸುತ್ತು! (ಹಣಕ್ಲಾಸು)

ಹಣಕ್ಲಾಸು-363

ರಂಗಸ್ವಾಮಿ ಮೂನಕನಹಳ್ಳಿ

Published: 08th June 2023 12:00 AM  |   Last Updated: 08th June 2023 02:44 PM   |  A+A-


ಫೈನಾನ್ಸಿಯಲ್ ರೇಶ್ಯುಸ್

Posted By : Vishwanath S
Source :

ಸಂಸ್ಥೆಯ ಬ್ಯಾಲೆನ್ಸ್ ಶೀಟ್ ಮತ್ತು ಪ್ರಾಫಿಟ್ ಅಂಡ್ ಲಾಸ್ ಸ್ಟೇಟ್‌ಮೆಂಟ್‌ಗಳನ್ನು ಬಳಸಿಕೊಂಡು ಒಂದಷ್ಟು ಅನುಪಾತವನ್ನ ಕಂಡುಕೊಳ್ಳುವ ಕೆಲಸವನ್ನ ತಜ್ಞರು ಮಾಡುತ್ತಾರೆ. ಹೀಗೆ ಮಾಡುವುದರಿಂದ ಸಂಸ್ಥೆ ಎತ್ತ ಸಾಗುತ್ತಿದೆ ಎನ್ನುವುದನ್ನ ಸುಲಭವಾಗಿ ಲೆಕ್ಕ ಹಾಕಬಹುದು. ಕಳೆದ ವರ್ಷದೊಂದಿಗೆ ತುಲನೆಮಾಡಬಹುದು. ಅದೇ ವಲಯದ ಇತರ ಸಂಸ್ಥೆಗಳೊಂದಿಗೆ ಹೋಲಿಕೆ ಮಾಡಬಹುದು. ಒಟ್ಟಾರೆ ಮಾರುಕಟ್ಟೆಯ ಜೊತೆಗೆ ಕೂಡ ತೂಗಿ ನೋಡಬಹುದು. ಪ್ರತಿ ಬಾರಿಯೂ ಕೋಟಿಗಳ ಲೆಕ್ಕದಲ್ಲಿರುವ ಅಂಕಿಸಂಖ್ಯೆಯನ್ನ ಹೋಲಿಸಿ ನೋಡುವುದು ಕಷ್ಟವಾಗುತ್ತದೆ. ಹೀಗಾಗಿ ಈ ಅನುಪಾತಗಳು ಹೋಲಿಕೆಯನ್ನ ಸುಲಭ ಮಾಡುತ್ತವೆ.
 
ಫೈನಾಸಿಯಲ್ ರೇಶ್ಯು ಗಳಲ್ಲಿ ಬಹಳಷ್ಟು ಅನುಪಾತಗಳಿವೆ. ಅವುಗಳಲ್ಲಿ ಮುಖ್ಯವಾದವುಗಳನ್ನ ಇಲ್ಲಿ ನೋಡೋಣ .

1) Current Ratio, ಕರೆಂಟ್ ರೇಶ್ಯು: ಇದು ಸಂಸ್ಥೆಯ ಭಾದ್ಯತೆಯನ್ನ ಹಿಂತಿರುಗಿಸುವ ಶಕ್ತಿ ಇದೆಯೇ ಇಲ್ಲವೇ ಎನ್ನುವುದನ್ನ ತೋರಿಸುತ್ತದೆ. ಕರೆಂಟ್ ಅಸೆಟ್ ನನ್ನ ಕರೆಂಟ್ ಲಿಯಬಿಲಿಟಿಯಿಂದ ಬಾಗಿಸಿದಾಗ ಬರುವ ಬಾಗಲಬ್ದ ಒಂದಕ್ಕಿಂತ ಹೆಚ್ಚಿರಬೇಕು. ಎಷ್ಟು ಹೆಚ್ಚಿರುತ್ತದೆ ಅಷ್ಟು ಒಳ್ಳೆಯದು. ಇದರರ್ಥ 1 ರೂಪಾಯಿ ಅಸ್ತಿ ಮುಂದೆ 1 ರೂಪಾಯಿ ಭಾದ್ಯತೆಯಿದೆ ಎಂದಾಗುತ್ತದೆ. ಭಾಗಲಬ್ಧ 2 ಆಗಿದ್ದರೆ, ಎರಡು ರೂಪಾಯಿ ಆಸ್ತಿ ಮುಂದೆ 1 ರೂಪಾಯಿ ಭಾದ್ಯತೆಯಿದೆ ಎಂದರ್ಥ. ಹೀಗಾಗಿ ಬಾಗಲಬ್ದ ಹೆಚ್ಚಾದಷ್ಟೂ ಸಂಸ್ಥೆಯ ಹಣಕಾಸು ಪರಿಸ್ಥಿತಿ ಗಟ್ಟಿಯಾಗಿದೆ ಎನ್ನುವ ಸಂದೇಶವನ್ನ ಈ ಅನುಪಾತ ತಿಳಿಸುತ್ತದೆ.

ಹೂಡಿಕೆ ಮಾಡುವ ಮುನ್ನ ನೆನಪಿರಲಿ ಕರೆಂಟ್ ರೇಶ್ಯು ಕನಿಷ್ಠ 1 ಇರಬೇಕು. ಹೆಚ್ಚಿದ್ದರೆ ಒಳ್ಳೆಯದು. ಕಡಿಮೆ ಇದ್ದರೆ ಅದು ಎಚ್ಚರಿಕೆಯ ಕರೆಘಂಟೆ.

Current Ratio Formula = Current Assets / Current Liablities.

2) Debt-Equity Ratio, ಡೆಟ್ ಟು ಈಕ್ವಿಟಿ ಅನುಪಾತ: ಸಂಸ್ಥೆ ತನ್ನ ಮೆಷಿನರಿ ಇತ್ಯಾದಿಗಳನ್ನ ಕೊಳ್ಳಲು ಸಾಲವನ್ನ ಹಲವು ರೂಪದಲ್ಲಿ ಮಾಡಿರುತ್ತದೆ. ಅದೇ ಸಮಯದಲ್ಲಿ ಷೇರುದಾರರಿಂದ ಕೂಡ ಹಣವನ್ನ ಸಂಗ್ರಹಿಸುರುತ್ತದೆ. ಹೀಗಾಗಿ ಒಟ್ಟು ಸಾಲವನ್ನ ಒಟ್ಟು ಈಕ್ವಿಟಿಯಿಂದ ಬಾಗಿಸಿದಾಗ ಬರುವ ಭಾಗಲಬ್ಧ ಕಡಿಮೆ ಇದ್ದಷ್ಟೂ ಅದು ಸಂಸ್ಥೆಯ ಹಣಕಾಸು ಬಲವನ್ನ ತೂರಿಸುತ್ತದೆ. ಉದಾಹರಣೆಗೆ ಸಂಸ್ಥೆಯ ಒಟ್ಟು ಡೆಟ್ 50 ರೂಪಾಯಿ ಇದ್ದು ಸಂಸ್ಥೆಯ ಒಟ್ಟು ಈಕ್ವಿಟಿ 100 ರೂಪಾಯಿ ಇದ್ದರೆ ಆಗ ಬಾಗಲಬ್ದ 0. 50 ಆಗುತ್ತದೆ. ಅಂದರೆ ಸಾಲವನ್ನ ಸುಲಭವಾಗಿ ತೀರಿಸುವ ಶಕ್ತಿ ಸಂಸ್ಥೆಗಿದೆ ಎನ್ನುವ ಅರ್ಥವನ್ನ ಈ ಅನುಪಾತ ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಇದು ಒಂದು. ಒಂದೂವರೆ ಕೂಡ ಓಕೆ ಎನ್ನುವ ಮಟ್ಟಕ್ಕೆ ಬಂದು ನಿಂತಿದೆ. ಕೋವಿಡ್ ನಂತರದ ಕಾಲಘಟ್ಟದಲ್ಲಿಅನುಪಾತ 2 ಕೂಡ ಓಕೆ. ಇದಕ್ಕಿಂತ ಹೆಚ್ಚಿದ್ದರೆ ಮಾತ್ರ ಅಪಾಯ ಎನ್ನುವ ವ್ಯಾಖ್ಯಾನಗಳು ಬಂದಿವೆ.

ಹೂಡಿಕೆಗೆ ಮುನ್ನ: ಇದರ ಅನುಪಾತ 0. 50 ರಿಂದ 1 ರ ತನಕ ಇದ್ದರೆ ಉತ್ತಮ. ಹೆಚ್ಚಾಗಿದ್ದು, ಬೇರೆ ಅನುಪಾತಗಳು ಕಂಟ್ರೋಲ್‌ನಲ್ಲಿವೆ ಎನ್ನಿಸಿದರೆ ಮಾತ್ರ ಹೂಡಿಕೆ ಮಾಡಬಹುದು.

Debt/equity= Total debt/total shareholder's equity.

3) Debt Service Coverage Ratio: ಸಾಲವನ್ನ ಕವರ್ ಮಾಡಲು ಎಷ್ಟು ಆದಾಯವಿದೆ ಎನ್ನುವುದನ್ನ ತಿಳಿಯಲು ಈ ಅನುಪಾತವನ್ನ ಬಳಸುತ್ತೇವೆ. ಸಂಸ್ಥೆಯ ಮೂಲಭೂತ ಕಾರ್ಯದಿಂದ ಬರುವ ಆದಾಯದಿಂದ ಸಾಲಕ್ಕೆ ಕಟ್ಟಬೇಕಾದ ಬಡ್ಡಿ ಮತ್ತು ಅಸಲಿನ ದುಡ್ಡನ್ನ ಬಾಗಿಸಬೇಕು. ಭಾಗಲಬ್ಧ ಹೆಚ್ಚಿದಷ್ಟು ಒಳ್ಳೆಯದು. ಉದಾಹರಣೆ ನೋಡೋಣ. ಸಂಸ್ಥೆಯ ಒಟ್ಟು ಆಪರೇಟಿಂಗ್ ಇನ್ಕಮ್ 100 ರೂಪಾಯಿ ಆಗಿದ್ದು, ಒಟ್ಟು ಬಡ್ಡಿ ಮತ್ತು ಸಾಲದ ಮೇಲಿನ ಒಂದಂಶ ಅಸಲು ಕೊಡುವುದು 60 ರೂಪಾಯಿ ಎಂದು ಕೊಂಡರೆ ಆಗ 100/60 = 1.66 ಆಗುತ್ತದೆ. ಇದು 100/50= 2 ಆಗುತ್ತದೆ. ಅಕಸ್ಮಾತ್ ಇದು 100/80= 1.25 ಆಗುತ್ತದೆ. ಗಮನಿಸಿ ಈ ಅನುಪಾತ ಹೆಚ್ಚಿದಷ್ಟೂ ಸಂಸ್ಥೆ ಉತ್ತಮವಾಗಿದೆ ಎಂದರ್ಥ. ಅಂದರೆ ತನ್ನ ಸಾಲದ ಮೇಲಿನ ಬಡ್ಡಿ ಮತ್ತು ಅಸಲಿನ ಅಂಶವನ್ನ ನೀಡಿ ಕೂಡ ಸಾಕಷ್ಟು ಲಾಭಂಶ ಉಳಿದಿದೆ ಎನ್ನುವುದನ್ನ ಇದು ತೋರಿಸುತ್ತದೆ. ಹೀಗಾಗಿ ಷೇರುದಾರರಿಗೆ ಹೆಚ್ಚಿನ ಡಿವಿಡೆಂಡ್ ಸಿಗುವ ಸಾಧ್ಯತೆಯಿರುತ್ತದೆ.

ಹೂಡಿಕೆ ಮುನ್ನ: ಅನುಪಾತ ಹೆಚ್ಚಿದಷ್ಟೂ ಉತ್ತಮ.

DSCR = Annual Net Operating Income/Annual Debt Service.  

4) Return on Equity Ratio: ಷೇರುದಾರರು ಹೂಡಿದ ಹಣಕ್ಕೆ ಎಷ್ಟು ಹಣವನ್ನ ಅಥವಾ ಲಾಭವನ್ನ ಮರಳಿ ನೀಡಬಹುದು ಎನ್ನುವುದನ್ನ ಈ ಅನುಪಾತ ತಿಳಿಸುತ್ತದೆ. ಉದಾಹರೆಣೆಗೆ ಒಟ್ಟು ನಿವ್ವಳ ಲಾಭ 100 ರೂಪಾಯಿಯಿದ್ದು ಒಟ್ಟು ಷೇರುದಾರರ ಈಕ್ವಿಟಿ 1000 ರೂಪಾಯಿ ಇದ್ದರೆ ಆಗ 100/10000 *100= 10 ಪ್ರತಿಶತ ಆಗುತ್ತದೆ. ಅಂದರೆ ಪ್ರತಿ ಈಕ್ವಿಟಿ ಷೇರು 10 ರೂಪಾಯಿ ಲಾಭವನ್ನ ತಂದುಕೊಡುತ್ತದೆ ಎಂದರ್ಥ. ಸಹಜವಾಗೇ ಇದರ ಅನುಪಾತ ಹೆಚ್ಚಿದಷ್ಟೂ ಒಳಿತು.

ಹೂಡಿಕೆಗೆ ಮುನ್ನ: ಅನುಪಾತ ಹೆಚ್ಚಿದ್ದಷ್ಟೂ ಒಳ್ಳೆಯದು.

Return on equity = Net income or profit/Average shareholder's equity. *100.

5) Inventory turnover ratio: ಮಾರಾಟಕ್ಕೆ ಸಿದ್ದವಾದ ಪದಾರ್ಥ. ನಿಗದಿತ ಸಮಯದಲ್ಲಿ ಇದರ ವಿಲೇವಾರಿ ಆಗಬೇಕು. ಹೆಚ್ಚು ಸಮಯ ಇಲ್ಲಿ ಉಳಿದುಕೊಂಡ ಪದಾರ್ಥ ಸಂಸ್ಥೆಯ ರೆವೆನ್ಯೂ ದೃಷ್ಟಿಯಿಂದ ಒಳ್ಳೆಯದಲ್ಲ. ಇನ್ವೆಟರಿ ಹೋಲ್ಡಿಂಗ್ ಟೈಮ್ ಎಷ್ಟು ಕಡಿಮೆಯಿರುತ್ತದೆ ಅಷ್ಟು ಒಳ್ಳೆಯದು. ಹೆಚ್ಚಿದ ಇನ್ವೆಟರಿ ಹೋಲ್ಡಿಂಗ್ ಟೈಮ್ ಹೊಸ ವರ್ಕಿಂಗ್ ಕ್ಯಾಪಿಟಲ್ ಅವಶ್ಯಕತೆಯನ್ನ ಹೆಚ್ಚು ಮಾಡುತ್ತದೆ. ಇದರರ್ಥ ಸಂಸ್ಥೆ ವಿಧಿಯಿಲ್ಲದೆ ಹೊಸಸಾಲ ಮಾಡಬೇಕಾಗುತ್ತದೆ. ಹೀಗಾಗಿ ಇನ್ವೆಂಟರಿ ಟರ್ನಓವರ್ ರೇಶಿಯೋ ಬಹಳಮುಖ್ಯವಾಗುತ್ತದೆ. ಕೆಳಗಿನ ಸೂತ್ರ ಬಳಸಿ ಬರುವ ಭಾಗಲಬ್ಧ 2 ರಿಂದ 4 ಬಂದರೆ, ಸಂಸ್ಥೆಯ ಟರ್ನ್ಓವರ್ ಸೈಕಲ್ ಸರಿಯಾಗಿದೆ ಎಂದರ್ಥ. ಇದುಸೀಸನಲ್ ಪದಾರ್ಥಗಳಿಗೆ ಕೆಲವೊಮ್ಮೆ ಅನ್ವಯಿಸುವುದಿಲ್ಲ. ಯಾವ ವಲಯ ಎನ್ನುವುದು ಕೂಡ ಮುಖ್ಯವಾಗುತ್ತದೆ.

ಹೂಡಿಕೆಗೆ ಮುನ್ನ: ಆದರೆ ಬೈ ಅಂಡ್ ಲಾರ್ಜ್ 2 ರಿಂದ 4 ರಲ್ಲಿದ್ದರೆ ಉತ್ತಮ.

Inventory Turnover Ratio = Cost of Goods Sold / Avg. Inventory.

Average inventory = (beginning inventory + ending inventory) / 2.

Cost of Goods Sold ಅಂದರೆ ಪದಾರ್ಥವನ್ನ ಮಾರಾಟಮಾಡುವವರೆಗೆ ಆದ ಒಟ್ಟು ಖರ್ಚು

6) Trade Receivables turnover ratio: ಇದು ಒಟ್ಟು ಮಾರಾಟದ ಎಷ್ಟು ಹಣವನ್ನ ಮರಳಿ ಪಡೆದುಕೊಂಡಿದ್ದೇವೆ ಎನ್ನುವುದನ್ನ ತೋರಿಸುತ್ತದೆ. ಈ ಅನುಪಾತ ಹೆಚ್ಚಿದಷ್ಟೂ ಸಂಸ್ಥೆಯ ವಸೂಲಿ ಯೂನಿಟ್ ಅಥವಾ ರಿನಿವೇಬಲ್ಸ್ ಘಟಕ ಚನ್ನಾಗಿ ಕೆಲಸ ಮಾಡುತ್ತಿದೆ ಎಂದರ್ಥ. ಇದರ ಜೊತೆಗೆ ಇದು ಸಂಸ್ಥೆಯ ಕ್ಯಾಶ್ ಫ್ಲೋ ಕೂಡ ಉತ್ತಮವಾಗಿದೆ ಎನ್ನುವುದನ್ನ ತೋರಿಸುತ್ತದೆ. ಉದಾಹರಣೆಗೆ ಒಟ್ಟು ಕ್ರೆಡಿಟ್ ಸೇಲ್ಸ್ 100 ರೂಪಾಯಿ ಎಂದುಕೊಳ್ಳೋಣ. ಓಪನಿಂಗ್ ರಿಸಿವೆಬಲ್ಸ್ 25 ಮತ್ತು ಕ್ಲೋಸಿಂಗ್ ರಿಸಿವೆಬಲ್ಸ್ 25 ಎಂದು ಕೊಳ್ಳೋಣ ಆಗ ಅವೆರೆಜ್ 45+35/2 = 4೦ ಆಗುತ್ತದೆ. ಹೀಗಾಗಿ 100/40= 2.5 ಆಗುತ್ತದೆ.

ಹೂಡಿಕೆಗೆ ಮುನ್ : ಅನುಪಾತ ಹೆಚ್ಚಿದಷ್ಟೂ ಒಳ್ಳೆಯದು.

Trade  Receivable Turnover Ratio = Net Credit Sales/Average Accounts Receivable.

7) Trade payables turnover ratio: ಟ್ರೇಡ್ ಪೇಯಬಲ್ಸ್ ಅಥವಾ ಅಕೌಂಟ್ಸ್ಪೇಯಬಲ್ಸ್ ಎಂದರೆ ಇದೊಂದು ಇದೊಂದು ಅಲ್ಪಾವಧಿ ಸಾಲವಿದ್ದಂತೆ. ಇದನ್ನ ಕ್ರೆಡಿಟರ್ಸ್ ಟರ್ನ್ಓವರ್ ರೇಶ್ಯು ಎಂತಲೂ ಕರೆಯಲಾಗುತ್ತದೆ. ನಾವು ಖರೀದಿಮಾಡಿದ ಪದಾರ್ಥಕ್ಕೆ ಎಷ್ಟು ಹಣವನ್ನ ನೀಡಿದ್ದೇವೆ ಎನ್ನುವುದರ ಅನುಪಾತವನ್ನಇದು ತೋರಿಸುತ್ತದೆ. ಇದರ ಅನುಪಾತ ಹೆಚ್ಚಿದಷ್ಟೂ ಇದು ಸಂಸ್ಥೆ ತನ್ನ ಸಪ್ಪ್ಲೈರ್ಗಳಿಗೆ ಸರಿಯಾಗಿ ಹಣವನ್ನ ನೀಡುತ್ತಿದೆ  ಎನ್ನುವುದನ್ನ ಸೂಚಿಸುತ್ತದೆ. ಇದು ಕಡಿಮೆಯಾದಷ್ಟೂ ಸಂಸ್ಥೆಯ ಬಳಿ ತನ್ನ ಸಪ್ಪ್ಲೈರ್ ಗಳಿಗೆ ಸರಿಯಾಗಿ ನೀಡಲು ಹಣವಿಲ್ಲ ಎನ್ನುವುದನ್ನ ಸೂಚಿಸುತ್ತದೆ. ಹೀಗಾಗಿ ಎಷ್ಟು ಬಾರಿ ನಾವುಹಣವನ್ನ ನೀಡುತ್ತೇವೆ. ಎಷ್ಟು ಬೇಗ ನೀಡುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಉದಾಹರಣೆ ನೋಡೋಣ. ಒಟ್ಟು ಸಾಲದ ಖರೀದಿ 100, ಆರಂಭಿಕ ಅಕೌಂಟ್ಸ್ ಪೇಯಬಲ್ಸ್ 10, ಅಂತ್ಯದ ಪೇಯಬಲ್ಸ್ 15, ಹೀಗಾಗಿ ಅವೆರೆಜ್ 30/2 =12.5

ಅಕೌಂಟ್ಸ್ ಪೇಯಬಲ್ಸ್ ಟು ಟರ್ನ್ ಓವರ್  = 100/12.5 =8 .

ಹೂಡಿಕೆಗೆ ಮುನ್ನ: ಇದು ತುಂಬಾ ಕಡಿಮೆಯೂ ಇರಬಾರದು. ತುಂಬಾ ಹೆಚ್ಚು ಕೂಡ ಇರಬಾರದು. ಇದು 7 ರಿಂದ 10ರಲ್ಲಿ ಇದ್ದರೆ ಅದು ಉತ್ತಮ ಅನುಪಾತ.

Accounts Payable Turnover Ratio = Net Credit Purchases/Average Accounts Payable.

8) Net profit ratio: ಒಟ್ಟು ಮಾರಾಟದಿಂದ ಎಷ್ಟು ಪ್ರತಿಶತ ಲಾಭವನ್ನ ಸಂಸ್ಥೆ ಕಂಡಿದೆ ಎನ್ನುವುದನ್ನ ಇದು ತಿಳಿಸುತ್ತದೆ. ಇದು ಹೆಚ್ಚಿದಷ್ಟು ಒಳ್ಳೆಯದು. ಕಡಿಮೆಯಾದಷ್ಟೂ, ಕೆಲಸ ಹೆಚ್ಚು ಲಾಭ ಕಡಿಮೆ ಎನ್ನುವುದನ್ನ ಇದು ತೋರಿಸುತ್ತದೆ. ಉದಾಹರಣೆಗೆ ಎಲ್ಲಾ ಖರ್ಚು ತೆರಿಗೆ ಇತ್ಯಾದಿಗಳನ್ನ ಕೊಟ್ಟು ನಂತರ ಉಳಿದ ನಿವ್ವಳ ಲಾಭವನ್ನ ಒಟ್ಟು ಮಾರಾಟದಿಂದ ಭಾಗಿಸಿ ಬರುವ ಭಾಗಲಬ್ದವನ್ನ 100 ರಿಂದ ಗುಣಿಸಿದಾಗ ಬರುವ ಉತ್ತರ ಪ್ರತಿಶತ ಅಥವಾ ಪರ್ಸಂಟೇಜ್ ನಲ್ಲಿರುತ್ತದೆ. ನೂರಕ್ಕೆ ಎಷ್ಟು ಪರ್ಸೆಂಟ್ ಲಾಭ ಎನ್ನುವುದನ್ನ ಇದು ತೋರಿಸುತ್ತದೆ.

ಉದಾಹರಣೆಗೆ ನೆಟ್ ಪ್ರಾಫಿಟ್ 30 ಇದ್ದು ಒಟ್ಟು ಸೇಲ್ಸ್ 100 ಇದ್ದರೆ ಆಗ 0.3 ಭಾಗಲಬ್ಧವಾಗುತ್ತದೆ ಇದನ್ನ 100 ರಿಂದ ಗುಣಿಸಿದರೆ ಆಗ 30% ಲಾಭ ಎನ್ನುವುದು ತಿಳಿಯುತ್ತದೆ.

ಹೂಡಿಕೆಗೆ ಮುನ್ನ: ಹೆಚ್ಚಿದಷ್ಟೂ ಒಳ್ಳೆಯದು. ಆದರೆ ಅದೇವಲಯದ ಇತರ ಎಲ್ಲಾ ಸಂಸ್ಥೆಗಳು ಎಷ್ಟು ಪ್ರತಿಶತ ಲಾಭಮಾಡುತ್ತಿವೆ ಎನ್ನುವುದರ ಬಗ್ಗೆ ಗಮನವಿರಲಿ.

Net Profit Ratio = (Net Profit / Net Sales) × 100.

9) Return on Capital employed: ಸಂಸ್ಥೆ ಹೂಡಿದ ಬಂಡವಾಳದ ಮೇಲೆ ಎಷ್ಟು ಹಣ ವಾಪಸ್ಸು ಬರುತ್ತಿದೆ ಎನ್ನುವುದನ್ನ ಈ ಅನುಪಾತ ತಿಳಿಸುತ್ತದೆ. ಸಾಮಾನ್ಯವಾಗಿ ಇದನ್ನ ಪರ್ಸಂಟೇಜ್ ನಲ್ಲಿ ವ್ಯಕ್ತಪಡಿಸಲಾಗುತ್ತದೆ. ಇದು ಹೆಚ್ಚಿದಷ್ಟೂ ಒಳ್ಳೆಯದು. ಆದರೆ 20 ಪ್ರತಿಶತಕ್ಕಿಂತ ಕಡಿಮೆ ಇದ್ದರೆ ಅದೇನೂ ಅಷ್ಟು ಉತ್ತಮ ರಿಟರ್ನ್ ಅಲ್ಲ ಎನ್ನುವ ಭಾವನೆ ಮಾರುಕಟ್ಟೆಯಲ್ಲಿದೆ.

ebit ಅಂದರೆ ಅರ್ನಿಂಗ್ಸ್ ಬಿಫೋರ್ ಇಂಟರೆಸ್ಟ್ ಅಂಡ್ ಟ್ಯಾಕ್ಸ್. ಕ್ಯಾಪಿಟಲ್ಎಂಫ್ಲೋಯೆಡ್ ಎಂದರೆ ಟೋಟಲ್ ಅಸೆಟ್ ಮೈನಸ್ ಕರೆಂಟ್ ಲಿಯಬಿಲಿಟಿಸ್

ಉದಾಹರಣೆ ನೋಡೋಣ ebit 25 ಇದ್ದು ಕ್ಯಾಪಿಟಲ್ ಎಂಫ್ಲೋಯೆಡ್ 100 ಇದ್ದಾಗ ಬಾಗಲಬ್ದ .0.25 , ಇದನ್ನ ನೂರರಿಂದ ಗುಣಿಸಿದಾಗ 25% ಆಗುತ್ತದೆ.

ಹೂಡಿಕೆಗೆ ಮುನ್ನ: ಈ ಅನುಪಾತ 20% ಗಿಂತ ಹೆಚ್ಚಿದ್ದರೆ ಒಳಿತು .

ROCE = EBIT / Capital Employed× 100.
 
10) Return on investment: Return on investment: ಈ ಅನುಪಾತವನ್ನ ಕೂಡ ಪ್ರತಿಶತದಲ್ಲಿ ಹೇಳಲಾಗುತ್ತದೆ. ನಿವ್ವಳ ಆದಾಯವನ್ನ ಒಟ್ಟು ಇನ್ವೆಸ್ಟ್ಮೆಂಟ್ಮತ್ತು ಅದಕ್ಕಾಗಿ ತಗುಲಿದ ಖರ್ಚನ್ನ ಕೂಡ ಸೇರಿಸಿ ಅದರಿಂದ ಭಾಗಿಸಿ ಬರುವ ಬಾಗಲಬ್ದವನ್ನ 100 ರಿಂದ ಗುಣಿಸಿದಾಗ ಬರುವ ಉತ್ತರವನ್ನ ROI ಎನ್ನಲಾಗುತ್ತದೆ. ಇದು ಹೆಚ್ಚಿದಷ್ಟು ಒಳ್ಳೆಯದು, ಆದರೆ 7 ಪ್ರತಿಶತಕ್ಕಿಂತ ಹೆಚ್ಚಿದ್ದರೆ ಉತ್ತಮ. ಅದಕ್ಕಿಂತ ಜಾಸ್ತಿಯಿರುವುದರ ಮೇಲೆ ಹೂಡಿಕೆ ಮಾಡಬೇಕು. ಇದಕ್ಕಿಂತ ಕಡಿಮೆ ಇದ್ದಲ್ಲಿ ಹೂಡಿಕೆ ಮಾಡುವುದು ಅಷ್ಟು ಸಮಂಜಸವಲ್ಲ .

ಉದಾಹರಣೆ ನೋಡೋಣ. ನೆಟ್ ಇನ್ಕಮ್ 10, ಕಾಸ್ಟ್ ಆಫ್ ಇನ್ವೆಸ್ಟ್ಮೆಂಟ್ 100 ಇದ್ದು ಭಾಗಿಸಿದಾಗ ಬರುವ ಭಾಗಲಬ್ಧ 0.10 ಇದನ್ನ 100 ರಿಂದಗುಣಿಸಿದರೆ 10% ವನ್ನ ROI ಎನ್ನಬಹುದು.

ಹೂಡಿಕೆಗೆ ಮುನ್ನ:  ಭಾಗಲಬ್ಧ 7 ಕ್ಕಿಂತ ಹೆಚ್ಚಿದ್ದರೆ ಹೂಡಿಕೆಗೆ ಉತ್ತಮ .

ROI = Net income / Cost of investment x 100.

ಕೊನೆ ಮಾತು: ರೇಶ್ಯು ಅನಾಲಿಸಿಸ್ ಮತ್ತು ಫಂಡಮೆಂಟಲ್ ಅನಾಲಿಸಿಸ್ ಎನ್ನುವುದು ಸಾಗರವಿದ್ದಂತೆ. ಇಲ್ಲಿ ಹೇಳಿರುವುದು ಮೂಲಭೂತ ವಿಶ್ಲೇಷಣೆಗಳು ಇವುಗಳ ಜೊತೆಗೆ ಇನ್ನಷ್ಟು ವಿಶ್ಲೇಷಣೆಗಳನ್ನ ಸಹ ನಾವು ನೋಡಬಹುದು.


 

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com


Stay up to date on all the latest ಅಂಕಣಗಳು news
Poll
Khalistani militant Hardeep Singh Nijjar

ಸಿಖ್ ಪ್ರತ್ಯೇಕತಾವಾದಿ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪವನ್ನು ನೀವು ನಂಬುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp