
ಮುಂಬಯಿ: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಆತ್ಮಕಥನ ಬಿಡುಗಡೆಯಾಗುತ್ತಿದೆ. 'ಸಚಿನ್' ಆತ್ಮಕಥನದ ಚಿತ್ರ ಬಿಡುಗಡೆಯಾಗುತ್ತಿದ್ದು, ಇದರ ಮೊದಲ ಪೋಸ್ಟರ್ ಅನ್ನು ಮಾಸ್ಟರ್ ಬ್ಲ್ಯಾಸ್ಟರ್ ರಿ ಟ್ವೀಟ್ ಮಾಡಿದ್ದಾರೆ.
'55 ಡೇಸ್ ದಿ ಟ್ರೈನಿಂಗ್, ಒನ್ ಪೇರ್ ಆಫ್ ಟ್ರಸರ್ಸ್. ದಿ ಸಚಿನ್ ಸ್ಟೋರಿ' ಆಧರಿತ ಸಚಿನ್ ಚಿತ್ರದ ಮೊದಲ ಪೋಸ್ಟರ್ ಅನ್ನು ಕ್ರಿಕೆಟಿಗರಾದ ಸುರೇಶ್ ರೈನಾ, ರೋಹಿತ್ ಶರ್ಮಾ ಹಾಗೂ ವಿರೇಂದ್ರ ಶೆಹ್ವಾಗ್ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಈ ಆತ್ಮಕಥನ ಚಿತ್ರದ ಮತ್ತೊಂದು ವಿಶೇಷವೆಂದರೆ ಖುದ್ದು ಸಚಿನ್ ಅವರೇ ನಟಿಸಿದ್ದಾರೆ. ಸುಮಾರು ಐದು ದೇಶಗಳಲ್ಲಿ 30 ತಿಂಗಳ ಕಾಲ ಈ ಚಿತ್ರಚಿತ್ರೀಕರಣಗೊಂಡಿದ್ದು, ವಿಶ್ವಾದ್ಯಂತ 200 ಚಲನಚಿತ್ರ ಮಂದಿರಗಳಲ್ಲಿ ಏಕ ಕಾಲದಲ್ಲಿ ಬಿಡುಗಡೆಯಾಗಲಿದೆ.
ಮುಂಬಯಿ ಮೂಲದ 200ನಾಟ್ಔಟ್ ಈ ಚಿತ್ರವನ್ನು ನಿರ್ಮಿಸಿದ್ದು, ಚಿತ್ರದ ಟ್ರೈಲರ್ ಏಪ್ರಿಲ್ 14ರಂದು ಬಿಡುಗಡೆಯಾಗಲಿದ್ದು, ಈ ಚಿತ್ರದ ಬಿಡುಗಡೆಗಾಗಿ ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ. ಕಿಂಗ್ ಖಾನ್ ಶಾರುಖ್ ಖಾನ್ ಸಹ ಈ ಚಿತ್ರವನ್ನು ನೋಡಲು ಕಾತುರನಾಗಿರುವುದಾಗಿ ಸಚಿನ್‌ಗೆ ಟ್ವೀಟ್ ಮಾಡಿದ್ದಾರೆ.
Advertisement