ಮಿಚೆಲ್ ಸ್ಟಾರ್ಕ್ ಬದಲಿಗೆ ಆರ್ಸಿಬಿಗೆ ಕ್ರಿಸ್ ಜೋಡಾ೯ನ್

ಗಾಯಾಳು ಸಮಸ್ಯೆಯಿಂದ ಬೆಂಗಳೂರು ರಾಯಲ್ ಚಾಲೆಂಜರ್ಸ್ ಗೆ ಅಲಭ್ಯರಾಗಿರುವ ಮಿಚೆಲ್ ಸ್ಟಾರ್ಕ್ ಬದಲಿಗೆ ಇಂಗ್ಲೆಂಡ್ ನ ಕ್ರಿಸ್ ಜೋರ್ಡಾನ್ ತಂಡವನ್ನು...
ಕ್ರಿಸ್ ಜೋರ್ಡನ್
ಕ್ರಿಸ್ ಜೋರ್ಡನ್
Updated on

ಲ೦ಡನ್: ಗಾಯಾಳು ಸಮಸ್ಯೆಯಿಂದ ಬೆಂಗಳೂರು ರಾಯಲ್ ಚಾಲೆಂಜರ್ಸ್ ಗೆ ಅಲಭ್ಯರಾಗಿರುವ ಮಿಚೆಲ್ ಸ್ಟಾರ್ಕ್ ಬದಲಿಗೆ ಇಂಗ್ಲೆಂಡ್ ನ ಕ್ರಿಸ್ ಜೋರ್ಡಾನ್ ತಂಡವನ್ನು ಸೇರಲಿದ್ದಾರೆ.

ಆರ್ಸಿಬಿ ವಿದೇಶಿ ಆಟಗಾರನ ಕೋಟಾದಲ್ಲಿ ಜೋಡಾ೯ನ್‍ರನ್ನು ತ೦ಡಕ್ಕೆ ಆಯ್ಕೆ ಮಾಡಿಕೊ೦ಡಿದ್ದು, ಐಪಿಎಲ್ ನಲ್ಲಿ ಆಡಲು ಇ೦ಗ್ಲೆ೦ಡ್ ಹಾಗೂ ವೆಲ್ಸ್ ಕ್ರಿಕೆಟ್ ಮ೦ಡಳಿ(ಇಸಿಬಿ) ಜೋಡಾ೯ನ್‍ಗೆ ಅನುಮತಿ ನೀಡಿದ್ದು, ಈ ವಾರಾ೦ತ್ಯದಲ್ಲಿ ತ೦ಡವನ್ನು ಸೇರಿಕೊಳ್ಳಲಿದ್ದಾರೆ.

ಆರ್ಸಿಬಿ ತಂಡದಲ್ಲಿ ವಿಶ್ವ ಶ್ರೇಷ್ಟ ಬ್ಯಾಟ್ಸ್ ಮನ್ ಗಳಿದ್ದು, ಬೌಲರ್ ಗಳ ಕೊರತೆಯಿಂದಾಗಿ ಬೃಹತ್ ಮೊತ್ತ ಕಲೆ ಹಾಕಿದರು ತಂಡ ಗೆಲ್ಲುವಲ್ಲಿ ವಿಫಲವಾಗುತ್ತಿದೆ. ಟೂರ್ನಿಯಲ್ಲಿ ಒಟ್ಟು 5 ಪಂದ್ಯಗಳನ್ನಾಡಿರುವ ಆರ್ಸಿಬಿ 3 ಪಂದ್ಯಗಳಲ್ಲಿ ಸೋತಿದ್ದು, 2 ಪಂದ್ಯಗಳಲ್ಲಿ ಗೆದ್ದು ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com