ಆಮ್ರಪಾಲಿ ಗ್ರೂಪ್ ನ ನಿರ್ದೇಶಕಿ ಸ್ಥಾನ ತೊರೆದ ಸಾಕ್ಷಿ ಧೋನಿ

ಆಮ್ರಪಾಲಿ ಗ್ರೂಪ್ ನ ಬ್ಯ್ರಾಂಡ್ ಅಂಬಾಸಿಡರ್ ಆಗಿದ್ದ ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ ರಾಜೀನಾಮೆ ನೀಡಿದ ನಂತರ ಅವರ ಪತ್ನಿ ಸಾಕ್ಷಿ ಧೋನಿ ಕೂಡ ಆಮ್ರಪಾಲಿ ..
ಸಾಕ್ಷಿ ಧೋನಿ
ಸಾಕ್ಷಿ ಧೋನಿ

ನವದೆಹಲಿ: ಆಮ್ರಪಾಲಿ ಗ್ರೂಪ್ ನ ಬ್ಯ್ರಾಂಡ್ ಅಂಬಾಸಿಡರ್ ಆಗಿದ್ದ ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ ರಾಜೀನಾಮೆ ನೀಡಿದ ನಂತರ ಅವರ ಪತ್ನಿ ಸಾಕ್ಷಿ ಧೋನಿ ಕೂಡ ಆಮ್ರಪಾಲಿ ನಿರ್ದೇಶಕರುಗಳ ಮಂಡಳಿ ಸ್ಥಾನ ತ್ಯಜಿಸಿ ಹೊರಬಂದಿದ್ದಾರೆ.

ಆಮ್ರಪಾಲಿ ಗ್ರೂಪ್ ನಡೆಸುತ್ತಿರುವ ಹೌಸಿಂಗ್ ಪ್ರಾಜೆಕ್ಟ್ ಗಳಿಗೆ ಧೋನಿ ರಾಯಭಾರಿಯಾಗಿದ್ದರು. ಸಾಕ್ಷಿ ನಿರ್ದೇಶಕರುಗಳ ಮಂಡಳಿಯಲ್ಲಿ ಸದಸ್ಯೆಯಾಗಿದ್ದರು.

2009 ರಲ್ಲಿ ಆಮ್ರಪಾಲಿ ಗ್ರೂಪ್ ನೋಯ್ದಾ ಮತ್ತು ದೆಹಲಿಯ ಉಪ ನಗರಗಳಲ್ಲಿ ಸಫೈರ್ ಎಂಬ ಅಪಾರ್ಟ್ ಮೆಂಟ್ ನಿರ್ಮಿಸಿ ಸುಮಾರು 1 ಸಾವಿರ ಫ್ಲ್ಯಾಟ್ ಗಳನ್ನು ಕಟ್ಟಿ ಮಾರಾಟ ಮಾಡಿತ್ತು. ಸುಮಾರು 800 ಕುಟುಂಬಗಳು ಸಫೈರ್ಅಪಾರ್ಟ್ ಮೆಂಟ್ ನ ಫ್ಲ್ಯಾಟ್ ಗಳಿಗೆ ತೆರಳಿದ್ದವು. ಆದರೆ ಬಿಲ್ಡರ್ಸ್ ಅಲ್ಲಿನ ನಿವಾಸಿಗಳಿಗೆ ಅನೇಕ ಸೌಲಭ್ಯಗಳನ್ನು ನೀಡಿರಲಿಲ್ಲ.

ಇದರಿಂದ ಬೇಸತ್ತ ಅಪಾರ್ಟ್ ಮೆಂಟ್ ನಿವಾಸಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಧೋನಿ ಆಮ್ರಪಾಲಿ ಗ್ರೂಪ್ ಆಡಳಿತ ಮಂಡಳಿ ಯನ್ನು ಭೇಟಿ ಮಾಡಿ ನಿವಾಸಿಗಳಿಗೆ ಅಗತ್ಯವಾಗಿರುವ ರಸ್ತೆ, ಎಲೆಕ್ಚ್ರಿಕಲ್, ಸೇರಿದಂತೆ ಬಾಕಿ ಉಳಿದಿರುವ ಸೌಲಭ್ಯಗಳನ್ನು ಪೂರ್ಣಗೊಳಿಸುವಂತೆ ಕೇಳಿದ್ದರು.

ಆದರೆ ಆಮ್ರಪಾಲಿ ಬಿಲ್ಡರ್ಸ್ ಗೆ ಸದ್ಯಕ್ಕೆ ಇರುವ ಆರ್ಥಿಕ ಸಂಕಷ್ಟದಲ್ಲಿ ಈ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಲು ಸಾಧ್ಯವಿಲ್ಲ ಎಂದು ಅರಿತ ಧೋನಿ ಬ್ರ್ಯಾಂಡ್ ಅಂಬಾಸಿಡರ್ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಸಾಕ್ಷಿ ಕೂಡ ಆಮ್ರಪಾಲಿ ಗ್ರೂಪ್ ನ ಬೋರ್ಡ್ ಆಫ್ ಡೈರೆಕ್ಟರ್ಸ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com